
ಹೈದರಾಬಾದ್(ಮೇ.12): 12ನೇ ಆವೃತ್ತಿ ಐಪಿಎಲ್ ಟೂರ್ನಿಯ ವಿನ್ನರ್ ಯಾರು ಅನ್ನೋದು ಇಂದು ಉತ್ತರ ಸಿಗಲಿದೆ. ಫೈನಲ್ ಹೋರಾಟಕ್ಕೆ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಮುಂಬೈ ಇಂಡಿಯನ್ಸ್ ಸಜ್ಜಾಗಿದೆ. ಹೋರಾಟಕ್ಕೂ ಮುನ್ನವೇ ಪ್ರಶಸ್ತಿ ಗೆಲ್ಲೋ ತಂಡ ಯಾವುದು ಅನ್ನೋ ಭವಿಷ್ಯ ಸುಲಭವಲ್ಲ. ಆದರೆ ಅಂಕಿ ಅಂಶಗಳ ಪ್ರಕಾರ ಟಾಸ್ ಗೆದ್ದ ತಂಡ ಬಹುತೇಕ ಬಾರಿ ಪ್ರಶಸ್ತಿ ಗೆದ್ದಿದೆ. ಇದೀಗ ಚೆನ್ನೈ ಹಾಗೂ ಮುಂಬೈ ಫೈನಲ್ ಪಂದ್ಯದ ಅಂಕಿ ಅಂಶ ತುಂಬಾ ರೋಚಕವಾಗಿದೆ.
ಇದನ್ನೂ ಓದಿ: ಹೀಗಿತ್ತು ನೋಡಿ ಮುಂಬೈ ಇಂಡಿಯನ್ಸ್ ತಂಡದ ಫೈನಲ್ ದಾರಿ
ಫೈನಲ್ ಪಂದ್ಯದಲ್ಲಿ ಚೆನ್ನೈ ಹಾಗೂ ಮುಂಬೈ ಟಾಸ್ ಗೆದ್ರೆ ಏನು ಮಾಡಬೇಕು? ಈ ಪ್ರಶ್ಮೆಗೆ ಈ ಹಿಂದಿನ ಫೈನಲ್ ಪಂದ್ಯಗಳಲ್ಲಿ ಚೆನ್ನೈ ಹಾಗೂ ಮುಂಬೈ ತೆಗೆದು ಕೊಂಡ ನಿರ್ಧಾರ ಸಾಕ್ಷಿ ಹೇಳುತ್ತಿದೆ. ಐಪಿಎಲ್ ಫೈನಲ್ ಪಂದ್ಯದಲ್ಲಿ ಮುಂಬೈ ಹಾಗೂ ಚೆನ್ನೈ 3 ಬಾರಿ ಮುಖಾಮುಖಿಯಾಗಿದೆ. 3 ಬಾರಿ ಕೂಡ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಪ್ರಶಸ್ತಿ ಗೆದ್ದಿದೆ.
ಇದನ್ನೂ ಓದಿ: ಸೂಪರ್‌ನೋವಾಸ್ ಐಪಿಎಲ್ ಚಾಂಪಿಯನ್
2010 - ಮುಂಬೈ v ಚೆನ್ನೈ -ಚೆನ್ನೈ ಬ್ಯಾಟಿಂಗ್ ಆಯ್ಕೆ- ಚಾಂಪಿಯನ್
2013 - ಮುಂಬೈ v ಚೆನ್ನೈ - ಮುಂಬೈ ಬ್ಯಾಟಿಂಗ್ ಆಯ್ಕೆ- ಚಾಂಪಿಯನ್
2015 - ಮುಂಬೈ v ಚೆನ್ನೈ -ಮುಂಬೈ- ಬ್ಯಾಟಿಂಗ್ ಆಯ್ಕೆ- ಚಾಂಪಿಯನ್
2019 - ಮುಂಬೈ v ಚೆನ್ನೈ - ?
ಈ ಬಾರಿಯ ಫೈನಲ್ ಪಂದ್ಯದಲ್ಲೂ ಚೆನ್ನೈ ಹಾಗೂ ಮುಂಬೈ ಇದೇ ಅಂಕಿ ಅಂಶದ ಆಧಾರದ ಮೇಲೆ ಆಯ್ಕೆ ಮಾಡುತ್ತಾ? ಇಲ್ಲಾ 12ನೇ ಆವೃತ್ತಿ ಐಪಿಎಲ್ ಟೂರ್ನಿಯಲ್ಲಿ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ತಂಡ ಗೆಲುವಿನ ನಗೆ ಬೀರಿದೆ. ಹೀಗಾಗಿ ಈ ಆಯ್ಕೆ ನಡೆಸುತ್ತಾ ಅನ್ನೋದು ಕುತೂಹಲ ಕೆರಳಿಸಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.