ಪಾಂಡ್ಯ,ರಾಹುಲ್‌ಗಿಂತ ದೊಡ್ಡ ತಪ್ಪು ಮಾಡಿದವ್ರು ಇನ್ನೂ ತಂಡದಲ್ಲಿದ್ದಾರೆ:ಶ್ರೀಶಾಂತ್!

By Web Desk  |  First Published Jan 14, 2019, 9:11 PM IST

ಟೀಂ ಇಂಡಿಯಾದ ವಿವಾದಿತ  ವೇಗಿ ಎಸ್ ಶ್ರೀಶಾಂತ್ ಹೊಸ ಬಾಂಬ್ ಸಿಡಿಸಿದ್ದಾರೆ.  ಹಾರ್ದಿಕ್ ಪಾಂಡ್ಯ ಹಾಗೂ ರಾಹುಲ್ ಅಮಾನತಿನ ಬೆನ್ನಲ್ಲೇ ಶ್ರೀ ಹೇಳಿಕೆ ಇದೀಗ ಟೀಂ ಇಂಡಿಯಾದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸುವ ಸಾಧ್ಯತೆ ದಟ್ಟವಾಗಿದೆ.


ಮುಂಬೈ(ಜ.14): ಅಸಭ್ಯ ಹೇಳಿಕೆಯಿಂದ ಟೀಂ ಇಂಡಿಯಾಂದಿ ಅಮಾನತಾಗಿರುವ ಹಾರ್ದಿಕ್ ಪಾಂಡ್ಯ ಹಾಗೂ ಕೆಎಲ್ ರಾಹುಲ್ ಮಾತು ಅಕ್ಷರಶಃ ತಪ್ಪು ಎಂದು ವಿವಾದಿತ ವೇಗಿ ಎಸ್ ಶ್ರೀಶಾಂತ್ ಹೇಳಿದ್ದಾರೆ. ಇದೇ ವೇಳೆ ಪಾಂಡ್ಯ ಹಾಗೂ ರಾಹುಲ್‌ಗಿಂತ ದೊಡ್ಡ ತಪ್ಪು ಮಾಡಿದವರು ಇನ್ನೂ ತಂಡದಲ್ಲಿದ್ದಾರೆ ಎಂದು ಶ್ರೀಶಾಂತ್ ಹೊಸ ಬಾಂಬ್ ಸಿಡಿಸಿದ್ದಾರೆ.

ಇದನ್ನೂ ಓದಿ: ಟೀಂ ಇಂಡಿಯಾ ಕ್ರಿಕೆಟಿಗರ ಕಪ್ ಆಫ್ ಟಿ - ಟ್ರೋಲ್ ಆದ ಹಾರ್ದಿಕ್ ಪಾಂಡ್ಯ!

Tap to resize

Latest Videos

undefined

ಪಾಂಡ್ಯ-ರಾಹುಲ್‌ಗೆ ತಮ್ಮ ತಪ್ಪಿನ ಅರಿವಾಗಿದೆ. ಶೀಘ್ರದಲ್ಲೇ ವಿಶ್ವಕಪ್ ಟೂರ್ನಿ ಮುಂದಿದೆ. ಹೀಗಾಗಿ ಬಿಸಿಸಿಐ ಈ ಇಬ್ಬರೂ ಕ್ರಿಕೆಟಿಗರಿಗೆ ಆಡೋ ಅವಕಾಶ ಮಾಡಿಕೊಡಬೇಕು. ರಾಹುಲ್ ಹಾಗೂ ಪಾಂಡ್ಯ ಮ್ಯಾಚ್ ವಿನ್ನರ್‌ಗಳು ಎಂದು ಶ್ರೀ ಹೇಳಿದ್ದಾರೆ. ಕ್ರಿಕೆಟಿಗನಿಗೆ ಅಮಾನತು ಶಿಕ್ಷೆಗಿಂತ ಮಿಗಲಾದ ಶಿಕ್ಷೆ ಮತ್ತೊಂದಿಲ್ಲ. ಆ ಸಂಕಷ್ಟ ನನಗೆ ತಿಳಿದಿದೆ ಎಂದು ಶ್ರೀ ಹೇಳಿದ್ದಾರೆ.

ಇದನ್ನೂ ಓದಿ: ಹಾರ್ದಿಕ್ ಪಾಂಡ್ಯಾಗೆ ಮುಂಬೈ ಪೊಲೀಸರಿಂದ ಗೂಗ್ಲಿ!

ಹಲವು ಕ್ರಿಕೆಟಿಗರು ಇದಕ್ಕಿಂತ ದೊಡ್ಡ ತಪ್ಪು ಮಾಡಿದ್ದಾರೆ. ಅವರೆಲ್ಲ ಈಗ ಪಾಂಡ್ಯ ಹಾಗೂ ರಾಹುಲ್ ಪ್ರಕರಣದ ಕುರಿತು ಮಾತನಾಡುತ್ತಿದ್ದಾರೆ ಎಂದು ಹೆಸರು ಹೇಳದೇ ಪರೋಕ್ಷವಾಗಿ ಆರೋಪ ಮಾಡಿದರು. ಶೀಘ್ರದಲ್ಲೇ ನನ್ನ ಮೇಲಿನ ನಿಷೇಧ ತೆರವಾಗಲಿದೆ. ಹೀಗಾದಲ್ಲಿ ಅದಕ್ಕಿಂತ ಸಂತಸದ ವಿಚಾರ ಮತ್ತೊಂದಿಲ್ಲ ಎಂದು ಶ್ರೀ ಹೇಳಿದ್ದಾರೆ.

click me!