ರಿಯೋ ಒಲಿಂಪಿಕ್ಸ್ ಕಂಚಿನ ಪದಕ ವಿಜೇತೆ ಸಾಕ್ಷಿ ಮಲಿಕ್, ಬಬಿತಾ ಪೋಗಟ್ ವಿರುದ್ದ ಗಂಭೀರ ಆರೋಪ ಮಾಡಿದ್ದಾರೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ
ನವದೆಹಲಿ: ಭಾರತೀಯ ಕುಸ್ತಿ ಫೆಡರೇಷನ್ ಮಾಜಿ ಅಧ್ಯಕ್ಷ ಬ್ರಿಜ್‌ಭೂಷಣ್ ಶರಣ್ ಸಿಂಗ್ ಅವರ ವಿರುದ್ದದ ಹೋರಾಟಕ್ಕೆ ಬಿಜೆಪಿಯಲ್ಲಿರುವ ಬಬಿತಾ ಫೋಗಟ್ ಕೂಡಾ ಪ್ರೇರೇಪಣೆ ನೀಡಿದ್ದರು. ಯಾಕೆಂದರೆ ಬಬಿತಾ ಕೂಡಾ ಭಾರತೀಯ ಕುಸ್ತಿ ಫೆಡರೇಷನ್ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿದ್ದರು ಎಂದು ಒಲಿಂಪಿಕ್ಸ್ ಪದಕ ವಿಜೇತ ಮಾಜಿ ಕುಸ್ತಿಪಟು ಸಾಕ್ಷಿ ಮಲಿಕ್ ಗಂಭೀರ ಆರೋಪ ಮಾಡಿದ್ದಾರೆ.
ಇಂಡಿಯಾ ಟುಡೆ ವಾಹಿನಿಯ ಸಂದರ್ಶನವೊಂದರಲ್ಲಿ ಮಾತನಾಡಿರುವ ಸಾಕ್ಷಿ ಮಲಿಕ್, "ಬ್ರಿಜ್‌ಭೂಷಣ್ ಶರಣ್ ಸಿಂಗ್ ವಿರುದ್ದ ಕುಸ್ತಿಪಟುಗಳು ಹೋರಾಡುವಂತೆ ನಮ್ಮೆಲ್ಲರನ್ನು ಹುರಿದುಂಬಿಸಿದ್ದರು. ಅದರಲ್ಲಿ ಬಬಿತಾ ಪೋಗಟ್ ಅವರ ವೈಯುಕ್ತಿಕ ಹಿತಾಸಕ್ತಿಯೂ ಇತ್ತು. ಬಬಿತಾ ಪೋಗಟ್, ಭಾರತೀಯ ಕುಸ್ತಿ ಫೆಡರೇಷನ್ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿದ್ದರು" ಎಂದು ಸಾಕ್ಷಿ ಮಲಿಕ್ ಹೇಳಿದ್ದಾರೆ.
undefined
ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಪಿಚ್‌ಗೆ ನಮಸ್ಕರಿಸಿದ ಕೆಎಲ್ ರಾಹುಲ್, ಟೆಸ್ಟ್ ಕ್ರಿಕೆಟ್‌ಗೆ ವಿದಾಯ?
"ಕುಸ್ತಿಪಟುಗಳಿಗೆ ಪ್ರತಿಭಟನೆ ಮಾಡಲು ಕಾಂಗ್ರೆಸ್ ಬೆಂಬಲಿಸಿತು ಎನ್ನುವ ಗಾಳಿಸುದ್ದಿಯಿದೆ. ಆದರೆ ಅದು ನಿಜವಲ್ಲ. ನಿಜ ಹೇಳಬೇಕೆಂದರೆ ಹರ್ಯಾಣದಲ್ಲಿ ನಾವು ಪ್ರತಿಭಟನೆ ನಡೆಸಲು ನೆರವು ನೀಡಿದ್ದೇ ಬಿಜೆಪಿಯ ಇಬ್ಬರು ನಾಯಕರಾದ ಬಬಿತಾ ಪೋಗಟ್ ಹಾಗೂ ತಿರತ್ ರಾಣಾ" ಎಂದು ಸಾಕ್ಷಿ ಮಲಿಕ್ ಹೇಳಿದ್ದಾರೆ.
ಯುವ ಕುಸ್ತಿಪಟುಗಳಿಗೆ ಭಾರತೀಯ ಕುಸ್ತಿ ಫೆಡರೇಷನ್ ಅಧ್ಯಕ್ಷರಾಗಿದ್ದ ಬ್ರಿಜ್‌ಭೂಷಣ್ ಸಿಂಗ್ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ಬಜರಂಗ್ ಫೂನಿಯಾ, ವಿನೇಶ್ ಫೋಗಟ್ ಹಾಗೂ ಸಾಕ್ಷಿ ಮಲಿಕ್ ನೇತೃತ್ವದಲ್ಲಿ ಬೀದಿಗಿಳಿದು ಪ್ರತಿಭಟನೆ ನಡೆಸಿದ್ದರು. ಇದು ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿತ್ತು. ಕೊನೆಗೆ ಬ್ರಿಜ್ ಭೂಷಣ್ ಸಿಂಗ್, ಭಾರತೀಯ ಕುಸ್ತಿ ಫೆಡರೇಷನ್‌ನಿಂದ ಕೆಳಗಿಳಿದ್ದರು.