ಧೋನಿ ನಿವೃತ್ತಿ ಸುದ್ದಿ; BCCI ಆಯ್ಕೆ ಸಮಿತಿ ಸ್ಪಷ್ಟನೆ!

By Web Desk  |  First Published Sep 12, 2019, 6:43 PM IST

ಟೀಂ ಇಂಡಿಯಾ ಹಿರಿಯ ಕ್ರಿಕೆಟಿಗ  ಎಂ.ಎಸ್.ಧೋನಿ ನಿವೃತ್ತಿ ಹೇಳಲಿದ್ದಾರೆ ಅನ್ನೋ ಮಾತಿಗೆ ಬಿಸಿಸಿಐ ಆಯ್ಕೆ ಸಮಿತಿ ಸ್ಪಷ್ಟನೆ ನೀಡಿದೆ. ಧೋನಿ ಕರಿಯರ್ ಕುರಿತು ಆಯ್ಕೆ ಸಮಿತಿ ಹೇಳಿದ್ದೇನು? ಇಲ್ಲಿದೆ ವಿವರ.



ಮುಂಬೈ(ಸೆ.12): ಟೀಂ ಇಂಡಿಯಾ ಹಿರಿಯ ಕ್ರಿಕೆಟಿಗ ಎಂ.ಎಸ್.ಧೋನಿ ಇಂದು(ಸೆ.12) ಸಂಜೆ 7 ಗಂಟೆಗೆ ಸುದ್ದಿಗೋಷ್ಠಿ ನಡೆಸಿ ನಿವೃತ್ತಿ ಹೇಳಲಿದ್ದಾರೆ ಅನ್ನೋ ಮಾತುಗಳು ಬಲವಾಗಿ ಕೇಳಿಬಂದಿತ್ತು. ಸಾಮಾಜಿಕ ಜಾಲತಾಣದಲ್ಲಿ ಧೋನಿ ನಿವೃತ್ತಿ ಹೇಳಿದ್ದಾರೆ ಅನ್ನೋ ಸುದ್ದಿಗಳು ಹರಿದಾಡುತ್ತಿತ್ತು. ಇದೀಗ ಟೀಂ ಇಂಡಿಯಾ ಆಯ್ಕೆ ಸಮಿತಿ ಮುಖ್ಯಸ್ಥ ಎಂ.ಎಸ್.ಕೆ ಪ್ರಸಾದ್ ಈ ಕುರಿತು ಸ್ಪಷ್ಟನೆ ನೀಡಿದ್ದಾರೆ.

ಇದನ್ನೂ ಓದಿ: ಧೋನಿ ನಿವೃತ್ತಿ ಮಾತು; ಸಂಜೆ 7ಕ್ಕೆ ಸುದ್ದಿಗೋಷ್ಠಿ?

Tap to resize

Latest Videos

undefined

ಟೀಂ ಇಂಡಿಯಾ ಮಾಜಿ ನಾಯಕ ಎಂ.ಎಸ್.ಧೋನಿ ಸುದ್ದಿಗೋಷ್ಠಿ ಕುರಿತು ಯಾವುದೇ ಆಧೀಕೃತ ಸೂಚನೆಗಳಿಲ್ಲ. ಧೋನಿ ಈ ಕುರಿತು ನಮ್ಮ ಜೊತೆ ಯಾವುದೇ ಮಾಹಿತಿ ಹಂಚಿಕೊಂಡಿಲ್ಲ ಎಂದು ಪ್ರಸಾದ್ ಹೇಳಿದ್ದಾರೆ. ಈ ಮೂಲಕ ಧೋನಿ ಸುದ್ದಿಗೋಷ್ಠಿ ನಡೆಸಿ ನಿವೃತ್ತಿ ಹೇಳಲಿದ್ದಾರೆ ಅನ್ನೋ ಊಹಾಪೋಹಕ್ಕೆ ತೆರೆ ಎಳೆದಿದ್ದಾರೆ. 

ಇದನ್ನೂ ಓದಿ: ಧೋನಿ ನಿವೃತ್ತಿ ಸುಳಿವು ನೀಡಿದ್ರಾ ಕೊಹ್ಲಿ?

ಸೌತ್ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಗೆ ಟೀಂ ಇಂಡಿಯಾ ಆಯ್ಕೆ ನಡೆಸಲು ಪ್ರಸಾದ್ ನೇತೃತ್ವದ ಸೆಲೆಕ್ಷನ್ ಕಮಿಟಿ ಮುಂಬೈನಲ್ಲಿ ಸಭೆ ಸೇರಿತು. ಟೀಂ ಇಂಡಿಯಾ ಆಯ್ಕೆ ಬಳಿಕ ಮಾತನಾಡಿದ ಎಂಎಸ್.ಕೆ ಪ್ರಸಾದ್ ಧೋನಿ ನಿವೃತ್ತಿ ಗಾಳಿ ಸುದ್ದಿಗೆ ಬ್ರೇಕ್ ಹಾಕಿದ್ದಾರೆ. ಆದರೆ ಈ ಕುರಿತು ಎಂ.ಎಸ್.ಧೋನಿ ತುಟಿ ಬಿಚ್ಚಿಲ್ಲ.
 

click me!