
ಬರ್ಲಿನ್(ಡಿ.03): ಫುಟ್ಬಾಲ್ ಸೂಪರ್ ಸ್ಟಾರ್ ಲಿಯೊನೆಲ್ ಮೆಸ್ಸಿ ನಂತರ ಮತ್ತೊಬ್ಬ ಜಗದ್ವಿಖ್ಯಾತ ಫುಟ್ಬಾಲಿಗ, ಪೋರ್ಚುಗಲ್‌ನ ಕ್ರಿಶ್ಚಿಯಾನೊ ರೊನಾಲ್ಡೊ ವಿರುದ್ಧವೂ ತೆರಿಗೆ ವಂಚನೆ ಆರೋಪಗಳು ಕೇಳಿಬಂದಿವೆ.
ತಮ್ಮ ಆದಾಯದ ಬಹುಪಾಲು ಅಂಶವನ್ನು ವೆಸ್ಟ್‌ಇಂಡೀಸ್‌ನಲ್ಲಿರುವ ಕಂಪೆನಿಯೊಂದಕ್ಕೆ ವರ್ಗಾಯಿಸಿ ನೈಜ ಆದಾಯವನ್ನು ಮುಚ್ಚಿಡುವ ಮೂಲಕ ತೆರಿಗೆ ವಿಚಾರದಲ್ಲಿ ಪೋರ್ಚುಗಲ್ ಸರ್ಕಾರದ ಕಣ್ಣಿಗೆ ಮಣ್ಣೆರಚಿದ್ದಾರೆಂದು ಯೂರೋಪ್‌ನ ತನಿಖಾ ಸಂಸ್ಥೆಗಳ ಒಕ್ಕೂಟ (ಇಐಸಿ) ಪತ್ತೆ ಹಚ್ಚಿದೆ.
ಇದರ ಮಾಹಿತಿಯು ಸೋರಿಕೆಯಾಗಿ ಮಾಧ್ಯಮಗಳಲ್ಲಿ ಪ್ರಕಟವಾಗಿದೆಯೆಂದು ಹೇಳಲಾಗಿದೆ. ಹೀಗಾಗಿ, ರೊನಾಲ್ಡೊ ಅವರು ಕಾನೂನು ಸುಳಿಯಲ್ಲಿ ಸಿಲುಕುವ ಸಾಧ್ಯತೆಗಳಿವೆ ಎನ್ನಲಾಗಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.