ಐಪಿಎಲ್: ರಾಜಸ್ಥಾನ ತಂಡಕ್ಕೆ ಸ್ಮಿತ್ ರಾಜೀನಾಮೆ, ನಾಯಕನ ಸ್ಥಾನಕ್ಕೆ ಹೊಸಬರ ನೇಮಕ

By Suvarna Web DeskFirst Published Mar 26, 2018, 5:10 PM IST
Highlights

2008ರಲ್ಲಿ ರಾಜಸ್ಥಾನ ತಂಡ ಐಪಿಎಲ್'ನಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಏಪ್ರಿಲ್ 7ರಿಂದ ಐಪಿಎಲ್'ನ 11ನೇ ಆವೃತ್ತಿ ಆರಂಭವಾಗಲಿದೆ.

ಮುಂಬೈ(ಮಾ.26): ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಚಂಡು ವಿರೂಪಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಐಪಿಎಲ್'ನ ರಾಜಸ್ಥಾನ ರಾಯಲ್ಸ್ ತಂಡದ ನಾಯಕತ್ವ ಸ್ಥಾನಕ್ಕೆ ಸ್ಟಿವ್ ಸ್ಮಿತ್ ರಾಜೀನಾಮೆ ನೀಡಿದ್ದಾರೆ.  ಮೊದಲ ಕ್ರಮಾಂಕದ ಬ್ಯಾಟ್ಸ್'ಮೆನ್ ಅಜಿಂಕ್ಯ ರಹಾನೆ ಸ್ಮಿತ್ ಬದಲಾಗಿ ನೇಮಕ ಮಾಡಲಾಗಿದೆ.

ಚಂಡು ವಿರೂಪ ವಿಶ್ವ ಕ್ರಿಕೆಟ್'ನಲ್ಲಿ ಗಂಭೀರ ಪ್ರಕರಣವಾದ ಕಾರಣ ತಂಡದ ನಾಯಕನನ್ನು ಬದಲಾಯಿಸಲಾಗಿದೆ. ಅವರು ತಂಡವನ್ನು ಸಮರ್ಥವಾಗಿ ಮುನ್ನಡೆಸುತ್ತಾರೆ' ಎಂದು ತಂಡದ ಪ್ರಕಟಣೆಯಲ್ಲಿ ತಿಳಿಸಲಾಗಿದೆ. 2008ರಲ್ಲಿ ರಾಜಸ್ಥಾನ ತಂಡ ಐಪಿಎಲ್'ನಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಏಪ್ರಿಲ್ 7ರಿಂದ ಐಪಿಎಲ್'ನ 11ನೇ ಆವೃತ್ತಿ ಆರಂಭವಾಗಲಿದೆ.

ಮ್ಯಾಚ್ ಫಿಕ್ಸಿಂಗ್'ಗೆ ಸಂಬಂಧಿಸಿದಂತೆ 2015ರಲ್ಲಿ  ರಾಜಸ್ಥಾನ ತಂಡವನ್ನು ತಂಡದಿಂದ ನಿಷೇಧಿಸಲಾಗಿತ್ತು. ಚಂಡು ವಿರೂಪ ಆರೋಪದಲ್ಲಿ ಸ್ಮಿತ್ ಆವರು ಈಗಾಗಲೆ ಆಸ್ಟ್ರೇಲಿಯಾ ತಂಡಕ್ಕೆ ರಾಜೀನಾಮೆ ನೀಡಿದ್ದು, ಐಸಿಸಿ ಶೇ.100ರಷ್ಟು ಪಂದ್ಯ ಶುಲ್ಕದ ದಂಡ ಹಾಗೂ ಒಂದು ತಂಡದಿಂದ ನಿಷೇಧಿಸಲಾಗಿದೆ.

click me!