ಸ್ವೀಡನ್‌, ಕ್ರೊವೇಷಿಯಾಗೆ ಫಿಫಾದಿಂದ ಬರೋಬ್ಬರಿ 49 ಲಕ್ಷ ದಂಡ!

 |  First Published Jul 10, 2018, 1:19 PM IST

ತನ್ನ ದೇಶದ ಅಭಿಮಾನಿಗಳು ಮೈದಾನದಲ್ಲಿ ದಾಂಧಲೆ ನಡೆಸಿದರೆ, ಆ ದೇಶದ ಫುಟ್ಬಾಲ್‌ ಸಂಸ್ಥೆ ದಂಡ ಪಾವತಿಸಬೇಕಿದೆ. ಅದರಂತೆ ಅರ್ಜೆಂಟೀನಾ ಈ ಬಾರಿ ಅತಿಹೆಚ್ಚು ಅಂದರೆ 73 ಲಕ್ಷ ರುಪಾಯಿ ದಂಡ ಕಟ್ಟಿದೆ. ಈ ಟೂರ್ನಿಯಲ್ಲಿ ದಂಡದ ರೀತಿಯಲ್ಲಿ ಫಿಫಾ ಬರೋಬ್ಬರಿ 3.34 ಕೋಟಿ ವಸೂಲಿ ಮಾಡಿದೆ.

ಮಾಸ್ಕೋ[ಜು.10]: ಫುಟ್ಬಾಲ್‌ ವಿಶ್ವಕಪ್‌ ಟೂರ್ನಿಯ ಪಂದ್ಯಗಳಲ್ಲಿ ಅನುಮತಿಯಿಲ್ಲದ ಕಾಲ್ಚೀಲ ಧರಿಸಿದ್ದಕ್ಕೆ ಸ್ವೀಡನ್‌ ಆಟಗಾರರಿಗೆ ಫಿಫಾ 70000 ಸ್ವಿಸ್‌ ಫ್ರಾಂಕ್ಸ್‌ (ಅಂದಾಜು .49 ಲಕ್ಷ) ದಂಡ ವಿಧಿಸಿದೆ. 

ಇದೇ ವೇಳೆ ಪ್ರಾಯೋಜಕತ್ವ ನೀಡದ ಸಂಸ್ಥೆಯ ಪಾನೀಯವನ್ನು ಮೈದಾನದಲ್ಲಿ ಬಳಸಿದ್ದಕ್ಕಾಗಿ ಕ್ರೊವೇಷಿಯಾದ ಆಟಗಾರರಿಗೂ ಸಹ 49 ಲಕ್ಷ ರುಪಾಯಿ ದಂಡ ವಿಧಿಸಿರುವುದಾಗಿ ಫಿಫಾ ತಿಳಿಸಿದೆ. 

Latest Videos

click me!