ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್ ಟೂರ್ನಿಯಲ್ಲಿ ಭಾರತದ ಅಮಿತ್ ಪಂಘಲ್ ಇತಿಹಾಸ ರಚಿಸಿದ್ದಾರೆ. ಫೈನಲ್ ಪ್ರವೇಶಿರುವ ಅಮಿತ್ ಇದೀಗ ಚಿನ್ನದ ಪದಕಕ್ಕೆ ಗುರಿ ಇಟ್ಟಿದ್ದಾರೆ.
ರಷ್ಯಾ(ಸೆ.20): ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್ ಪುರುಷರ ಟೂರ್ನಿಯಲ್ಲಿ ಭಾರತದ ಅಮಿತ್ ಪಂಘಲ್ ದಾಖಲೆ ಬರೆದಿದ್ದಾರೆ. 52 ಕೆ.ಜಿ ವಿಭಾಗದಲ್ಲಿ ಅಮಿತ್ ಫೈನಲ್ ತಲುಪಿದ್ದಾರೆ. ಈ ಮೂಲಕ ವಿಶ್ವ ಚಾಂಪಿಯನ್‌ಶಿಪ್ ಟೂರ್ನಿ ಪುರುಷರ ವಿಭಾಗದಲ್ಲಿ ಫೈನಲ್ ತಲುಪಿದ ಮೊದಲ ಭಾರತೀಯ ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ.
ಇದನ್ನೂ ಓದಿ: ವಿಶ್ವ ಬಾಕ್ಸಿಂಗ್ ಕೂಟ: ಭಾರತೀಯರಿಗೆ ಯಶಸ್ಸು
undefined
52 ಕೆಜಿ ವಿಭಾಗದಲ್ಲಿ ಅಮಿತ್ ಪಂಘಲ್, ಕಜಕಿಸ್ತಾನದ ಸಾಕೆನ್ ಬಿಬೊಸ್ಸಿನೊವ್ ವಿರುದ್ಧ 3-2 ಅಂಕಗಳ ಅಂತರದಲ್ಲಿ ಸೆಮಿಫೈನಲ್ ಪಂದ್ಯ ಗೆದ್ದುಕೊಂಡರು. ಈ ಮೂಲಕ ಇತಿಹಾಸ ಬರೆದರು. ಆದರೆ ಮತ್ತೊರ್ವ ಭಾರತೀಯ ಮನೀಶ್ ಕೌಶಿಕ್ ಕಂಚಿನ ಪದಕಕ್ಕೆ ತೃಪ್ತಿ ಪಟ್ಟುಕೊಂಡರು.
ಇದನ್ನೂ ಓದಿ: ತಿಂಗಳಿಗೆ 28 ಲಕ್ಷ ಮೌಲ್ಯದ ಗಾಂಜಾ ಸೇದ್ತಾರೆ ಟೈಸನ್!
ಅಮಿತ್ ಪಂಘಲ್ 2018ರ ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆದ್ದಿದ್ದರು. 2017ರ ಏಷ್ಯನ್ ಚಾಂಪಿಯನ್ಸ್‌ಶಿಪ್ ಟೂರ್ನಿಯಲ್ಲಿ ಕಂಚಿನ ಪದಕ ಗೆದ್ದಿದ್ದರು. 2017ರಲ್ಲಿ ಬಲ್ಗೇರಿಯಾದಲ್ಲಿ ಸ್ಟ್ರಾಂಜಾ ಮೆಮೋರಿಯಲ್ ಬಾಕ್ಸಿಂಗ್ ಟೂರ್ನಿಯಲ್ಲಿ ಅಮಿತ್ ಚಿನ್ನದ ಪದಕ ಗೆದ್ದಿದ್ದರು. ಇದೀಗ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್ ಟೂರ್ನಿಯಲ್ಲಿ ಚಿನ್ನದ ಪದಕದ ಮೂಲಕ ಇತಿಹಾಸ ರಚಿಸಲು ಸಜ್ಜಾಗಿದ್ದಾರೆ.