ಏಷ್ಯನ್‌ ಈಜು ಕೂಟ: ಚಿನ್ನಕ್ಕೆ ಮುತ್ತಿಟ್ಟ ರಮಾ​ನಂದ

Published : Sep 30, 2019, 11:42 AM IST
ಏಷ್ಯನ್‌ ಈಜು ಕೂಟ: ಚಿನ್ನಕ್ಕೆ ಮುತ್ತಿಟ್ಟ ರಮಾ​ನಂದ

ಸಾರಾಂಶ

10ನೇ ಏಷ್ಯನ್‌ ಸ್ವಿಮ್ಮಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಭಾರತಕ್ಕೆ ಡೈವಿಂಗ್ ವಿಭಾಗದಲ್ಲಿ ರಮಾನಂದ ಶರ್ಮಾ ಮೊದಲ ಚಿನ್ನ ಗೆದ್ದುಕೊಟ್ಟಿದ್ದಾರೆ. ಭಾನುವಾರ ಇಲ್ಲಿನ ಭಾರತೀಯ ಕ್ರೀಡಾ ಪ್ರಾಧಿಕಾರ (ಸಾಯ್‌) ದಲ್ಲಿ ಆರಂಭವಾದ ಡೈವಿಂಗ್‌ ಸ್ಪರ್ಧೆಯಲ್ಲಿ ಭಾರತ 1 ಚಿನ್ನ, 3 ಬೆಳ್ಳಿ ಹಾಗೂ 1 ಕಂಚಿನ ಪದಕ ಗೆದ್ದಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...

ಬೆಂಗಳೂರು[ಸೆ.30]: 10ನೇ ಏಷ್ಯನ್‌ ವಯೋ ವರ್ಗ ಈಜು ಚಾಂಪಿಯನ್‌ಶಿಪ್‌ನ ಡೈವಿಂಗ್‌ ಸ್ಪರ್ಧೆಯಲ್ಲಿ ಭಾರತದ ಯುವ ಈಜುಪಟು ರಮಾನಂದ ಶರ್ಮಾ, ದೇಶಕ್ಕೆ ಮೊದಲ ಚಿನ್ನ ತಂದುಕೊಟ್ಟಿದ್ದಾರೆ. 

ಭಾನುವಾರ ಇಲ್ಲಿನ ಭಾರತೀಯ ಕ್ರೀಡಾ ಪ್ರಾಧಿಕಾರ (ಸಾಯ್‌) ದಲ್ಲಿ ಆರಂಭವಾದ ಡೈವಿಂಗ್‌ ಸ್ಪರ್ಧೆಯಲ್ಲಿ ಭಾರತ 1 ಚಿನ್ನ, 3 ಬೆಳ್ಳಿ ಹಾಗೂ 1 ಕಂಚಿನ ಪದಕ ಗೆದ್ದಿದೆ. ಪುರುಷರ ಮುಕ್ತ ವಿಭಾಗದಲ್ಲಿ 1 ಮೀ. ಸ್ಟ್ರಿಂಗ್‌ ಬೋರ್ಡ್‌ ಸ್ಪರ್ಧೆಯಲ್ಲಿ ರಮಾನಂದ 300.80 ಅಂಕಗಳಿಸಿ ಚಿನ್ನಕ್ಕೆ ಮುತ್ತಿಟ್ಟರು. ಇದೇ ಸ್ಪರ್ಧೆಯಲ್ಲಿ ರಮಾನಂದಗೆ ತೀವ್ರ ಪೈಪೋಟಿ ನೀಡಿದ ಭಾರತದ ಸಿದ್ಧಾಥ್‌ರ್‍ ಪ್ರದೇಶಿ 272.25 ಅಂಕಗಳಿಸಿ ಕಂಚಿನ ಪದಕ ಗೆದ್ದರು.

ಏಷ್ಯನ್‌ ಈಜು ಕೂಟ: ಮೊದಲ ದಿನವೇ ಭಾರತ ಭರ್ಜರಿ ಪದಕ ಭೇಟೆ

3 ಮೀ. ಸಿಂಕ್ರನೈಸ್ಡ್‌ ಡೈವಿಂಗ್‌ ಸ್ಪರ್ಧೆಯಲ್ಲಿ ಸತೀಶ್‌ ಕುಮಾರ್‌ ಮತ್ತು ಎನ್‌. ವಿಲ್ಸನ್‌ ಸಿಂಗ್‌ ಜೋಡಿ 217.26 ಅಂಕಗಳಿಸಿ ಬೆಳ್ಳಿ ಗೆದ್ದರೆ, ಥಾಯ್ಲೆಂಡ್‌ ಜೋಡಿ ಕಂಚು ಹಾಗೂ ಚೀನಾ ಸ್ಪರ್ಧಿಗಳು ಚಿನ್ನದ ಪದಕ ಗೆದ್ದರು.

ಏಷ್ಯನ್‌ ಈಜು ಕೂಟ: ರಾವತ್‌ ಮುಡಿಗೆ 4ನೇ ಚಿನ್ನ

ಬಾಲಕಿಯರ ‘ಸಿ’ ಗುಂಪಿನಲ್ಲಿ ನಡೆದ 1 ಮೀ. ಸ್ಟ್ರಿಂಗ್‌ ಬೋರ್ಡ್‌ ಡೈವಿಂಗ್‌ ಸ್ಪರ್ಧೆಯಲ್ಲಿ ಪಾಲಕ್‌ ಶರ್ಮಾ 186.70 ಅಂಕಗಳಿಸಿ ಬೆಳ್ಳಿ ಜಯಿಸಿದರು. ಡೈವಿಂಗ್‌ ಸ್ಪರ್ಧೆಯಲ್ಲಿ 14 ರಾಷ್ಟ್ರಗಳ 94 ಸ್ಪರ್ಧಿಗಳು ಭಾಗವಹಿಸಿದ್ದಾರೆ. ಆರ್ಟಿಸ್ಟಿಕ್‌ ಈಜು ಸ್ಪರ್ಧೆ ಕೂಡ ಭಾನುವಾರದಿಂದ ಆರಂಭವಾಗಿದ್ದು, 9 ರಾಷ್ಟ್ರಗಳ 130 ಸ್ಪರ್ಧಿಗಳು ಕಣದಲ್ಲಿ​ದ್ದಾರೆ.
 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಚೇಸ್ ಮಾಡಿ ಗೆಲ್ಲೋ ಚಾನ್ಸ್ ಇದ್ದರೂ 166 ರನ್ ದಾಟಿಸಲು ಪ್ರಯತ್ನಿಸಿ ಸೋಲು ಕಂಡಿತಾ ಆರ್‌ಸಿಬಿ?
IPL 2026 Playoffs: ಆರ್‌ಸಿಬಿಯ ಮುಂದಿನ ಪಂದ್ಯ ಯಾವುದು? ಯಾವಾಗ? ಎದುರಾಳಿ ಯಾರು?