ದುಲೀಪ್‌ ಟ್ರೋಫಿ: ಪೊರೆಲ್‌ ದಾಳಿಗೆ ಕುಸಿದ ಭಾರತ ಬ್ಲೂ

Published : Aug 18, 2019, 11:51 AM IST
ದುಲೀಪ್‌ ಟ್ರೋಫಿ: ಪೊರೆಲ್‌ ದಾಳಿಗೆ ಕುಸಿದ ಭಾರತ ಬ್ಲೂ

ಸಾರಾಂಶ

ಮಳೆ ಹಾಗೂ ಮಂದ ಬೆಳಕಿನ ನಡುವೆಯೂ ಮಿಂಚಿದ ಯುವ ವೇಗಿ ಇಶಾನ್‌ ಪೊರೆಲ್‌ ಭಾರತ ಬ್ಲೂ ತಂಡವನ್ನು ಅಲ್ಪ ಮೊತ್ತಕ್ಕೆ ನಿಯಂತ್ರಿಸುವಲ್ಲಿ ಯಶಸ್ವಿಯಾಗಿದೆ. ಭಾರತ ಗ್ರೀನ್ ಪರ ಪೊರೆಲ್ 3 ವಿಕೆಟ್ ಪಡೆದು ಮಿಂಚಿದರು. ಈ ಕುರಿತಾದ ವರದಿ ಇಲ್ಲಿದೆ ನೋಡಿ...

ಬೆಂಗಳೂರು[ಆ.18]: ಯುವ ವೇಗಿ ಇಶಾನ್‌ ಪೊರೆಲ್‌ (3-26) ಮಾರಕ ದಾಳಿಯಿಂದಾಗಿ ಭಾರತ ಗ್ರೀನ್‌ ತಂಡ, ಶನಿವಾರದಿಂದ ಇಲ್ಲಿನ ಜಸ್ಟ್‌ ಕ್ರಿಕೆಟ್‌ ಮೈದಾನದಲ್ಲಿ ಆರಂಭವಾಗಿರುವ ದುಲೀಪ್‌ ಟ್ರೋಫಿ ಕ್ರಿಕೆಟ್‌ ಟೂರ್ನಿಯ ಮೊದಲ ಇನ್ನಿಂಗ್ಸ್‌ನಲ್ಲಿ ಭಾರತ ಬ್ಲೂ ತಂಡವನ್ನು 6 ವಿಕೆಟ್‌ಗೆ 112 ರನ್‌ ಗಳಿಗೆ ನಿಯಂತ್ರಿಸಿದೆ. 

ಇಂದಿನಿಂದ ಬೆಂಗ್ಳೂರಲ್ಲಿ ದುಲೀಪ್‌ ಟ್ರೋಫಿ

ಮಳೆ ಹಾಗೂ ಮಂದಬೆಳಕಿನ ಕಾರಣ ಮೊದಲ ದಿನದಾಟವನ್ನು ಅವಧಿಗೂ ಮುನ್ನವೇ ಮುಕ್ತಾಯಗೊಳಿಸಲಾಯಿತು. ದಿನದಲ್ಲಿ ಕೇವಲ 49 ಓವರ್‌ಗಳ ಆಟ ಮಾತ್ರ ನಡೆಯಿತು. 

ಟಾಸ್‌ ಗೆದ್ದ ಗ್ರೀನ್‌ ಫೀಲ್ಡಿಂಗ್‌ ಆಯ್ಕೆ ಮಾಡಿಕೊಂಡಿತು. ಭಾರತ ಬ್ಲೂ ಪರ ಋುತುರಾಜ್‌ (30), ಅಂಕಿತ್‌ ಬಾವ್ನೆ (21), ಜಲಜ್‌ ಸಕ್ಸೇನಾ (19) ರನ್‌ ಗಳಿಸಿದರೆ, ನಾಯಕ ಶುಭ್‌ಮನ್‌ ಗಿಲ್‌ (6) ನಿರಾಸೆ ಮೂಡಿಸಿದರು.

ಸ್ಕೋರ್‌: ಭಾರತ ಬ್ಲೂ (ಮೊದಲ ದಿನದಂತ್ಯಕ್ಕೆ) 112/6 (ಋುತುರಾಜ್‌ 30, ಅಂಕಿತ್‌ 21*, ಪೊರೆಲ್‌ 3-26)
 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಹ್ಯಾಟ್ರಿಕ್ ಸೋಲಿನ ಬಳಿಕ ಗೆಲುವಿನ ಖಾತೆ ತೆರೆದ ಸಿಎಸ್‌ಕೆ; ಮ್ಯಾಚ್ ಗೆಲ್ಲಿಸಿದ ಶತಕ ವೀರ ಸಂಜು ಸ್ಯಾಮ್ಸನ್!
ಟೀಂ ಇಂಡಿಯಾ ಸೇರ್ತಾರಾ ವೈಭವ್‌ ಸೂರ್ಯವಂಶಿ? BCCIಗೆ ಹೋಯ್ತು ಹೈ ಇನ್‌ಫ್ಲುಯೆನ್ಸ್ ಮೆಸೇಜ್!