
ಬೆಂಗಳೂರು(ಸೆ.20): ಸೌತ್ ಆಫ್ರಿಕಾ ವಿರುದ್ಧದ 3ನೇ ಟಿ20 ಪಂದ್ಯಕ್ಕಾಗಿ ಟೀಂ ಇಂಡಿಯಾ ಬೆಂಗಳೂರಿನಲ್ಲಿ ಬೀಡು ಬಿಟ್ಟಿದೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅಭ್ಯಾಸ ನಡೆಸುತ್ತಿದ್ದ ಟೀಂ ಇಂಡಿಯಾವನ್ನು, ರಾಷ್ಟ್ರೀಯ ಕ್ರಿಕೆಟ್ ಅಕಾಮೆಡಿ ನೂತನ ಚೇರ್ಮೆನ್ ರಾಹುಲ್ ದ್ರಾವಿಡ್ ಭೇಟಿಯಾದರು. ಈ ವೇಳೆ ಕೋಚ್ ರವಿ ಶಾಸ್ತ್ರಿ ಹಾಗೂ ರಾಹುಲ್ ದ್ರಾವಿಡ್ ಜೊತೆಗಿನ ಫೋಟೋವನ್ನು ಬಿಸಿಸಿಐ ಟ್ವೀಟ್ ಮಾಡಿದೆ. ಆದರೆ ಈ ಟ್ವೀಟ್‌ಗೆ ಅಭಿಮಾನಿಗಳು ವಿರೋಧ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಕೆರಿಬಿಯನ್ ಬೀಚ್‌ನಲ್ಲಿ ಶಾಸ್ತ್ರಿ ರಿಲ್ಯಾಕ್ಸ್; ಮತ್ತೆ ಟ್ರೋಲ್ ಮಾಡಿದ ಫ್ಯಾನ್ಸ್!
ರಾಹುಲ್ ದ್ರಾವಿಡ್ ಹಾಗೂ ಕೋಚ್ ರವಿ ಶಾಸ್ತ್ರಿ ಜೊತೆಗಿನ ಫೋಟೋವನ್ನು ಶೇರ್ ಮಾಡಿದ ಬಿಸಿಸಿಐ, ಇಬ್ಬರು ದಿಗ್ಗಜರು ಭೇಟಿಯಾದಗ ಎಂದು ಟ್ವೀಟ್ ಮಾಡಿದೆ. ಇದಕ್ಕೆ ಬಿಸಿಸಿಐ ರಾಹುಲ್ ಹಾಗೂ ದ್ರಾವಿಡ್ ಇಬ್ಬರೂ ಎಂದು ಕನ್ಫ್ಯೂಸ್ ಆಗಿದೆ. ದಿಗ್ಗಜ ದ್ರಾವಿಡ್‌ರನ್ನು ರವಿ ಶಾಸ್ತ್ರಿ ಜೊತೆ ಹೋಲಿಸಬೇಡಿ ಎಂದು ಬಿಸಿಸಿಐಗೆ ಅಭಿಮಾನಿಗಳು ಕ್ಲಾಸ್ ತೆಗೆದುಕೊಂಡಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.