ಏಷ್ಯಾ ಬಾಸ್ಕೆಟ್‌ಬಾಲ್‌: ಜಪಾನ್‌ ಚಾಂಪಿಯನ್‌

By Kannadaprabha News  |  First Published Sep 30, 2019, 1:05 PM IST

2019ರ ಫಿಬಾ ಮಹಿಳೆಯರ ಏಷ್ಯಾಕಪ್‌ ಬಾಸ್ಕೆಟ್‌ಬಾಲ್‌ ಟೂರ್ನಿ ಎರಡು ಬಲಿಷ್ಠ ತಂಡಗಳ ನಡುವಿನ ಕಾದಾಟಕ್ಕೆ ಸಾಕ್ಷಿಯಾಯಿತು. ಸಾಂಪ್ರದಾಯಿಕ ಎದುರಾಳಿ ಚೀನಾವನ್ನು ಮಣಿಸಿದ ಜಪಾನ್ ನಾಲ್ಕನೇ ಬಾರಿಗೆ ಚಾಂಪಿಯನ್ ಆಗಿ ಹೊರಹೊಮ್ಮಿತು. ಈ ಕುರಿತಾದ ವರದಿ ಇಲ್ಲಿದೆ ನೋಡಿ...


ಬೆಂಗಳೂರು(ಸೆ.30): 2019ರ ಫಿಬಾ ಮಹಿಳೆಯರ ಏಷ್ಯಾಕಪ್‌ ಬಾಸ್ಕೆಟ್‌ಬಾಲ್‌ ಟೂರ್ನಿ​ಯಲ್ಲಿ ಜಪಾನ್‌ ಚಾಂಪಿ​ಯನ್‌ ಆಗಿ ಹೊರ​ಹೊ​ಮ್ಮಿದೆ. ತಂಡ​ಕ್ಕಿದು ಸತತ 4ನೇ ಹಾಗೂ ಒಟ್ಟಾರೆ 5ನೇ ಪ್ರಶ​ಸ್ತಿ​ಯಾ​ಗಿದೆ. 

Alvark Tokyo make history with FIBA Asia Champions Cup 2019 title win. pic.twitter.com/ivrRi5gMo8

— 24 Sports Legends (@24SportsLegends)

ಭಾನು​ವಾರ ಇಲ್ಲಿನ ಕಂಠೀ​ರವ ಒಳಾಂಗಣ ಕ್ರೀಡಾಂಗಣದಲ್ಲಿ ನಡೆ​ದ ಫೈನಲ್‌ನಲ್ಲಿ ಜಪಾ​ನ್‌, ಬದ್ಧವೈರಿ ಚೀನಾ ವಿರುದ್ಧ 71-68ರ ರೋಚಕ ಗೆಲುವು ಸಾಧಿ​ಸಿತು. 11 ಬಾರಿ ಚಾಂಪಿ​ಯನ್‌ ಚೀನಾ, ಇಲ್ಲಿ ಪ್ರಶಸ್ತಿ ಗೆದ್ದು ಅತಿ​ಹೆಚ್ಚು ಬಾರಿ ಪ್ರಶಸ್ತಿ ಗೆದ್ದ ದ.ಕೊ​ರಿಯಾ (12 ಬಾರಿ ಚಾಂಪಿ​ಯನ್‌)ದ ದಾಖಲೆ ಸರಿ​ಗ​ಟ್ಟುವ ಕನಸು ಹೊಂದಿತ್ತು. ಆದರೆ ಚೀನಾ ತಂಡದ ಕನಸು ಈಡೇ​ರ​ಲಿಲ್ಲ. 

Tap to resize

Latest Videos

ಏಷ್ಯಾ ಬಾಸ್ಕೆಟ್‌ಬಾಲ್: ಭಾರತಕ್ಕೆ ನಾಲ್ಕನೇ ಸೋಲು

3ನೇ ಸ್ಥಾನ​ಕ್ಕಾಗಿ ನಡೆದ ಪಂದ್ಯ​ದಲ್ಲಿ ದ.ಕೊ​ರಿಯಾ ವಿರುದ್ಧ 98-62ರಲ್ಲಿ ಗೆಲುವು ಸಾಧಿ​ಸಿದ ಆಸ್ಪ್ರೇ​ಲಿಯಾ ಕಂಚಿನ ಪದಕ ಜಯಿ​ಸಿತು. ಭಾರತ ತಂಡವು ಸತತ ನಾಲ್ಕು ಸೋಲು ಕಂಡು ಮುಖಭಂಗ ಅನುಭವಿಸಿತ್ತು.

ನಂ.1 ಸ್ಥಾನ ಉಳಿ​ಸಿ​ಕೊ​ಳ್ಳುವ ಒತ್ತ​ಡದಲ್ಲಿ ಟೀಂ ಇಂಡಿಯಾ
 

OPALS WIN BRONZE! 🥉

Congratulations to Katie Ebzery and the Australian Opals! They have defeated Korea 98-62 to claim the bronze medal at the Women’s Asia Cup.

Katie finished with 11pts/3ast/1blk. pic.twitter.com/5um74T4AQa

— Perth Lynx (@PerthLynx)
click me!