ಕ್ರಿಕೆಟ್ ಸೀಕ್ರೆಟ್ಸ್: ರೋಹಿತ್ ದ್ವಿಶತಕಕ್ಕೆ ಧೂಳೀಪಟವಾಗಿತ್ತು ಲಂಕಾ!

By Web DeskFirst Published Dec 13, 2018, 1:49 PM IST
Highlights

ಕ್ರಿಕೆಟ್‌ನಲ್ಲಿ ಪ್ರತಿ ದಿನವೂ ಒಂದಲ್ಲ ಒಂದು ದಾಖಲೆಗಳು ನಿರ್ಮಾಣವಾಗುತ್ತೆ. ಇಂತಹ ದಾಖಲೆಗಳು, ಐತಿಹಾಸಿಕ ನಿಮಿಷಗಳನ್ನ ಮೆಲುಕು ಹಾಕುವ ವಿಶೇಷ ಪ್ರಯತ್ನವೇ ಕ್ರಿಕೆಟ್ ಸೀಕ್ರೆಟ್ಸ್. ಹಾಗಾದರೆ ಡಿಸೆಂಬರ್ 13ರ ಸ್ಪೆಷಾಲಿಟಿ ಏನು? ಇಲ್ಲಿದೆ ವಿವರ.

ಬೆಂಗಳೂರು(ಡಿ.13): ಟೀಂ ಇಂಡಿಯಾ ಸ್ಫೋಟಕ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ ಕ್ರೀಸ್ ಕಚ್ಚಿ ನಿಂತರೆ ಎದುರಾಳಿ ಧೂಳೀಪಟವಾಗೋದರಲ್ಲಿ ಯಾವುದೇ ಅನುಮಾನವಿಲ್ಲ. ಇದು ಹಲವು ಭಾರಿ ಸಾಬೀತಾಗಿದೆ. ಇದೇ ದಿನ ಅಂದ್ರೆ ಡಿ.13 ರಂದು ರೋಹಿತ್ ಶರ್ಮಾ ಲಂಕಾ ದಹನ ಮಾಡಿದ್ದರು.

ಇದನ್ನೂ ಓದಿ: ಸೌರವ್ ಗಂಗೂಲಿ ನಾಯಕತ್ವ ಉಳಿಸಿತ್ತು ಲಕ್ಷ್ಮಣ್ 281 ರನ್!

ಡಿಸೆಂಬರ್ 13, 2017. ಈ ದಿನ ಮೊಹಾಲಿಯಲ್ಲಿ ನಡೆದ ಶ್ರೀಲಂಕಾ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ರೋಹಿತ್ ಶರ್ಮಾ ದ್ವಿಶತಕ ಸಿಡಿಸಿ ಮಿಂಚಿದರು. ರೋಹಿತ್ 153 ಎಸೆತದಲ್ಲಿ 13 ಬೌಂಡರಿ ಹಾಗೂ 12 ಸಿಕ್ಸರ್ ನೆರವಿನಿಂದ ಅದೇಯ 208 ರನ್ ಸಿಡಿಸಿದ್ದರು.

ಇದನ್ನೂ ಓದಿ: ಇನಿಂಗ್ಸ್‌ನಲ್ಲಿ 10 ವಿಕೆಟ್‌- ಕುಂಬ್ಳೆ ದಾಖಲೆ ಸರಿಗಟ್ಟಿದ ಮಣಿಪುರ ವೇಗಿ

ರೋಹಿತ್ ಬ್ಯಾಟಿಂಗ್‌ನಿಂದ ಟೀಂ ಇಂಡಿಯಾ 141 ರನ್ ಗೆಲುವು ಸಾಧಿಸಿತ್ತು. ರೋಹಿತ್ ಈ ದಾಖಲೆ ಬ್ಯಾಟಿಂಗ್ ಪ್ರದರ್ಶನಕ್ಕೆ 1 ವರ್ಷ ಸಂದಿದೆ.  ಇದು ರೋಹಿತ್ ಶರ್ಮಾ ಸಿಡಿಸಿದ 3ನೇ ದ್ವಿಶತಕವಾಗಿತ್ತು. ಇದಕ್ಕೂ ಮೊದಲು ಆಸ್ಟ್ರೇಲಿಯಾ ವಿರುದ್ಧ 209 ಹಾಗೂ ಶ್ರೀಲಂಕಾ ವಿರುದ್ದ 264 ರನ್ ಸಿಡಿಸಿದ್ದಾರೆ.

ಇದನ್ನೂ ಓದಿ: ಡೆಲ್ಲಿ ,ಕೆಕೆಆರ್ ಬಳಿಕ ಹೊಸ ತಂಡದತ್ತ ಗೌತಮ್ ಗಂಭೀರ್?

ಏಕದಿನ ಕ್ರಿಕೆಟ್‌ನಲ್ಲಿ ಮೊದಲು ದ್ವಿಶತಕ ಸಿಡಿಸಿದ ಹೆಗ್ಗಳಿಕೆ ಸಚಿನ್ ತೆಂಡೂಲ್ಕರ್ ಪಾಲಾಗಿದೆ. ಬಳಿಕ ವಿರೇಂದ್ರ ಸೆಹ್ವಾಗ್ ಡಬಲ್ ಸೆಂಚುರಿ ಸಿಡಿಸಿದ್ದರು. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 6 ಬ್ಯಾಟ್ಸ್‌ಮನ್‌ಗಳಿಂದ 8 ದ್ವಿಶತಕ ದಾಖಲಾಗಿದೆ. ಇದರಲ್ಲಿ 3 ಡಬಲ್ ಸೆಂಚುರಿ ರೋಹಿತ್ ಹೆಸರಲ್ಲಿದೆ.

ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ: 

click me!