ವೆಸ್ಟ್ ಇಂಡೀಸ್ ’ಎ’ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಭಾರತದ ಬ್ಯಾಟ್ಸ್‌ಮನ್‌ಗಳು ಭರ್ಜರಿಯಾಗಿಯೇ ಬ್ಯಾಟ್ ಬೀಸಿದ್ದಾರೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...
ಆ್ಯಂಟಿಗಾ(ಆ.18): ವಿಂಡೀಸ್ ‘ಎ’ ವಿರುದ್ಧದ 3 ದಿನಗಳ ಅಭ್ಯಾಸ ಪಂದ್ಯದಲ್ಲಿ ಟೆಸ್ಟ್ ಸ್ಪೆಷಲಿಸ್ಟ್ ಚೇತೇಶ್ವರ ಪೂಜಾರ[100*] ಹಾಗೂ ರೋಹಿತ್ ಶರ್ಮಾ[68] ಆಕರ್ಷಕ ಅರ್ಧಶತಕಗಳ ನೆರವಿನಿಂದ ಮೊದಲ ದಿನ ಮುಕ್ತಾಯಕ್ಕೆ ಭಾರತ ತಂಡ 5 ವಿಕೆಟ್ ಕಳೆದುಕೊಂಡು 297 ರನ್ ಬಾರಿಸಿದೆ.
ಗಾಯಗೊಂಡಿರುವ ಕೊಹ್ಲಿಗೆ ರೆಸ್ಟ್; ರಹಾನೆಗೆ ನಾಯಕ ಪಟ್ಟ?
undefined
ಟಾಸ್ ಗೆದ್ದ ಭಾರತ ತಂಡ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲ ದಿನದ ಭೋಜನ ವಿರಾಮದ ವೇಳೆಗೆ 3 ವಿಕೆಟ್ ನಷ್ಟಕ್ಕೆ 89 ರನ್ ಗಳಿಸಿತು. ಆರಂಭಿಕರಾದ ಮಯಾಂಕ್ ಅಗರ್‌ವಾಲ್ ಹಾಗೂ ಕೆ.ಎಲ್.ರಾಹುಲ್ ಮೊದಲ ವಿಕೆಟ್‌ಗೆ 36 ರನ್ ಜೊತೆಯಾಟವಾಡಿದರು. ಮಯಾಂಕ್ 12 ರನ್ ಗಳಿಸಿ ಔಟಾದ ಬಳಿಕ ಕ್ರೀಸ್‌ಗಿಳಿದ ಚೇತೇಶ್ವರ್ ಪೂಜಾರ, ರಾಹುಲ್ ಜತೆಗೂಡಿ ತಂಡಕ್ಕೆ ಚೇತರಿಕೆ ನೀಡಿದರು. 46 ಎಸೆತಗಳಲ್ಲಿ 5 ಬೌಂಡರಿ, 1 ಸಿಕ್ಸರ್‌ನೊಂದಿಗೆ 36 ರನ್ ಗಳಿಸಿ ರಾಹುಲ್ ವಿಕೆಟ್ ಕಳೆದುಕೊಂಡರು. ಉಪನಾಯಕ ಅಜಿಂಕ್ಯ ರಹಾನೆ ಕೇವಲ 1 ರನ್‌ಗೆ ಔಟಾಗುವ ಮೂಲಕ ನಿರಾಸೆ ಅನುಭವಿಸಿದರು.
ಸೆಪ್ಟೆಂಬರ್ 14ರೊಳಗೆ ಚುನಾವಣೆ ನಡೆಸಿ: ರಾಜ್ಯ ಸಂಸ್ಥೆಗೆ ಬಿಸಿಸಿಐ
ಪೂಜಾರ ಹಾಗೂ ರೋಹಿತ್ ಶರ್ಮಾ ತಂಡಕ್ಕೆ ಆಸರೆಯಾದರು. ಈ ಜೋಡಿ ಶತಕದ ಜತೆಯಾಟವಾಡಿತು. ಪೂಜಾರ 100 ರನ್ ಬಾರಿಸಿ ರಿಟೈರ್ಡ್ ಹರ್ಟ್ ಆದರೆ, ರೋಹಿತ್ 68 ರನ್ ಬಾರಿಸಿದರು. ಪಂತ್ 33 ರನ್ ಬಾರಿಸಿ ವಿಕೆಟ್ ಒಪ್ಪಿಸಿದರೆ, ಹನುಮಾ ವಿಹಾರಿ 37 ಹಾಗೂ ರವೀಂದ್ರ ಜಡೇಜಾ 1 ರನ್ ಬಾರಿಸಿ ಕ್ರೀಸ್’ನಲ್ಲಿದ್ದಾರೆ. ಆ.22ರಿಂದ ಭಾರತ-ವಿಂಡೀಸ್ ಮೊದಲ ಟೆಸ್ಟ್ ಆರಂಭಗೊಳ್ಳಲಿದೆ.