ಟೀಂ ಇಂಡಿಯಾ ಕ್ರಿಕೆಟಿಗರ ಕಪ್ ಆಫ್ ಟಿ - ಟ್ರೋಲ್ ಆದ ಹಾರ್ದಿಕ್ ಪಾಂಡ್ಯ!

Published : Jan 14, 2019, 04:47 PM IST
ಟೀಂ ಇಂಡಿಯಾ ಕ್ರಿಕೆಟಿಗರ ಕಪ್ ಆಫ್ ಟಿ - ಟ್ರೋಲ್ ಆದ ಹಾರ್ದಿಕ್ ಪಾಂಡ್ಯ!

ಸಾರಾಂಶ

ಅಸಭ್ಯ ಹೇಳಿಕೆಯಿಂದ ಅಮಾನತಾಗಿರುವು ಹಾರ್ದಿಕ್ ಪಾಂಡ್ಯ ಇದೀಗ ಹಂತ ಹಂತದಲ್ಲೂ ಟಾರ್ಗೆಟ್ ಆಗುತ್ತಿದ್ದಾರೆ. ಮುಂಬೈ ಪೊಲೀಸರು ಟ್ವೀಟ್ ಮೂಲಕ ಗೂಗ್ಲಿ ಎಸೆದ ಬೆನ್ನಲ್ಲೇ ಇದೀಗ ಕೇದಾರ್ ಜಾದವ್ ಕಪ್ ಆಫ್ ಟಿ ಪೋಸ್ಟ್‌ಗೂ ಪಾಂಡ್ಯ ಟ್ರೋಲ್ ಆಗಿದ್ದಾರೆ.

ಆಡಿಲೇಡ್(ಜ.14): ಆಸ್ಟ್ರೇಲಿಯಾ ವಿರುದ್ದದ ಎರಡನೇ ಏಕದಿನ ಪಂದ್ಯಕ್ಕೆ ಸಜ್ಜಾಗುತ್ತಿರುವ ಟೀಂ ಇಂಡಿಯಾ ಬಿಡುವಿನ ಸಮಯದಲ್ಲಿ ಟಿ ಕುಡಿದ ಫೋಟೋವನ್ನ ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್ ಮಾಡಿದೆ. ಎಂ.ಎಸ್.ಧೋನಿ, ಶಿಖರ್ ಧವನ್ ಹಾಗೂ ಕೇದಾರ್ ಜಾದವ್ ಟಿ ಕುಡಿಯುತ್ತಿರುವ ಫೋಟೋ ಅಪ್‌ಲೋಡ್ ಮಾಡಿದ್ದಾರೆ. ಈ ಫೋಟೋಗೆ ಹಾರ್ದಿಕ್ ಪಾಂಡ್ಯ ಟ್ರೋಲ್ ಆಗಿದ್ದಾರೆ.

 

 

ಇದನ್ನೂ ಓದಿ: ಹಾರ್ದಿಕ್ ಪಾಂಡ್ಯಾಗೆ ಮುಂಬೈ ಪೊಲೀಸರಿಂದ ಗೂಗ್ಲಿ!

ಕೇದಾರ್ ಜಾದವ್ ಟ್ವಿಟರ್ ಮೂಲಕ ಈ ಫೋಟೋ ಪೋಸ್ಟ್ ಮಾಡಿದ್ದಾರೆ. ಇಷ್ಟೇ ಅಲ್ಲ ಒಂದು ಕಪ್ ಟಿ ಎಲ್ಲವನ್ನೂ ಉತ್ತಮಪಡಿಸುತ್ತೆ ಎಂದು ಟ್ವೀಟ್ ಮಾಡಿದ್ದಾರೆ. ಜಾದವ್ ಟ್ವೀಟ್ ಮಾಡಿದ್ದೇ ತಡ, ಹಾರ್ಧಿಕ್ ಪಾಂಡ್ಯ ಟಾಂಗ್ ನೀಡಲು ಸೂಕ್ತ ಟ್ವೀಟ್ ಎಂದು ಟ್ವಿಟರಿಗರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಹಾರ್ದಿಕ್ ಪಾಂಡ್ಯಾ ಕಾಫಿ ವಿಥ್ ಕರಣ್ ಶೋ ಕಾರ್ಯಕ್ರಮದಲ್ಲಿ ಅಸಭ್ಯ ಹೇಳಿಕೆ ನೀಡಿ ಟೀಂ ಇಂಡಿಯಾದಿಂದ ಅಮಾನತಾಗಿದ್ದಾರೆ. ಇದೀಗ ಟೀಂ ಇಂಡಿಯಾ ಕ್ರಿಕೆಟಿಗರ ಕಪ್ ಆಫ್ ಟಿಗೆ ಪಾಂಡ್ಯ ಗುರಿಯಾಗಿದ್ದಾರೆ.

 

 

 

 

 

 

 

 

 

 

 

 

 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಆರೆಂಜ್ ಕ್ಯಾಪ್ ರೇಸ್: ಟಾಪ್-10 ಪಟ್ಟಿಯೊಳಗೆ ಎಂಟ್ರಿಕೊಟ್ಟ ಸಂಜು ಸ್ಯಾಮ್ಸನ್!
IPL 2026: ನಿನ್ನೆ ನಡೆದ ಮುಂಬೈ ಇಂಡಿಯನ್ಸ್ - ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಮ್ಯಾಚ್ ಗೆದ್ದಿದ್ದು ಯಾರು?