ಬ್ಯಾಟಿಂಗ್ ಸ್ನೇಹಿ ಪಿಚ್'ಗೆ ಕೋರಿಕೆ

Published : Dec 03, 2016, 04:05 PM ISTUpdated : Apr 11, 2018, 12:51 PM IST
ಬ್ಯಾಟಿಂಗ್ ಸ್ನೇಹಿ ಪಿಚ್'ಗೆ ಕೋರಿಕೆ

ಸಾರಾಂಶ

ಮುಂಬೈನ ವಾಂಖೆಡೆ ಕ್ರೀಡಾಂಗಣದ ಪಿಚ್ ಅನ್ನು ಬಾಲ್ಡ್ ಪಿಚ್ ಇಲ್ಲವೇ ಹಸಿರು ಹುಲ್ಲಿನಿಂದ ಮುಕ್ತವಾಗಿರುವ ಬ್ಯಾಟಿಂಗ್ ಸ್ನೇಹಿ ಪಿಚ್ ಆಗಿ ರೂಪಿಸುವಂತೆ ಕ್ಯುರೇಟರ್‌ಗಳಿಗೆ ನಾಯಕ ವಿರಾಟ್ ಕೊಹ್ಲಿ ಹಾಗೂ ಕೋಚ್ ಅನಿಲ್ ಕುಂಬ್ಳೆ ಮನವಿ ಮಾಡಿದ್ದಾರೆ.

ಮುಂಬೈ(ಡಿ.03): ತವರಿನಲ್ಲಿ ಯಾವಾಗಲೂ ಸ್ಪಿನ್ ಸ್ನೇಹಿ ಪಿಚ್‌ಗಳನ್ನು ತಯಾರಿಸುವ ಮೂಲಕ ಗೆಲುವಿನ ಸರದಾರ ಎನಿಸಿಕೊಳ್ಳಲು ಟೀಂ ಇಂಡಿಯಾ ಹವಣಿಸುತ್ತದೆ ಎಂಬ ಆರೋಪದಿಂದ ಮುಕ್ತವಾಗಲು ಟೀಂ ಇಂಡಿಯಾ ನಿರ್ಧರಿಸಿದೆ.

ಪ್ರಸಕ್ತ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲೇ ಈ ಆರೋಪದಿಂದ ಮುಕ್ತವಾಗಲು ಯತ್ನಿಸಿರುವ ಅದು, ನಾಲ್ಕನೇ ಟೆಸ್ಟ್ ಪಂದ್ಯಕ್ಕಾಗಿ ಅಣಿಗೊಳ್ಳುತ್ತಿರುವ ಮುಂಬೈನ ವಾಂಖೆಡೆ ಕ್ರೀಡಾಂಗಣದ ಪಿಚ್ ಅನ್ನು ಬಾಲ್ಡ್ ಪಿಚ್ ಇಲ್ಲವೇ ಹಸಿರು ಹುಲ್ಲಿನಿಂದ ಮುಕ್ತವಾಗಿರುವ ಬ್ಯಾಟಿಂಗ್ ಸ್ನೇಹಿ ಪಿಚ್ ಆಗಿ ರೂಪಿಸುವಂತೆ ಕ್ಯುರೇಟರ್‌ಗಳಿಗೆ ನಾಯಕ ವಿರಾಟ್ ಕೊಹ್ಲಿ ಹಾಗೂ ಕೋಚ್ ಅನಿಲ್ ಕುಂಬ್ಳೆ ಮನವಿ ಮಾಡಿದ್ದಾರೆ.

ಅಂದಹಾಗೆ ಮೊದಲ ಟೆಸ್ಟ್ ನಡೆದಿದ್ದ ರಾಜ್‌ಕೋಟ್ ಪಿಚ್ ಬ್ಯಾಟಿಂಗ್ ಸ್ನೇಹಿಯಾಗಿದ್ದರೆ, 2ನೇ ಪಂದ್ಯ ನಡೆದಿದ್ದ ವಿಶಾಖಪಟ್ಟಣದಲ್ಲಿನ ಪಿಚ್ ನಿಧಾನಗತಿಯದ್ದಾಗಿತ್ತಲ್ಲದೆ, ಬೌನ್ಸಿಯದ್ದಾಗಿರಲಿಲ್ಲ. ಇನ್ನು ಮೊಹಾಲಿಯಲ್ಲಿ ನಡೆದಿದ್ದ ಮೂರನೇ ಟೆಸ್ಟ್ ಪಂದ್ಯಕ್ಕಾಗಿ ತಯಾರಾಗಿದ್ದ ಪಿಚ್ ನಿರ್ಜೀವವಾಗಿತ್ತಲ್ಲದೆ, ಮೂರನೇ ದಿನದಾಂತ್ಯಕ್ಕೆ ತಿರುವು ಪಡೆಯುವಂತಿತ್ತು.

 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಐಪಿಎಲ್ ಹರಾಜಿನಲ್ಲಿ ₹25.20 ಕೋಟಿ ಪಡೆದ ಕ್ಯಾಮರೂನ್ ಗ್ರೀನ್‌ಗೆ ಕೊಡುವ ಮೊತ್ತ ₹18 ಕೋಟಿ ಮಾತ್ರ
ಕೇವಲ 30 ಲಕ್ಷ ಮೂಲ ಬೆಲೆ ಹೊಂದಿದ್ದ ಮಂಗೇಶ್ ಯಾದವ್ 5.2 ಕೋಟಿಗೆ ಆರ್‌ಸಿಬಿ ಪಾಲು? ಅಷ್ಟಕ್ಕೂ ಯಾರು ಈ ಎಡಗೈ ವೇಗಿ?