’ಕಾಫಿ’ಗೆ ಬೆಲೆತೆತ್ತ ರಾಹುಲ್‌, ಪಾಂಡ್ಯ..!

By Web Desk  |  First Published Apr 21, 2019, 9:34 AM IST

’ಕಾಫಿ ವಿತ್ ಕರಣ್’ ಕಾರ್ಯಕ್ರಮದಲ್ಲಿ ಭಾಗವಹಿಸಿ ವಿವಾದಾತ್ಮಕ ಹೇಳಿಕೆ ನೀಡಿ ಸುದ್ದಿಯಾಗಿದ್ದ ಹಾರ್ದಿಕ್ ಪಾಂಡ್ಯ ಹಾಗೂ ಕೆ.ಎಲ್ ರಾಹುಲ್ ಇದೀಗ ಬೆಲೆ ತೆತ್ತಿದ್ದಾರೆ. ಏನಿದು ಸ್ಟೋರಿ ನೀವೇ ನೋಡಿ.. 


ನವದೆಹಲಿ[ಏ.21]: ಕಾಫಿ ವಿತ್‌ ಕರಣ್‌ TV ಶೋನಲ್ಲಿ ಮಹಿಳಾ ಅವಹೇಳನ ನಡೆಸಿ ವಿವಾದ ಸೃಷ್ಟಿಸಿದ್ದ ಭಾರತೀಯ ಕ್ರಿಕೆಟಿಗರಾದ ಕೆ.ಎಲ್‌.ರಾಹುಲ್‌, ಹಾರ್ದಿಕ್‌ ಪಾಂಡ್ಯಗೆ ಬಿಸಿಸಿಐ ಸಾರ್ವಜನಿಕ ತನಿಖಾಧಿಕಾರಿ ಡಿ.ಕೆ.ಜೈನ್‌ ತಲಾ 20 ಲಕ್ಷ ದಂಡ ವಿಧಿಸಿದ್ದಾರೆ.

’ಕಾಫಿ ವಿತ್ ಕರುಣ್’: ಇದೇ ಮೊದಲ ಬಾರಿಗೆ ತುಟಿ ಬಿಚ್ಚಿದ ಕರುಣ್ ಹೇಳಿದ್ದೇನು?

Latest Videos

undefined

ಈ ಬೆಳವಣಿಗೆ ಕುರಿತು ಬಿಸಿಸಿಐ ತನ್ನ ವೆಬ್‌ಸೈಟ್‌ನಲ್ಲಿ ಸುದ್ದಿ ಪ್ರಕಟಿಸಿದ್ದು, 5 ಏಕದಿನ ಪಂದ್ಯಗಳಿಗೆ ಅಮಾನತುಗೊಂಡಿದ್ದ ಇಬ್ಬರ ವಿರುದ್ಧ ಮತ್ತ್ಯಾವುದೇ ಕ್ರಮ ಕೈಗೊಳ್ಳುವುದಿಲ್ಲ. ಪ್ರಕರಣ ಮುಕ್ತಾಯಗೊಂಡಿದೆ ಎಂದು ತಿಳಿಸಿದೆ. ರಾಹುಲ್‌ ಹಾಗೂ ಪಾಂಡ್ಯಗೆ, ‘ಭಾರತ್‌ ಕೆ ವೀರ್‌’ ಮೊಬೈಲ್‌ ಆ್ಯಪ್‌ ಮೂಲಕ ಪ್ಯಾರಾ ಮಿಲಿಟರಿಯ 10 ಹುತಾತ್ಮ ಯೋಧರ ಪತ್ನಿಯರಿಗೆ ತಲಾ 1 ಲಕ್ಷ ಸಹಾಯಧನ ನೀಡುವಂತೆ ಸೂಚಿಸಲಾಗಿದೆ. ಇನ್ನುಳಿದ .10 ಲಕ್ಷವನ್ನು ಭಾರತ ಅಂಧರ ಕ್ರಿಕೆಟ್‌ ಸಂಸ್ಥೆ (ಸಿಎಬಿ) ಖಾತೆಗೆ ಜಮೆ ಮಾಡುವಂತೆ ತನಿಖಾಧಿಕಾರಿ ಆದೇಶಿಸಿದ್ದಾರೆ. 

16 ಭಾಷೆಗಳಲ್ಲಿ ತಮ್ಮ ಹೆಸರು ಟ್ಯಾಟು ಹಾಕಿಸಿಕೊಂಡು ಟ್ರೋಲ್ ಆದ ಪಾಂಡ್ಯ..!

ದಂಡ ಪಾವತಿಸಲು ಏ.19ರಿಂದ ಆರಂಭಗೊಂಡು 4 ವಾರಗಳ ಒಳಗೆ ಗಡುವು ನೀಡಲಾಗಿದೆ. ಒಂದೊಮ್ಮೆ ಅಷ್ಟರಲ್ಲಿ ಕಟ್ಟದಿದ್ದಲ್ಲಿ ಪಂದ್ಯದ ಸಂಭಾವನೆಯಲ್ಲಿ ಕಡಿತ ಮಾಡಲಾಗುವುದದು ಎಂದು ಎಚ್ಚರಿಸಲಾಗಿದೆ.

click me!