ವಿಶ್ವಕಪ್ ಟೂರ್ನಿಯ ಅಭ್ಯಾಸ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ದ ಅಫ್ಘಾನಿಸ್ತಾನ ಗೆಲುವಿನ ನಗೆ ಬೀರಿತ್ತು. ಈ ಗೆಲವು ಅಫ್ಘಾನ್ ಅಭಿಮಾನಿಗಳಿಗೆ ಇನ್ನಿಲ್ಲದ ಖುಷಿ ನೀಡಿದೆ. ಆದರೆ ಈ ಸಂಭ್ರಮಾಚರಣೆಯ ಎಡವಟ್ಟಿನಿಂದ 86ಕ್ಕೂ ಹೆಚ್ಚು ಮಂದಿ ಆರೆಸ್ಟ್ ಆಗಿದ್ದಾರೆ.
ಕಾಬೂಲ್(ಮೇ.26): ವಿಶ್ವಕಪ್ ಟೂರ್ನಿಯ ಅಭ್ಯಾಸ ಪಂದ್ಯದಲ್ಲಿ ಪಾಕಿಸ್ತಾನ ಹಾಗೂ ಅಫ್ಘಾನಿಸ್ತಾನ ಮುಖಾಮುಖಿ ಎಲ್ಲರ ಅಚ್ಚರಿಗೆ ಕಾರಣವಾಗಿದೆ. ಪ್ರಸಸ್ತಿ ರೇಸ್‌ನಲ್ಲಿ ಕಾಣಿಸಿಕೊಂಡಿರುವ ಪಾಕಿಸ್ತಾನ ತಂಡಕ್ಕೆ ಅಫ್ಘಾನಿಸ್ತಾ ಶಾಕ್ ನೀಡಿತ್ತು. ಪಾಕ್ ವಿರುದ್ದ 3 ವಿಕೆಟ್ ಗೆಲುವು ಸಾಧಿಸಿದ ಅಫ್ಘಾನ್ ತಂಡ ಮೈದಾನದಲ್ಲಿ ಸಂಭ್ರಮ ಆಚರಿಸಿತ್ತು. ಇನ್ನು ವಿಶೇಷ ಗೆಲವನ್ನು ಅಫ್ಘಾನಿಸ್ತಾನದಲ್ಲೂ ಆಚರಿಸಲಾಗಿದೆ. ಆದರೆ ಈ ಸಂಭ್ರಮಾಚರಣೆಯಲ್ಲಿ 86ಕ್ಕೂ ಹೆಚ್ಚು ಮಂದಿ ಆರೆಸ್ಟ್ ಆಗಿದ್ದಾರೆ.
ಇದನ್ನೂ ಓದಿ: ಅಭ್ಯಾಸ ಪಂದ್ಯ: ಪಾಕ್ ವಿರುದ್ಧ ಆಫ್ಘನ್ ಜಯಭೇರಿ
ಅಫ್ಘಾನಿಸ್ತಾನ ರಾಜಧಾನಿ ಕಾಬೂಲ್, ನಂಗರ್‌ಹಾರ್ ಹಾಗೂ ಖೂಸ್ಟ್‌ನಲ್ಲಿ ಅಭಿಮಾನಿಗಳ ಸಂಭ್ರಮಾಚರಣೆ ಅತೀರೇಖವಾಗಿತ್ತು. ಪಾಕ್ ವಿರುದ್ಧ ಅಫ್ಘಾನ್ ಗೆಲುವು ಸಾಧಿಸುತ್ತಿದ್ದಂತೆ, ಗುಂಡು ಹಾರಿಸೋ ಮೂಲಕ ಸಂಭ್ರಮಾರಣೆ ಮಾಡಿದ್ದಾರೆ. ಈ ಸಂಭ್ರಮಾಚರಣೆಯಲ್ಲಿ ಹಲವರು ಗಂಭೀರ ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಇದನ್ನೂ ಓದಿ: ಗೌತಮ್ ಗಂಭೀರ್ ಮೂರ್ಖ-ನೂತನ ಸಂಸದನ ತಿವಿದ ಶಾಹಿದ್ ಆಫ್ರಿದಿ!
ತಕ್ಷಣವೇ ಕಾರ್ಯಪ್ರವೃತ್ತರಾದ ಪೊಲೀಸರು ಕಾಬೂಲ್‌ನಲ್ಲಿ 43, ನಂಗರ್‌ಹಾರ್ ಬಳಿ 31 ಹಾಗೂ ಖೂಸ್ಟ್ ಪ್ರದೇಶದಿಂದ 14ಜನರನ್ನು ಬಂಧಿಸಲಾಗಿದೆ. ಹಲವರು ತಲೆಮರೆಸಿಕೊಂಡಿದ್ದಾರೆ. ಅಫ್ಘಾನಿಸ್ತಾನದ ಗೆಲುವಿನ ಸಂಭ್ರಮಾಚರಣೆಯಿಂದ ಹಲವರು ಸಾವು ಬದುಕಿನ ನಡೆವೆ ಹೋರಾಟ ಮಾಡುತ್ತಿರುವುದು ದುರಂತ.