ಭಾರತ-ನ್ಯೂಜಿಲೆಂಡ್ ನಡುವೆ ಮೊದಲ ಟಿ20 ಪಂದ್ಯವು ಫೆಬ್ರವರಿ 6ರಂದು ವೆಲ್ಲಿಂಗ್ಟನ್’ನಲ್ಲಿ ನಡೆಯಲಿದೆ. ಆ ಬಳಿಕ 8 ಮತ್ತು 10ರಂದು ಕ್ರಮವಾಗಿ ಆಕ್ಲೆಂಡ್ ಹಾಗೂ ಹ್ಯಾಮಿಲ್ಟನ್’ನಲ್ಲಿ ನಡೆಯಲಿದೆ.
ವೆಲ್ಲಿಂಗ್ಟನ್[ಫೆ.04]: ಭಾರತ ವಿರುದ್ಧ ಏಕದಿನ ಸರಣಿಯಲ್ಲಿ 4-1 ಅಂತರದಲ್ಲಿ ಸೋತು ಕಂಗಾಲಾಗಿರುವ ನ್ಯೂಜಿಲೆಂಡ್ ತಂಡಕ್ಕೆ ಮತ್ತೊಂದು ಶಾಕ್ ಎದುರಾಗಿದ್ದು, ಮುಂಬರುವ ಮೂರು ಪಂದ್ಯಗಳ ಟಿ20 ಸರಣಿಯಿಂದ ಸ್ಫೋಟಕ ಆರಂಭಿಕ ಬ್ಯಾಟ್ಸ್’ಮನ್ ಮಾರ್ಟಿನ್ ಗಪ್ಟಿಲ್ ಹೊರಬಿದ್ದಿದ್ದಾರೆ.
ಕಿವೀಸ್ ವಿರುದ್ಧ ಭಾರತಕ್ಕೆ 35 ರನ್ ಗೆಲುವು- 4-1 ಅಂತರದಲ್ಲಿ ಸರಣಿ ಕೈವಶ
ಇದೇ ಫೆಬ್ರವರಿ 06ರಿಂದ ಭಾರತ ವಿರುದ್ಧ ಆರಂಭವಾಗಲಿರುವ ಟಿ20 ಸರಣಿಗೆ ಮಾರ್ಟಿನ್ ಗಪ್ಟಿಲ್ ಬದಲು ಆಲ್ರೌಂಡರ್ ಜೇಮ್ಸ್ ನೀಶಮ್ ಸ್ಥಾನ ಪಡೆದಿದ್ದಾರೆ. ಬೆನ್ನು ನೋವಿನ ಸಮಸ್ಯೆಯಿಂದ ಬಳಲುತ್ತಿರುವ ಮಾರ್ಟಿನ್ ಗಪ್ಟಿಲ್ ಚಿಕಿತ್ಸೆ ಪಡೆಯುತ್ತಿದ್ದಾರೆ. 5ನೇ ಪಂದ್ಯದ ಅಭ್ಯಾಸದ ವೇಳೆ ಮಾರ್ಟಿನ್ ಗಪ್ಟಿಲ್ ಬೆನ್ನು ನೋವಿಗೆ ತುತ್ತಾಗಿದ್ದರು. ಹೀಗಾಗಿ ಅಂತಿಮ ಏಕದಿನ ಪಂದ್ಯದಿಂದಲೂ ಹೊರಗುಳಿದಿದ್ದರು. ಹೀಗಾಗಿ ಕಾಲಿನ್ ಮನ್ರೋ ಕಿವೀಸ್ ತಂಡದಲ್ಲಿ ಸ್ಥಾನ ಪಡೆದಿದ್ದರು. ಗಪ್ಟಿಲ್ ಅನುಪಸ್ಥಿತಿ ಯುವ ಆಲ್ರೌಂಡರ್ ನೀಶಮ್’ಗೆ ಅವಕಾಶ ಕಲ್ಪಿಸಿದ್ದು, ಭಾರತ ವಿರುದ್ಧದ ಅಂತಿಮ ಏಕದಿನ ಪಂದ್ಯದಲ್ಲಿ ಕೇವಲ 32 ಎಸೆತಗಳಲ್ಲಿ 44 ರನ್ ಸಿಡಿಸಿದ್ದರು.
ಇಂಡೊ-ಕಿವೀಸ್ ಸರಣಿಯಲ್ಲಿ ನಿರ್ಮಾಣವಾದ ಅಪರೂಪದ ದಾಖಲೆಗಳಿವು..!
ಭಾರತ-ನ್ಯೂಜಿಲೆಂಡ್ ನಡುವೆ ಮೊದಲ ಟಿ20 ಪಂದ್ಯವು ಫೆಬ್ರವರಿ 6ರಂದು ವೆಲ್ಲಿಂಗ್ಟನ್’ನಲ್ಲಿ ನಡೆಯಲಿದೆ. ಆ ಬಳಿಕ 8 ಮತ್ತು 10ರಂದು ಕ್ರಮವಾಗಿ ಆಕ್ಲೆಂಡ್ ಹಾಗೂ ಹ್ಯಾಮಿಲ್ಟನ್’ನಲ್ಲಿ ನಡೆಯಲಿದೆ.
ಟಿ20 ಸರಣಿಗೆ ನ್ಯೂಜಿಲೆಂಡ್ ತಂಡ ಹೀಗಿದೆ:
ಕೇನ್ ವಿಲಿಯಮ್ಸನ್[ನಾಯಕ], ಬ್ರಾಸ್’ವೆಲ್, ಗ್ರಾಂಡ್’ಹೋಂ, ಫರ್ಗ್ಯುಸನ್, ನೀಶಮ್, ಕುಗ್ಲಿಜಿನ್, ಮಿಚೆಲ್, ಮನ್ರೋ, ಸ್ಯಾಂಟ್ನರ್, ಸೈಫರ್ಟ್, ಸೋದಿ, ಸೌಥಿ, ಟೇಲರ್, ಟಿಕ್ನರ್.