ಎಲ್ಲಾ ಮಾದರಿ ಕ್ರಿಕೆಟ್‌ಗೆ ವಿದಾಯ ಘೋಷಿಸಿದ ಸಿಂಗ್‌

By Web DeskFirst Published Mar 14, 2019, 8:57 AM IST
Highlights

ವೆಸ್ಟ್ ಇಂಡೀಸ್ ವಿರುದ್ಧ ಟೆಸ್ಟ್ ಕ್ರಿಕೆಟ್ ಹಾಗೂ ಇಂಗ್ಲೆಂಡ್  ವಿರುದ್ಧದ ಏಕದಿನ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ ಟೀಂ ಇಂಡಿಯಾ ವೇಗಿ ವಿಆರ್‌ವಿ ಸಿಂಗ್ ವಿದಾಯ ಘೋಷಿಸಿದ್ದಾರೆ. ಸದ್ದಿಲ್ಲದೆ ವಿದಾಯ ಹೇಳಿದ ಈ ಟೀಂ ಇಂಡಿಯಾ ಕ್ರಿಕೆಟಿಗ ಯಾರು? ಇಲ್ಲಿದೆ ವಿವರ.

ಚಂಢೀಗಢ(ಮಾ.14): ಭಾರತದ ವೇಗದ ಬೌಲರ್‌ ವಿಆರ್‌ವಿ ಸಿಂಗ್‌, ಬುಧವಾರ ಎಲ್ಲಾ ಮಾದರಿಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. ಚಂಢೀಗಢ ಮೂಲದ ವಿಕ್ರಮ್‌ ರಾಜ್‌ ವೀರ್‌ ಸಿಂಗ್‌, 2006ರಲ್ಲಿ ವೆಸ್ಟ್‌ ಇಂಡೀಸ್‌ ವಿರುದ್ಧ ಟೆಸ್ಟ್‌ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದ ಅವರು ಒಟ್ಟು 5 ಪಂದ್ಯಗಳನ್ನು ಆಡಿದ್ದರು.

ಇದನ್ನೂ ಓದಿ: ಕೊಹ್ಲಿ-ಸೆಹ್ವಾಗ್ ಸನ್ಮಾನ ರದ್ದು: ಹುತಾತ್ಮರಿಗೆ ಹಣ

2007ರಲ್ಲಿ ಬಾಂಗ್ಲಾದೇಶ ವಿರುದ್ಧ ಅಂತಿಮ ಟೆಸ್ಟ್ ಪಂದ್ಯ ಆಡಿದರು ಬಳಿಕ ಟೆಸ್ಟ್ ತಂಡದಲ್ಲಿ ಕಾಣಿಸಿಕೊಳ್ಳಲಿಲ್ಲ. ಇನ್ನು 2 ಏಕದಿನ ಪಂದ್ಯಗಳಲ್ಲೂ ಅವರು ಭಾರತವನ್ನು ಪ್ರತಿನಿಧಿಸಿದ್ದರು. ಆದರೆ ವಿಕೆಟ್ ಕಬಳಿಸಲು ವಿಫಲರಾಗಿದ್ದರು. ಇಂಗ್ಲೆಂಡ್ ವಿರುದ್ಧ ಜೆಮ್ಶೆಡ್‌ಪುರದಲ್ಲಿ ಏಕದಿನಕ್ಕೆ ಪಾದಾರ್ಪಣೆ ಮಾಡಿದ ಸಿಂಗ್, ಇಂದೋರ್‌ನಲ್ಲಿ ಏಕದಿನದಿಂದಲೂ ದೂರ ಉಳಿದರು. 

ಇದನ್ನೂ ಓದಿ:ಮೊಹಾಲಿ ಕ್ರೀಡಾಂಗಣದಲ್ಲಿ ಇದೇ ಕೊನೆಯ ಅಂ.ರಾ. ಪಂದ್ಯ!

34 ವರ್ಷದ ವಿಆರ್‌ವಿ ಸಿಂಗ್‌ ಐಪಿಎಲ್‌ನ ಮೊದಲ 3 ಆವೃತ್ತಿಗಳಲ್ಲಿ ಕಿಂಗ್ಸ್‌ ಇಲೆವೆನ್‌ ಪಂಜಾಬ್‌ ಪರ ಕಣಕ್ಕಿಳಿದಿದ್ದರು. 29 ಪ್ರಥಮ ದರ್ಜೆ ಕ್ರಿಕೆಟ್ ಆಡಿರುವ ಸಿಂಗ್, 121 ವಿಕೆಟ್ ಕಬಳಿಸಿದ್ದಾರೆ. 2014ರಲ್ಲಿ ಕೊನೆ ಬಾರಿಗೆ ರಣಜಿ  ಟ್ರೋಫಿ ಆಡಿದ್ದರು. ಗಾಯದ ಸಮಸ್ಯೆಯಿಂದ ಹಲವು ಬಾರಿ ತಂಡದಿಂದ ಹೊರಗುಳಿದಿದ್ದ ಸಿಂಗ್, ಇದೀಗ ಎಲ್ಲಾ ಮಾದರಿ ಕ್ರಿಕೆಟ್‌ಗೆ ಗುಡ್‌ ಬೈ ಹೇಳಿದ್ದಾರೆ.

click me!