ಸಲಹಾ ಸಮಿತಿ ಮುಂದೆ ಹೊಸ ಬೇಡಿಕೆಯಿಟ್ಟ ರವಿಶಾಸ್ತ್ರಿ..!

By Kannadaprabha NewsFirst Published Aug 18, 2019, 1:22 PM IST
Highlights

ಟೀಂ ಇಂಡಿಯಾ ಕೋಚ್ ಆಗಿ ಪುನರಾಯ್ಕೆಯಾಗಿ ಆಯ್ಕೆಯಾಗಿರುವ ರವಿಶಾಸ್ತ್ರಿ, ಸಂದರ್ಶನದ ವೇಳೆ ಕ್ರಿಕೆಟ್ ಸಲಹಾ ಸಮಿತಿ ಮುಂದೆ ಹೊಸದೊಂದು ಬೇಡಿಕೆಯಿಟ್ಟಿದ್ದಾರೆ. ಏನದು ಡಿಮ್ಯಾಂಡ್ ನೀವೇ ನೋಡಿ... 

ನವದೆಹಲಿ[ಆ.18]: ಭಾರತ ಕ್ರಿಕೆಟ್‌ ತಂಡದ ಪ್ರಧಾನ ಕೋಚ್‌ ಆಗಿ ಮತ್ತೊಂದು ಅವಧಿಗೆ ಆಯ್ಕೆಯಾಗಿರುವ ರವಿಶಾಸ್ತ್ರಿ, ಶುಕ್ರವಾರ ಸಂದರ್ಶನದ ವೇಳೆ ಕಪಿಲ್‌ ದೇವ್‌ ನೇತೃತ್ವದ ಕ್ರಿಕೆಟ್‌ ಸಲಹಾ ಸಮಿತಿ ಮುಂದೆ ಮನವಿಯೊಂದನ್ನು ಸಲ್ಲಿಸಿದರು ಎಂದು ವರದಿಯಾಗಿದೆ. 

ಮೊದಲೇ ಫಿಕ್ಸ್ ಆಗಿತ್ತಾ ಟೀಂ ಇಂಡಿಯಾ ಕೋಚ್ ಆಯ್ಕೆ..?

ತಂಡದ ದುರ್ಬಲ ಮಧ್ಯಮ ಕ್ರಮಾಂಕದ ಬಗ್ಗೆ ಸಲಹಾ ಸಮಿತಿ ಸದಸ್ಯರು ಶಾಸ್ತ್ರಿಯನ್ನು ಪ್ರಶ್ನಿಸಿದಾಗ, ಆಟಗಾರರ ಆಯ್ಕೆಯಲ್ಲಿ ತಮ್ಮ ಸಲಹೆಗಳನ್ನು ನೀಡಲು ಅವಕಾಶ ನೀಡುವಂತೆ ಮನವಿ ಮಾಡಿದರು ಎಂದು ಮೂಲಗಳು ತಿಳಿಸಿವೆ.

ಟೀಂ ಇಂಡಿಯಾ ಕೋಚ್ ರವಿಶಾಸ್ತ್ರಿ ಮುಂದಿವೆ 4 ಸವಾಲುಗಳು..!

‘ಕಳೆದ ಒಂದು ವರ್ಷದಿಂದ ಶಾಸ್ತ್ರಿಯನ್ನು ಆಯ್ಕೆ ಸಮಿತಿ ಸಭೆಗಳಿಂದ ಹೊರಗಿಡಲಾಗುತ್ತಿದೆ. ಆಯ್ಕೆಗಾರರ ಜತೆ ನಾಯಕ ಮಾತ್ರ ಸಂವಹನ ನಡೆಸುತ್ತಿದ್ದಾರೆ’ ಎಂದು ಸಲಹಾ ಸಮಿತಿ ಸದಸ್ಯರೊಬ್ಬರು ಹೇಳಿದ್ದಾರೆ. ‘ವಿಶ್ವಕಪ್‌ ವೇಳೆ ಮಧ್ಯಮ ಕ್ರಮಾಂಕಕ್ಕೆ ತಂಡದ ಆಡಳಿತಕ್ಕೆ ಅಗತ್ಯವಿದ್ದಂತಹ ಆಟಗಾರರನ್ನು ಆಯ್ಕೆ ಮಾಡಲಿಲ್ಲ. ಆಯ್ಕೆ ಸಮಿತಿ ಸಭೆ ವೇಳೆ ಕೋಚ್‌ ಹಾಗೂ ನಾಯಕ ಇಬ್ಬರ ಸಲಹೆಯನ್ನೂ ಪಡೆಯಬೇಕು ಎನ್ನುವುದು ಶಾಸ್ತ್ರಿ ಮನವಿಯಾಗಿದೆ’ ಎಂದು ಸಲಹಾ ಸಮಿತಿ ಸದಸ್ಯರು ತಿಳಿಸಿದ್ದಾರೆ.

click me!