
ಮುಂಬೈ(ಸೆ.08): ಬಿಸಿಸಿಐ ಅನುಮತಿ ಇಲ್ಲದೆ ಕೆರಿಬಿಯನ್ ಪ್ರಿಮಿಯರ್ ಲೀಗ್ ಟೂರ್ನಿಯಲ್ಲಿ ಕಾಣಿಸಿಕೊಂಡು ಸಂಕಷ್ಟಕ್ಕೆ ಟೀಂ ಇಂಡಿಯಾ ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್ ಇದೀಗ ಭೇಷರತ್ ಕ್ಷಮೆ ಯಾಚಿಸಿದ್ದಾರೆ. ಶಾರುಖ್ ಖಾನ್ ಮಾಲೀಕತ್ವದ ಟ್ರಿನಿಬ್ಯಾಗೋ ನೈಟ್ ರೈಡರ್ಸ್ ತಂಡದ ಡ್ರೆಸ್ಸಿಂಗ್ ರೂಂನಲ್ಲಿ ಪ್ರತ್ಯಕ್ಷರಾಗೋ ಮೂಲಕ ಬಿಸಿಸಿಐ ಕೆಂಗಣ್ಣಿಗೆ ಗುರಿಯಾಗಿದೆ. ಹೀಗಾಗಿ ಶೋಕಾಸ್ ನೊಟೀಸ್ ನೀಡಿತ್ತು.
ಇದನ್ನೂ ಓದಿ: ಕೆರಿಬಿಯನ್ ಲೀಗ್ ಜೊತೆ ಕಾಣಿಸಿಕೊಂಡ ಕಾರ್ತಿಕ್, BCCIನಿಂದ ನೊಟೀಸ್!
ಬಿಸಿಸಿಐ ನೊಟೀಸ್‌ಗೆ ಉತ್ತರಿಸಿದ ಕಾರ್ತಿಕ್ ಭೇಷರತ್ ಕ್ಷಮೆಯಾಚಿಸಿದ್ದಾರೆ. ನಾನು ಟ್ರಿನಿಬ್ಯಾಗೋ ತಂಡದ ಯಾವುದೇ ಚಟುವಟಿಕೆ ಹಾಗೂ ಆಟದಲ್ಲಿ ಪಾಲ್ಗೊಂಡಿಲ್ಲ. ಫ್ರಾಂಚೈಸಿ ಮನವಿ ಮೇರೆಗೆ ತಂಡದ ಜೊತೆ ಕಾಣಿಸಿಕೊಂಡಿದ್ದೆ ಎಂದು ಬಿಸಿಸಿಐಗೆ ಪತ್ರ ಬರೆದಿದ್ದಾರೆ.
ಇದನ್ನೂ ಓದಿ: ಇಂಡೋ-ಆಫ್ರಿಕಾ ಟಿ20: ಬೆಂಗಳೂರು ಪಂದ್ಯದ ಟಿಕೆಟ್ ಕೇವಲ ₹500 ಮಾತ್ರ..!
ವಿಶ್ವಕಪ್ ಟೂರ್ನಿ ಬಳಿಕ ಟೀಂ ಇಂಡಿಯಾದಿಂದ ಅವಕಾಶ ವಂಚಿತರಾಗಿರುವ ದಿನೇಶ್ ಕಾರ್ತಿಕ್, ವೆಸ್ಟ್ ಇಂಡೀಸ್ ಹಾಗೂ ಸೌತ್ ಆಫ್ರಿಕಾ ಸರಣಿಗೂ ಆಯ್ಕೆಯಾಗಿಲ್ಲ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.