ಕಾಮನ್‌ವೆಲ್ತ್ ಗೇಮ್ಸ್‌ನಿಂದ ಬ್ಯಾಡ್ಮಿಂಟನ್, ಕುಸ್ತಿ, ಕ್ರಿಕೆಟ್, ಟಿಟಿ, ಶೂಟಿಂಗ್‌ಗೆ ಕೊಕ್!

By Kannadaprabha NewsFirst Published Oct 23, 2024, 11:56 AM IST
Highlights

2026ರ ಗ್ಲಾಸ್ಗೋ ಕಾಮನ್‌ವೆಲ್ತ್ ಗೇಮ್ಸ್‌ ಕ್ರೀಡಾಕೂಟದಿಂದ ಕ್ರಿಕೆಟ್, ಹಾಕಿ, ಬ್ಯಾಡ್ಮಿಂಟನ್ ಸೇರಿ 10 ಪ್ರಮುಖ ಕ್ರೀಡೆಗಳನ್ನು ಕೈಬಿಡಲಾಗಿದೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ

ಲಂಡನ್: ವೆಚ್ಚ ಕಡಿತಗೊಳಿಸುವ ನಿಟ್ಟಿನಲ್ಲಿ 2026ರ ಗ್ಲಾಸ್ಗೋ ಕಾಮನ್‌ವೆಲ್ತ್ ಗೇಮ್ಸ್‌ನಿಂದ ಪ್ರಮುಖ ಕ್ರೀಡೆಗಳನ್ನು ಕೈಬಿಡಲು ಆಯೋಜಕರು ನಿರ್ಧರಿಸಿದ್ದಾರೆ. ಹಾಕಿ ಮಾತ್ರವಲ್ಲದೇ ಕ್ರಿಕೆಟ್, ಬ್ಯಾಡ್ಮಿಂಟನ್, ಕುಸ್ತಿ, ಶೂಟಿಂಗ್, ಟೇಬಲ್ ಟೆನಿಸ್ ಸೇರಿ 10 ಕ್ರೀಡೆಗಳಿಗೆ ಕೊಕ್ ನೀಡಲಾಗಿದ್ದು, ಕೇವಲ 10 ಕ್ರೀಡೆಗಳನ್ನು ಆಡಿಸಲಾಗುತ್ತದೆ ಎಂದು ಆಯೋಜಕರು ಮಂಗಳವಾರ ತಿಳಿಸಿದ್ದಾರೆ.

2026ರ ಜು.23ರಿಂದ ಆ.2ರ ವರೆಗೆ 4 ಕ್ರೀಡಾಂಗಣಗಳಲ್ಲಿ ಗೇಮ್ಸ್ ಆಯೋಜನೆ ಗೊಳ್ಳಲಿದೆ. ಅಥ್ಲೆಟಿಕ್ಸ್, ಈಜು, ಜಿಮ್ಯಾಸ್ಟಿಕ್, ಸೈಕ್ಲಿಂಗ್, ನೆಟ್‌ಬಾಲ್, ವೇಟ್‌ಲಿಫ್ಟಿಂಗ್, ಬಾಕಿಂಗ್, ಜುಡೊ, ಬೌಲ್ ಹಾಗೂ 3X3 135 ಬಾಸ್ಕೆಟ್‌ಬಾಲ್ ಕ್ರೀಡೆಗಳನ್ನು ಆಡಿಸಲು ಆಯೋಜಕರು ನಿರ್ಧರಿಸಿದ್ದಾರೆ.

Latest Videos

ಬಜರಂಗ್-ವಿನೇಶ್ ಎದುರು ಸಾಕ್ಷಿ ಮಲಿಕ್ ಗಂಭೀರ ಆರೋಪ: ತುಟಿಬಿಚ್ಚಿದ ಕಾಂಗ್ರೆಸ್ ಶಾಸಕಿ ಫೋಗಟ್!

ಗೇಮ್ಸ್‌ನಿಂದ ಕೈಬಿಟ್ಟಿರುವ ಬಹುತೇಕ ಕ್ರೀಡೆಗಳಲ್ಲಿ ಭಾರತ ಹೆಚ್ಚಿನ ಪ್ರಾಬಲ್ಯವಿತ್ತು. ಆದರೆ 2026ರ ಗೇಮ್‌ನಿಂದ ಈ ಕ್ರೀಡೆಗಳನ್ನು ಕೈಬಿಟ್ಟಿರುವುದು ಭಾರತಕ್ಕೆ ಭಾರಿ ಹಿನ್ನಡೆ ಉಂಟು ಮಾಡಲಿದೆ. ಭಾರತ ಶೂಟಿಂಗ್‌ನಲ್ಲಿ ಬರೋಬ್ಬರಿ 135 ಪದಕ ಗೆದ್ದಿದ್ದರೆ, ಕುಸ್ತಿಯಲ್ಲಿ 114, ಬ್ಯಾಡ್ಮಿಂಟನ್ ನಲ್ಲಿ 31 ಪದಕ ಪಡೆದಿದೆ. ಶೂಟಿಂಗ್ ಸ್ಪರ್ಧೆಯನ್ನು ಕಳೆದ ಬಾರಿ ಗೇಮ್ಸ್‌ನಿಂದಲೇ ಹೊರಗಿಡಲಾಗಿತ್ತು. ಆರ್ಚರಿ 2010ರಲ್ಲಿ ಕೊನೆ ಬಾರಿ ಆಡಿಲಾಗಿದ್ದು, ಈ ಬಾರಿ ಮತ್ತೆ ಹೊರಗಿಡಲಾಗಿದೆ. ಉಳಿದಂತೆ ಬ್ಯಾಡ್ಮಿಂಟನ್ 1966ರಿಂದಲೂ ಆಡಿಸಲಾಗುತ್ತಿತ್ತು. ಹಾಕಿ ಮತ್ತು ಸ್ಕ್ವಾಶ್ 1998ರಲ್ಲಿ ಸೇರ್ಪಡೆ ಗೊಂಡಿದ್ದರೆ, ಟೇಬಲ್ ಟೆನಿಸ್ 2002ರಿಂದ ಆಡಿಸಲಾಗುತ್ತಿದೆ. ಕ್ರಿಕೆಟ್ 2022ರಲ್ಲಿ ಮರು ಸೇರ್ಪಡೆಗೊಳಿಸಲಾಗಿತ್ತು.

ಗೇಮ್ಸ್ ಬಹಿಷ್ಕರಿಸಲು ದಿಗ್ಗಜ ಅಥ್ಲೀಟ್‌ಗಳ ಕರೆ

ಕಾಮನ್‌ವೆಲ್ತ್ ಗೇಮ್ಸ್‌ನಿಂದ ಪ್ರಮುಖ ಕ್ರೀಡೆಗಳನ್ನು ಹೊರಗಿಟ್ಟಿರುವುದಕ್ಕೆ ಭಾರತ ಹಾಕಿ ಸಂಸ್ಥೆ, ಕುಸ್ತಿ ಫೆಡರೇಶನ್, ರೈಫಲ್ ಸಂಸ್ಥೆ ಅಸಮಾಧಾನ ವ್ಯಕ್ತಪಡಿಸಿದೆ. ಇನ್ನು ಬ್ಯಾಡ್ಮಿಂಟನ್ ದಿಗ್ಗಜರಾದ ಪುಲ್ಲೇಲಾ ಗೋಪಿಚಂದ್, ವಿಮಲ್ ಕುಮಾರ್ 2026ರ ಗೇಮ್ಸ್‌ನಲ್ಲಿ ಭಾರತ ತನ್ನ ತಂಡವನ್ನು ಕಳುಹಿಸಬಾರದು ಎಂದು ತಿಳಿಸಿದ್ದಾರೆ.

ಮಹಿಳಾ ಟಿ20 ವಿಶ್ವಕಪ್ ಚಾಂಪಿಯನ್‌ ನ್ಯೂಜಿಲೆಂಡ್‌ಗೆ ಸಿಕ್ಕ ನಗದು ಬಹುಮಾನ ಎಷ್ಟು? ಭಾರತಕ್ಕೆ ಸಿಕ್ಕಿದ್ದೆಷ್ಟು?

ತೂಗುಯ್ಯಾಲೆಯಲ್ಲಿ ಕಾಮನ್‌ವೆಲ್ತ್ ಭವಿಷ್ಯ

1930ರಲ್ಲಿ ಆರಂಭಗೊಂಡಿರುವ ಕಾಮನ್‌ವೆಲ್ತ್ ಗೇಮ್ಸ್, ಒಲಿಂಪಿಕ್ಸ್‌ನಂತೆಯೇ ಪ್ರತಿಷ್ಠಿತ ಕ್ರೀಡಾಕೂಟ. ಆದರೆ ಸದ್ಯ ಕಾಮನ್‌ವೆಲ್ತ್ ಗೇಮ್ಸ್ ಭವಿಷ್ಯವೇ ತೂಗುಯ್ಯಾಲೆಯಲ್ಲಿದೆ. ಹಲವು ದೇಶಗಳು ವೆಚ್ಚ ಹೆಚ್ಚಳ ಕಾರಣಕ್ಕೆ ಗೇಮ್ಸ್ ಆಯೋಜನೆಗೆ ಮುಂದೆ ಬರುತ್ತಿಲ್ಲ. 2022ರಲ್ಲಿ ದಕ್ಷಿಣ ಆಫ್ರಿಕಾದ ಡರ್ಬನ್‌ಗೆ ಗೇಮ್ಸ್‌ನ ಆತಿಥ್ಯ ಹಕ್ಕು ಲಭಿಸಿದ್ದರೂ, ಬಳಿಕ ಹಿಂದೆ ಸರಿದಿತ್ತು. ಹೀಗಾಗಿ ಗೇಮ್ಸ್ ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆದಿತ್ತು. 2026ರ ಗೇಮ್ಸ್ ಆತಿಥ್ಯ ಹಕ್ಕಿನಿಂದ ಇತ್ತೀಚೆಗಷ್ಟೇ ಆಸ್ಟ್ರೇಲಿಯಾ ಹಿಂದೆ ಸರಿದ ಕಾರಣ, ಸ್ಯಾಟೆಂಡ್ ಗ್ಲಾಸ್ಕೋ ನಗರದಲ್ಲಿ ಮುಂದಿನ ಗೇಮ್ಸ್ ನಡೆಯಲಿದೆ. ಆದರೆ ಅರ್ಧಕ್ಕರ್ಧ ಕ್ರೀಡೆಗಳನ್ನೇ ಕೈಬಿಡಲಾಗಿದೆ.
 

click me!