
ಚಂಡೀಗಢ(ಮೇ.01): ‘‘ಇದು ಅತ್ಯಂತ ಸಂತಸದ ಸಮಯ. ಅಂದು ಆರಂಭಗೊಂಡ ಐಪಿಎಲ್, ಇಂದು ಜಾಗತಿಕ ಬ್ರ್ಯಾಂಡ್ ಆಗಿದೆ. ಇದೊಂದು ಅಭೂತಪೂರ್ವ ಪಯಣ'' ಎಂದು ಕಿಂಗ್ ಇಲೆವೆನ್ ತಂಡ ಸಹ ಮಾಲಕಿ ಪ್ರೀತಿ ಜಿಂಟಾ ಸಂತಸ ವ್ಯಕ್ತಪಡಿಸಿದ್ದಾರೆ.
‘‘ನಾವು ಖಂಡಿತವಾಗಿಯೂ ಲಲಿತ್ ಮೋದಿ ಅವರಿಗೆ ಅಭಿನಂದನೆಗಳನ್ನು ಸಲ್ಲಿಸಲೇಬೇಕು. ಕೆಲವು ಸಂದರ್ಭಗಳಲ್ಲಿ ಏಕಾಂಗಿಯಾಗಿ ಐಪಿಎಲ್ ಅನ್ನು ಮುನ್ನಡೆಸಿದರು. ಅವರೊಬ್ಬ ಚಾಣಾಕ್ಷ. ಒಂದೊಮ್ಮೆ ಮಾಲೀಕರು ಏನಾದರೂ ಗೊಂದಲಕ್ಕೆ ಈಡಾದರೆ, ಸಮಸ್ಯೆ ಉದ್ಭವಿಸಿದರೆ ಐದೇ ನಿಮಿಷದಲ್ಲಿ ಪರಿಹರಿಸುತ್ತಿದ್ದರು'' ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಐಪಿಎಲ್‌ನಿಂದ ಸ್ಥಳೀಯ ಯುವ ಪ್ರತಿಭೆಗಳು ಬೆಳಕಿಗೆ ಬಂದರು. ದೇಸಿ ಆಟಗಾರರಿಗೆ ಒಳ್ಳೆಯ ಅವಕಾಶಗಳು ಲಭ್ಯವಾಯಿತು. ಇದು ಭಾರತ ತಂಡದ ಪ್ರದರ್ಶನದ ಮೇಲೂ ಸಕಾರಾತ್ಮಕ ಪರಿಣಾಮ ಬೀರಿದೆ ಎಂದು ಪ್ರೀತಿ ಹೇಳಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.