ICC ನೂತನ ಏಕದಿನ ರ‍್ಯಾಂಕಿಂಗ್ ಪ್ರಕಟ: ಕೊಹ್ಲಿ, ಬುಮ್ರಾ ನಂ.1, ಟೀಂ ಇಂಡಿಯಾ ನಂ.2

Published : Feb 04, 2019, 03:46 PM IST
ICC ನೂತನ ಏಕದಿನ ರ‍್ಯಾಂಕಿಂಗ್ ಪ್ರಕಟ: ಕೊಹ್ಲಿ, ಬುಮ್ರಾ ನಂ.1, ಟೀಂ ಇಂಡಿಯಾ ನಂ.2

ಸಾರಾಂಶ

ಟೀಂ ಇಂಡಿಯಾ ನಾಯಕ ಮೊದಲ ಸ್ಥಾನದಲ್ಲಿದ್ದರೆ, ಉಪನಾಯಕ ರೋಹಿತ್ ಶರ್ಮಾ ಎರಡನೇ ಸ್ಥಾನ ಉಳಿಸಿಕೊಂಡಿದ್ದಾರೆ. ಆಸಿಸ್ ಹಾಗೂ ಕಿವೀಸ್ ಎದುರು ಸ್ಥಿರ ಪ್ರದರ್ಶನ ತೋರಿದ ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಮೂರು ಸ್ಥಾನ ಏರಿಕೆ ಕಂಡು 17ನೇ ಸ್ಥಾನಕ್ಕೆ ಲಗ್ಗೆಯಿಟ್ಟಿದ್ದಾರೆ. 

ದುಬೈ[ಫೆ.04]: ಭಾರತ-ನ್ಯೂಜಿಲೆಂಡ್ ನಡುವಿನ ಏಕದಿನ ಸರಣಿ ಮುಕ್ತಾಯವಾದ ಬೆನ್ನಲ್ಲೇ ಐಸಿಸಿ ICC ನೂತನ ಏಕದಿನ ರ‍್ಯಾಂಕಿಂಗ್ ಪ್ರಕಟವಾಗಿದ್ದು, ಬ್ಯಾಟಿಂಗ್ ವಿಭಾಗದಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮೊದಲ ಸ್ಥಾನದಲ್ಲೇ ಮುಂದುವರೆದಿದ್ದಾರೆ. ಬೌಲರ್’ಗಳ ವಿಭಾಗದಲ್ಲಿ ಜಸ್ಪ್ರೀತ್ ಬುಮ್ರಾ ಅಗ್ರಸ್ಥಾನ ಉಳಿಸಿಕೊಂಡಿದ್ದಾರೆ. ಇನ್ನು ತಂಡಗಳ ವಿಭಾಗದಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಹಿಂದಿಕ್ಕಿ ಭಾರತ ಎರಡನೇ ಸ್ಥಾನಕ್ಕೇರಿದೆ.

ಕಿವೀಸ್ ವಿರುದ್ಧ ಭಾರತಕ್ಕೆ 35 ರನ್ ಗೆಲುವು- 4-1 ಅಂತರದಲ್ಲಿ ಸರಣಿ ಕೈವಶ

ಟೀಂ ಇಂಡಿಯಾ ನಾಯಕ ಮೊದಲ ಸ್ಥಾನದಲ್ಲಿದ್ದರೆ, ಉಪನಾಯಕ ರೋಹಿತ್ ಶರ್ಮಾ ಎರಡನೇ ಸ್ಥಾನ ಉಳಿಸಿಕೊಂಡಿದ್ದಾರೆ. ಆಸಿಸ್ ಹಾಗೂ ಕಿವೀಸ್ ಎದುರು ಸ್ಥಿರ ಪ್ರದರ್ಶನ ತೋರಿದ ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಮೂರು ಸ್ಥಾನ ಏರಿಕೆ ಕಂಡು 17ನೇ ಸ್ಥಾನಕ್ಕೆ ಲಗ್ಗೆಯಿಟ್ಟಿದ್ದಾರೆ. ಇನ್ನು ಕೇದಾರ್ ಜಾಧವ್ 8 ಸ್ಥಾನ ಏರಿಕೆ ಕಂಡು 35ನೇ ಸ್ಥಾನ ತಲುಪಿದ್ದಾರೆ. ಇನ್ನು ಬೌಲರ್’ಗಳ ವಿಭಾಗದಲ್ಲಿ ಭಾರತ ವಿರುದ್ಧ ಮಿಂಚಿನ ಪ್ರದರ್ಶನ ತೋರಿದ ಟ್ರೆಂಟ್ ಬೌಲ್ಟ್ 7 ಸ್ಥಾನ ಏರಿಕೆ ಕಂಡು ಮೂರನೇ ಸ್ಥಾನಕ್ಕೆ ಲಗ್ಗೆಯಿಟ್ಟಿದ್ದಾರೆ. ಯುಜುವೇಂದ್ರ ಚಹಲ್ ಒಂದು ಸ್ಥಾನ ಭಡ್ತಿ ಪಡೆದು 5ನೇ ಸ್ಥಾನಕ್ಕೇರಿದರೆ, ಭುವನೇಶ್ವರ್ ಕುಮಾರ್ 6 ಸ್ಥಾನ ಏರಿಕೆ ಕಂಡು 17ನೇ ಸ್ಥಾನಕ್ಕೇರಿದ್ದಾರೆ.

ಎಬಿಡಿ ಅಪರೂಪದ ದಾಖಲೆ ಸರಿಗಟ್ಟಿದ ಪಾಂಡ್ಯ..! 

ತಂಡಗಳ ವಿಭಾಗದಲ್ಲಿ 126 ರೇಟಿಂಗ್ ಅಂಕಗಳೊಂದಿಗೆ ಇಂಗ್ಲೆಂಡ್ ಮೊದಲ ಸ್ಥಾನದಲ್ಲೇ ಮುಂದುವರೆದಿದ್ದರೆ, 122 ಅಂಕಗಳೊಂದಿಗೆ ಭಾರತ ಎರಡನೇ ಸ್ಥಾನಕ್ಕೇರಿದೆ. ದಕ್ಷಿಣ ಆಫ್ರಿಕಾ ಹಾಗೂ ನ್ಯೂಜಿಲೆಂಡ್ 111 ಅಂಕಗಳನ್ನು ಹೊಂದಿದ್ದು, ಕ್ರಮವಾಗಿ ಮೂರು ಮತ್ತು ನಾಲ್ಕನೇ ಸ್ಥಾನದಲ್ಲಿವೆ. ನ್ಯೂಜಿಲೆಂಡ್ ಮೂರನೇ ಸ್ಥಾನದಿಂದ ನಾಲ್ಕನೇ ಸ್ಥಾನಕ್ಕೆ ಕುಸಿದಿದೆ.

ತಂಡಗಳ ರ‍್ಯಾಂಕಿಂಗ್ ಪಟ್ಟಿ:
ರ‍್ಯಾಂಕಿಂಗ್ ತಂಡ

1    ಇಂಗ್ಲೆಂಡ್(-)
2    ಭಾರತ(+1)
3    ದಕ್ಷಿಣ ಆಫ್ರಿಕಾ(-)
4    ನ್ಯೂಜಿಲೆಂಡ್(-1)
5    ಪಾಕಿಸ್ತಾನ(-)
6    ಆಸ್ಟ್ರೇಲಿಯಾ(-)
7    ಬಾಂಗ್ಲಾದೇಶ(-)
8    ಶ್ರೀಲಂಕಾ(-)
9    ವೆಸ್ಟ್ ಇಂಡೀಸ್(-)
10    ಆಫ್ಘಾನಿಸ್ತಾನ(-)

ಬ್ಯಾಟ್ಸ್’ಮನ್’ಗಳ ರ‍್ಯಾಂಕಿಂಗ್ ಪಟ್ಟಿ
ರ‍್ಯಾಂಕಿಂಗ್    ಬ್ಯಾಟ್ಸ್’ಮನ್

1        ವಿರಾಟ್ ಕೊಹ್ಲಿ(-)
2         ರೋಹಿತ್ ಶರ್ಮಾ(-) 
3        ರಾಸ್ ಟೇಲರ್(-)
4        ಜೋ ರೂಟ್(-)
5        ಬಾಬರ್ ಅಜಂ(-)
6        ಫಾಫ್ ಡು ಪ್ಲೆಸಿಸ್(-)
7        ಶೈ ಹೋಪ್(-)
8        ಕ್ವಿಂಟನ್ ’ಡಿ’ಕಾಕ್(+1)
9        ಫಖರ್ ಜಮಾನ್(+2)
10        ಶಿಖರ್ ಧವನ್(-2)

ಬೌಲರ್’ಗಳ ರ‍್ಯಾಂಕಿಂಗ್ ಪಟ್ಟಿ
ರ‍್ಯಾಂಕಿಂಗ್    ಬೌಲರ್’ಗಳು
1        ಜಸ್ಪ್ರೀತ್ ಬುಮ್ರಾ(-)
2        ರಶೀದ್ ಖಾನ್(-)
3        ಟ್ರೆಂಟ್ ಬೌಲ್ಟ್(+7)
4        ಕುಲ್ದೀಪ್ ಯಾದವ್(-1)
5        ಯುಜುವೇಂದ್ರ ಚಹಲ್(+1)
6        ಮುಷ್ಫಿಕರ್ ರಹಮಾನ್(-1)
7        ಕಗಿಸೋ ರಬಾಡ(-3)
8        ಆದಿಲ್ ರಶೀದ್(-2)
9        ಮುಜೀಬ್ ಉರ್ ರೆಹಮಾನ್(-1)
10      ಜೋಸ್ ಹ್ಯಾಜಲ್’ವುಡ್(-1) 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

20 ಮ್ಯಾಚ್ ಬಳಿಕ ಕೊನೆಗೂ ಟಾಸ್ ಗೆದ್ದ ಭಾರತ! ದಕ್ಷಿಣ ಆಫ್ರಿಕಾ ತಂಡದಲ್ಲಿ 2 ಬದಲಾವಣೆ!
ಭಾರತ ಎದುರಿನ 3ನೇ ಏಕದಿನ ಪಂದ್ಯಕ್ಕೂ ಮುನ್ನ ದಕ್ಷಿಣ ಆಫ್ರಿಕಾಗೆ ಬಿಗ್ ಶಾಕ್! 2 ಸ್ಟಾರ್ ಆಟಗಾರರು ಔಟ್!