ಚಂಡು ವಿರೂಪ ಪ್ರಕರಣ : ಸಚಿನ್, ಅಫ್ರಿದಿ, ದ್ರಾವಿಡ್ ಕೂಡ ಸಿಲುಕಿದ್ದರು !

By Suvarna Web DeskFirst Published Mar 26, 2018, 7:56 PM IST
Highlights

ತೃತೀಯ ಟೆಸ್ಟ್ 3ನೇ ದಿನದಾಟದ ಚಹಾ ವಿರಾಮಕ್ಕೆ ಸ್ವಲ್ಪ ಸಮಯಕ್ಕೆ ಮೊದಲು ಈ ಘಟನೆ ನಡೆದಿದೆ. ಈ ವೇಳೆ ಚೆಂಡನ್ನು ಪಡೆದುಕೊಂಡ ಬ್ಯಾನ್‌ಕ್ರಾಫ್ಟ್, ನಡು ಬೆರಳಿನಲ್ಲಿ ಹಳದಿ ಬಣ್ಣದ ಟೇಪ್‌ವೊಂದನ್ನು ಇರಿಸಿಕೊಂಡು ಅದನ್ನು ಚೆಂಡಿಗೆ

ಉಜ್ಜಿದ್ದಾರೆ.

1) 1976-77ರಲ್ಲಿ ಇಂಗ್ಲೆಂಡ್ ತಂಡ ಭಾರತ ಪ್ರವಾಸ ಕೈಗೊಂಡಿದ್ದ ವೇಳೆ ಜಾನ್ ಲಿವರ್ ಚೆಂಡಿಗೆ ವ್ಯಾಸ್‌ಲಿನ್ ತಿಕ್ಕುವ ಮೂಲಕ ಚೆಂಡಿನ ಹೊಳಪನ್ನು ಹೆಚ್ಚಿಸಲು ಯತ್ನಿಸಿ ವಿವಾದಕ್ಕೆ ಸಿಲುಕಿದ್ದರು.

2) 2001ರಲ್ಲಿ ಪೋರ್ಟ್ ಎಲಿಜಬೆತ್‌ನಲ್ಲಿದ. ಆಫ್ರಿಕಾ ವಿರುದ್ಧ ಟೆಸ್ಟ್ ಪಂದ್ಯ ನಡೆಯುವ ವೇಳೆ ಚೆಂಡು ವಿರೂಪಗೊಳಿಸಿದ ರೋಪಕ್ಕೆ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್ ಗುರಿ ಆಗಿದ್ದರು. ಬಳಿಕ ಅದು ಸಾಬೀತಾಗದ ಕಾರಣ ಅವರಿಗೆ ವಿಧಿಸಿದ್ದ ಶಿಕ್ಷೆ ಹಿಂಪಡೆಯಲಾಗಿತ್ತು.

3) ಚೆಂಡು ವಿರೂಪಗೊಳಿಸಿ ಶಿಕ್ಷೆಗೆ ಗುರಿಯಾದ ಮೊದಲ ಬೌಲರ್ ಪಾಕ್‌ನ ವಕಾರ್ ಯೂನಿಸ್. 2000ರಲ್ಲಿ ಪಾಕ್, ಲಂಕಾ ಪ್ರವಾಸ ಕೈಗೊಂಡಿದ್ದಾಗ ಯೂನಿಸ್ ತಮ್ಮ ಬೆರಳನ್ನು ಬಳಸಿ ಚೆಂಡನ್ನು ವಿರೂಪಗೊಳಿಸಿದ್ದರು.

4) 2010ರಲ್ಲಿ ಪಾಕ್‌ನ ಶಾಹೀದ್ ಅಫ್ರಿದಿ, ಆಸ್ಟ್ರೇಲಿಯಾ ವಿರುದ್ಧದ ಏಕದಿನದ ವೇಳೆ ಚೆಂಡನ್ನು ಕಚ್ಚಿ, ಶಿಕ್ಷೆಗೆ ಗುರಿಯಾಗಿದ್ದರು. ಅಫ್ರಿದಿಗೆ 2 ಟಿ20 ಪಂದ್ಯಗಳ ನಿಷೇಧ ಹೇರಲಾಗಿತ್ತು.

5) 2004ರಲ್ಲಿ ಜಿಂಬಾಬ್ವೆ ವಿರುದ್ಧದ ಪಂದ್ಯದಲ್ಲಿ ಚುಯಿಂಗ್ ಗಮ್'ನ್ನು ಚೆಂಡಿಗೆ ತಿಕ್ಕಿದ ಕಾರಣ ರಾಹುಲ್ ದ್ರಾವಿಡ್‌ಗೆ ದಂಡ ವಿಧಿಸಲಾಗಿತ್ತು.

click me!