
ತೃತೀಯ ಟೆಸ್ಟ್ 3ನೇ ದಿನದಾಟದ ಚಹಾ ವಿರಾಮಕ್ಕೆ ಸ್ವಲ್ಪ ಸಮಯಕ್ಕೆ ಮೊದಲು ಈ ಘಟನೆ ನಡೆದಿದೆ. ಈ ವೇಳೆ ಚೆಂಡನ್ನು ಪಡೆದುಕೊಂಡ ಬ್ಯಾನ್‌ಕ್ರಾಫ್ಟ್, ನಡು ಬೆರಳಿನಲ್ಲಿ ಹಳದಿ ಬಣ್ಣದ ಟೇಪ್‌ವೊಂದನ್ನು ಇರಿಸಿಕೊಂಡು ಅದನ್ನು ಚೆಂಡಿಗೆ ಉಜ್ಜಿದ್ದಾರೆ. ಬಳಿಕ ಆ ವಸ್ತುವನ್ನು ಮೆತ್ತಗೆ ಮತ್ತೆ ಜೀಬಿಗಿಳಿಸಿದ್ದಾರೆ. ಇದು ನೇರಪ್ರಸಾರದಲ್ಲಿ ದಾಖಲಾಗಿದೆ. ಇದು ಡ್ರೆಸಿಂಗ್ ಕೊಠಡಿಯಲ್ಲಿ ಆಸೀಸ್ ಕೋಚ್ ಡ್ಯಾರೆನ್ ಲೆಹ್ಮನ್ ಗಮನಕ್ಕೆ ಬಂದಿದ್ದು, ಅವರು ಡಗೌಟ್‌ನಲ್ಲಿ ಕುಳಿತಿದ್ದ ಹ್ಯಾಂಡ್ಸ್ ಕೊಂಬ್'ಗೆ ವಾಕಿಟಾಕಿ ಮೂಲಕ ಮಾಹಿತಿ ನೀಡಿದ್ದಾರೆ. ಬಳಿಕ ಮೈದಾನಕ್ಕೆ ಆಗಮಿಸಿದ ಹ್ಯಾಂಡ್ಸ್‌ಕೊಂಬ್ ಈ ವಿಷಯವನ್ನು ಬ್ಯಾನ್ ಕ್ರಾಫ್ಟ್ ಗಮನಕ್ಕೆ ತಂದಿದ್ದಾರೆ.
ತಕ್ಷಣವೇ ಬ್ಯಾನ್‌ಕ್ರಾಫ್ಟ್, ತಮ್ಮ ಜೇಬಿನಲ್ಲಿದ್ದ ಹಳದಿ ಬಣ್ಣದ ವಸ್ತುವನ್ನು ಪ್ಯಾಂಟ್ ಒಳಗೆ ಬಚ್ಚಿಟ್ಟುಕೊಂಡಿದ್ದಾರೆ. ಬಳಿಕ ಟಿವಿ ಅಂಪೈರ್‌ಗಳು ಇದರ ಬಗ್ಗೆ ಮಾಹಿತಿ ನೀಡಿದಾಗ, ಮೈದಾನದಲ್ಲಿದ್ದ ಅಂಪೈರ್‌ಗಳು ಈ ಬಗ್ಗೆ ಬ್ಯಾನ್‌ಕ್ರಾಫ್ಟ್ರ ವಿಚಾರಣೆ ನಡೆಸಿದ್ದರು. ಈ ವೇಳೆ ಬ್ಯಾನ್‌ಕ್ರಾಫ್ಟ್ ತಮ್ಮ ಒಳಜೇಬಿನಿಂದ ಹಳದಿ ಬಣ್ಣದ ಟೇಪ್‌ನಂತಿದ್ದ ವಸ್ತುವನ್ನು ತೆಗೆದು ಅಂಪೈರ್‌ಗಳಿಗೆ ತೋರಿಸಿದ್ದರು. ತದನಂತರ ಅಂಪೈರ್‌ಗಳು ಯಾವುದೇ ಕ್ರಮಕ್ಕೆ ಮುಂದಾಗದೇ ಅದೇ ಚೆಂಡಿನಲ್ಲಿ ಆಟ ಮುಂದುವರಿಸಿದ್ದರು. ಮೈದಾನದಲ್ಲಿದ್ದ ದೊಡ್ಡ ಸ್ಕ್ರೀನ್‌ಗಳಲ್ಲಿ ಈ ದೃಶ್ಯಾವಳಿಗಳು ಬಿತ್ತರಗೊಂಡಿದ್ದವು. ಚೆಂಡು ಬದಲಿಸದ ಅಂಪೈರ್‌ಗಳ ನಿರ್ಧಾರ ಸಹ ತೀವ್ರ ಟೀಕೆಗೆ ಗುರಿಯಾಗಿತ್ತು.
ಬಾಲ್ ಟ್ಯಾಂಪರಿಂಗ್ ಅಂದರೇನು ?
ಚೆಂಡಿನ ನೈಜ ಸ್ಥಿತಿಯನ್ನು ವಿರೂಪಗೊಳಿಸುವುದನ್ನು ಬಾಲ್ ಟ್ಯಾಂಪರಿಂಗ್ ಎನ್ನುತ್ತಾರೆ. ಚೆಂಡಿನ ದಾರದ ಎಳೆಗಳನ್ನು ತುಂಡರಿಸುವುದು, ಅದರ ಹೊಳಪನ್ನು ಹೆಚ್ಚಿಸುವುದು, ಹೊಳಪು ಕಳೆದುಕೊಳ್ಳುವಂತೆ ಮಾಡುವುದು ಹೀಗೆ ಚೆಂಡಿನ ರೂಪಕ್ಕೆ ಧಕ್ಕೆಯನ್ನುಂಟು ಮಾಡುವ ಕೃತ್ಯಕ್ಕೆ ಬಾಲ್ ಟ್ಯಾಂಪರಿಂಗ್ ಎನ್ನಲಾಗುತ್ತದೆ. ಹೀಗೆ ಹೊಳಪು ಕಳೆದುಕೊಳ್ಳುವ ಚೆಂಡು ರಿವರ್ಸ್ ಸ್ವಿಂಗ್‌ಗೆ ನೆರವು ನೀಡುತ್ತದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.