ಏಷ್ಯಾಕಪ್ ಫೈನಲ್: ಪ್ರಶಸ್ತಿಗಾಗಿ ಭಾರತ-ಪಾಕ್ ಸೆಣಸಾಟ

Published : Dec 03, 2016, 03:35 PM ISTUpdated : Apr 11, 2018, 12:41 PM IST
ಏಷ್ಯಾಕಪ್ ಫೈನಲ್: ಪ್ರಶಸ್ತಿಗಾಗಿ ಭಾರತ-ಪಾಕ್ ಸೆಣಸಾಟ

ಸಾರಾಂಶ

ನಾಲ್ಕು ವರ್ಷಗಳ ಹಿಂದೆ ಚೀನಾದಲ್ಲಿ ನಡೆದಿದ್ದ ಪಂದ್ಯಾವಳಿಯಲ್ಲಿ ಇದೇ ಹರ್ಮನ್‌ಪ್ರೀತ್ ಕೌರ್ ನಾಯಕತ್ವದ ಭಾರತ ಮಹಿಳಾ ತಂಡವು ಚಾಂಪಿಯನ್ ಆಗಿತ್ತು.

ಬ್ಯಾಂಕಾಕ್(ಡಿ.03): ಪ್ರತಿಷ್ಠಿತ ಮಹಿಳಾ ಟಿ20 ಏಷ್ಯಾ ಕಪ್ ಪಂದ್ಯಾವಳಿಯ ಪ್ರಶಸ್ತಿ ಸುತ್ತಿನ ಸೆಣಸಾಟವು ಭಾನುವಾರ ನಡೆಯುತ್ತಿದ್ದು, ಟೂರ್ನಿಯಲ್ಲಿ ಅಜೇಯ ತಂಡವಾಗಿ ಫೈನಲ್ ತಲುಪಿರುವ ಹರ್ಮನ್ ಪ್ರೀತ್ ಕೌರ್ ಸಾರಥ್ಯದ ಭಾರತ ವನಿತಾ ತಂಡ ತನ್ನ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ಮತ್ತೊಂದು ಸುತ್ತಿನ ಸೆಣಸಾಟಕ್ಕೆ ಅಣಿಯಾಗಿದೆ.

ಇಲ್ಲಿನ ಏಷ್ಯಾ ಇನ್ಸ್‌ಟಿಟ್ಯೂಟ್ ಆಫ್ ಟೆಕ್ನಾಲಜಿ ಮೈದಾನದಲ್ಲಿ ನಡೆಯಲಿರುವ ಪಂದ್ಯದಲ್ಲಿ ಗೆಲುವು ಸಾಧಿಸುವುದರೊಂದಿಗೆ ಮತ್ತೊಮ್ಮೆ ಏಷ್ಯಾ ಚಾಂಪಿಯನ್ನರಾಗಲು ಭಾರತ ವನಿತಾ ತಂಡ ತುದಿಗಾಲಲ್ಲಿ ನಿಂತಿದೆ.

ಫೈನಲ್‌ನಲ್ಲಿ ಸೆಣಸುತ್ತಿರುವ ಈ ಎರಡು ತಂಡಗಳಲ್ಲದೆ, ಶ್ರೀಲಂಕಾ, ಬಾಂಗ್ಲಾದೇಶ, ಥಾಯ್ಲೆಂಡ್ ಹಾಗೂ ನೇಪಾಳ ತಂಡಗಳು ಕೂಡ ಪಾಲ್ಗೊಂಡಿದ್ದವು. ಈ ಪೈಕಿ ಆತಿಥೇಯ ಥಾಯ್ಲೆಂಡ್ ಹಾಗೂ ನೇಪಾಳ ಮಹಿಳಾ ವಿಶ್ವಕಪ್ ಏಷ್ಯಾ ಅರ್ಹತಾ ಪಂದ್ಯಾವಳಿಯಲ್ಲಿ ಅರ್ಹತೆ ಗಳಿಸಿ ಪ್ರಧಾನ ಸುತ್ತಿಗೆ ಕಾಲಿಟ್ಟಿದ್ದವು. ಅಂದಹಾಗೆ ಇವೆರಡೂ ತಂಡಗಳಿಗೆ ಅಂತಾರಾಷ್ಟ್ರೀಯ ಟಿ20 ಮಾನ್ಯತೆ ಇನ್ನೂ ಸಿಕ್ಕಿಲ್ಲ.

ಎರಡನೇ ಟ್ರೋಫಿ ಮೇಲೆ ಕಣ್ಣು

ಏಷ್ಯಾ ಕ್ರಿಕೆಟ್ ಸಮಿತಿ (ಎಸಿಸಿ) ಸಂಘಟಿಸುತ್ತಿರುವ ಈ ಟೂರ್ನಿಯು ಆರನೆಯದ್ದಾಗಿದ್ದರೂ, ಟಿ20 ಮಾದರಿಯಲ್ಲಿ ಇದು ಎರಡನೆಯದು. ನಾಲ್ಕು ವರ್ಷಗಳ ಹಿಂದೆ ಚೀನಾದಲ್ಲಿ ನಡೆದಿದ್ದ ಪಂದ್ಯಾವಳಿಯಲ್ಲಿ ಇದೇ ಹರ್ಮನ್‌ಪ್ರೀತ್ ಕೌರ್ ನಾಯಕತ್ವದ ಭಾರತ ಮಹಿಳಾ ತಂಡವು ಚಾಂಪಿಯನ್ ಆಗಿತ್ತು. ವಿಶೇಷವೆಂದರೆ ಕಳೆದ ಬಾರಿಯೂ ಇದೇ ಪಾಕ್ ತಂಡದ ವಿರುದ್ಧವೇ ಫೈನಲ್ ಆಡಿದ್ದ ಭಾರತ ವನಿತಾ ತಂಡ, 18 ರನ್‌ಗಳ ಗೆಲುವು ಸಾಧಿಸಿ ಚಾಂಪಿಯನ್ ಪಟ್ಟ ಧರಿಸಿತ್ತು. ಮತ್ತೊಮ್ಮೆ ಸಾಂಪ್ರದಾಯಿಕ ತಂಡಗಳೇ ಮುಖಾಮುಖಿಯಾಗುತ್ತಿರುವುದು ಪಂದ್ಯದ ರೋಚಕತೆಯನ್ನು ಹೆಚ್ಚಿಸುವ ಸಾಧ್ಯತೆ ಇದೆ.

ಭಾರತ

ಹರ್ಮನ್‌ ಪ್ರೀತ್ ಕೌರ್ (ನಾಯಕಿ), ಎಕ್ತಾ ಬಿಶ್ತ್, ಜೂಲನ್ ಗೋಸ್ವಾಮಿ, ಮನ್ಸಿ ಜೋಶಿ, ಸುಷ್ಮಾ ವರ್ಮಾ (ವಿಕೆಟ್‌ಕೀಪರ್), ವೇದಾ ಕೃಷ್ಣಮೂರ್ತಿ, ಸ್ಮತಿ ಮಂಧಾನ, ಮೇಘನಾ ಸಿಂಗ್, ಶಿಖಾ ಪಾಂಡೆ, ಅಂಜು ಪಾಟೀಲ್, ಪೂನಮ್ ಯಾದವ್, ನೂಝತ್ ಪರ್ವೀನ್, ಪ್ರೀತಿ ಬೋಸ್, ಮಿಥಾಲಿ ರಾಜ್ ಮತ್ತು ವೆಲ್ಲಸ್ವಾಮಿ ವನಿತಾ.

ಪಾಕಿಸ್ತಾನ

ಬಿಸ್ಮಾಹ್ ಮರೂ (ನಾಯಕಿ), ಜವೇರಿಯಾ ಖಾನ್ (ಉಪನಾಯಕಿ), ಅಲಿಯಾ ರಿಯಾಜ್, ಸಿದ್ರಾ ನವಾಜ್ (ವಿಕೆಟ್‌ಕೀಪರ್), ಆನಮ್ ಅಮೀನ್, ಅಸ್ಮಾವಿಯಾ ಇಕ್ಬಾಲ್, ಆಯೇಷಾ ಜಾರ್, ಡಯಾನ ಬೇಗ್, ಇರಾಮ್ ಜಾವೇದ್, ಮಹಮ್ ತಾರೀಕ್, ನಹಿದಾ ಖಾನ್, ನೈನ್ ಅಬ್ದಿದಿ, ನಿದಾ ದರ್, ಸಾದಿಯಾ ಯೂಸೂಫ್ ಮತ್ತು ಸಾನ ಮಿರ್.

ಪಂದ್ಯ ಆರಂಭ: ಬೆಳಿಗ್ಗೆ 11.30

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಐಪಿಎಲ್ ಹರಾಜಿನಲ್ಲಿ ₹25.20 ಕೋಟಿ ಪಡೆದ ಕ್ಯಾಮರೂನ್ ಗ್ರೀನ್‌ಗೆ ಕೊಡುವ ಮೊತ್ತ ₹18 ಕೋಟಿ ಮಾತ್ರ
ಕೇವಲ 30 ಲಕ್ಷ ಮೂಲ ಬೆಲೆ ಹೊಂದಿದ್ದ ಮಂಗೇಶ್ ಯಾದವ್ 5.2 ಕೋಟಿಗೆ ಆರ್‌ಸಿಬಿ ಪಾಲು? ಅಷ್ಟಕ್ಕೂ ಯಾರು ಈ ಎಡಗೈ ವೇಗಿ?