ಗೇಲ್ ಮಿಂಚು: ಡೆಲ್ಲಿಗೆ ಸವಾಲಿನ ಗುರಿ

By Web DeskFirst Published Apr 20, 2019, 10:04 PM IST
Highlights

ಟಾಸ್ ಗೆದ್ದು ಫಿಲ್ಡಿಂಗ್ ಆಯ್ದುಕೊಂಡ ಡೆಲ್ಲಿ ನಾಯಕನ ನಿರ್ಧಾರ ಸಮರ್ಥಿಸಿಕೊಳ್ಳುವಂತೆ ಬೌಲಿಂಗ್ ಮಾಡಿದ ಸಂದೀಪ್ ಲ್ಯಾಮಿಚ್ಚಾನೆ ತಾವೆಸೆದ ಮೊದಲ ಓವರ್’ನಲ್ಲೇ ಕೆ.ಎಲ್ ರಾಹುಲ್[12] ಬಲಿ ಪಡೆಯುವಲ್ಲಿ ಸಫಲವಾದರು.

ನವದೆಹಲಿ[ಏ.20]: ಕೆರಿಬಿಯನ್ ದೈತ್ಯ ಪ್ರತಿಭೆ ಕ್ರಿಸ್ ಗೇಲ್ ಆಕರ್ಷಕ ಅರ್ಧಶತಕದ ನೆರವಿನಿಂದ ಕಿಂಗ್ಸ್ ಇಲೆವನ್ ಪಂಜಾಬ್ ತಂಡವು 163 ರನ್ ಬಾರಿಸಿದ್ದು, ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಸವಾಲಿನ ಗುರಿ ನೀಡಿದೆ.
ಟಾಸ್ ಗೆದ್ದು ಫಿಲ್ಡಿಂಗ್ ಆಯ್ದುಕೊಂಡ ಡೆಲ್ಲಿ ನಾಯಕನ ನಿರ್ಧಾರ ಸಮರ್ಥಿಸಿಕೊಳ್ಳುವಂತೆ ಬೌಲಿಂಗ್ ಮಾಡಿದ ಸಂದೀಪ್ ಲ್ಯಾಮಿಚ್ಚಾನೆ ತಾವೆಸೆದ ಮೊದಲ ಓವರ್’ನಲ್ಲೇ ಕೆ.ಎಲ್ ರಾಹುಲ್[12] ಬಲಿ ಪಡೆಯುವಲ್ಲಿ ಸಫಲವಾದರು. ಮತ್ತೋರ್ವ ಕನ್ನಡಿಗ ಮಯಾಂಕ್ ಅಗರ್’ವಾಲ್[2] ಕೂಡಾ ಲ್ಯಾಮಿಚ್ಚಾನೆ ಬೌಲಿಂಗ್’ನಲ್ಲಿ ವಿಕೆಟ್ ಒಪ್ಪಿಸಿದರು. ಇದರ ಬೆನ್ನಲ್ಲೇ ಮಿಲ್ಲರ್[7] ಕೂಡಾ ಪೆವಿಲಿಯನ್ ಸೇರಿಕೊಂಡಾಗ ಪಂಜಾಬ್ 7.1 ಓವರ್’ಗಳಲ್ಲಿ 3 ವಿಕೆಟ್ ಕಳೆದುಕೊಂಡು 61 ರನ್ ಬಾರಿಸಿತ್ತು. ಒಂದು ಕಡೆ ನಿರಂತರ ವಿಕೆಟ್ ಬೀಳುತ್ತಿದ್ದರೂ ಮತ್ತೊಂದೆಡೆ ದಿಟ್ಟ ಹೋರಾಟ ನಡೆಸಿದ ಗೇಲ್ ಕೇವಲ 37 ಎಸೆತಗಳಲ್ಲಿ 6 ಬೌಂಡರಿ ಹಾಗೂ 5 ಸಿಕ್ಸರ್ ಸಹಿತ 69 ರನ್ ಚಚ್ಚಿದರು. ಕೊನೆಯಲ್ಲಿ ಮನ್ದೀಪ್ ಸಿಂಗ್[30], ಹರ್ಪ್ರೀತ್ ಬ್ರಾರ್ [20] ರನ್ ಬಾರಿಸುವ ತಂಡದ ಮೊತ್ತವನ್ನು 150ರ ಗಡಿ ದಾಟಿಸಿದರು.
ಡೆಲ್ಲಿ ಪರ ಲ್ಯಾಮಿಚ್ಚಾನೆ 3 ವಿಕೆಟ್ ಪಡೆದರೆ, ರಬಾಡ ಹಾಗೂ ಅಕ್ಷರ್ ಪಟೇಲ್ ತಲಾ 2 ವಿಕೆಟ್ ಪಡೆದರು.
ಸಂಕ್ಷಿಪ್ತ ಸ್ಕೋರ್
ಕಿಂಗ್ಸ್ ಇಲೆವನ್ ಪಂಜಾಬ್: 163/7
ಗೇಲ್: 69
ಲ್ಯಾಮಿಚ್ಚಾನೆ: 40/3

click me!