ಭಾರತ ವಿರುದ್ದದ 2 ಟಿ20 ಹಾಗೂ 3 ಏಕದಿನ ಸರಣಿಗೆ ಆಸ್ಟ್ರೇಲಿಯಾ ತಂಡ ಪ್ರಕಟಿಸಲಾಗಿದೆ. ಫೆಬ್ರವರಿ 24 ರಿಂದ ಮಾರ್ಚ್ 13ರ ವರೆಗೆ ನಡೆಯಲಿರುವ ಟೂರ್ನಿಗೆ ಆಸ್ಟ್ರೇಲಿಯಾ 16 ಸದಸ್ಯರ ತಂಡ ಪ್ರಕಟಿಸಿದೆ.
ಮೆಲ್ಬೋರ್ನ್(ಫೆ.07): ಭಾರತ ವಿರುದ್ಧದ ಟಿ20 ಹಾಗೂ ಏಕದಿನ ಸರಣಿಗೆ ಆಸ್ಟ್ರೇಲಿಯಾ ತಂಡ ಪ್ರಕಟಗೊಂಡಿದೆ. ಆದರೆ ಇಂಜುರಿಗೆ ತುತ್ತಾಗಿರುವ ಪ್ರಮುಖ ವೇಗಿ ಮಿಚೆಲ್ ಸ್ಟಾರ್ಕ್ ಟಿ20 ಹಾಗೂ ಏಕದಿನ ಸರಣಿಗೆ ಅಲಭ್ಯರಾಗಿದ್ದಾರೆ. ಭಾರತ ಪ್ರವಾಸ ಕೈಗೊಳ್ಳಲಿರುವ 16 ಸದಸ್ಯರ ತಂಡವನ್ನ ಕ್ರಿಕೆಟ್ ಆಸ್ಟ್ರೇಲಿಯಾ ಪ್ರಕಟಿಸಿದೆ.
ಇದನ್ನೂ ಓದಿ: ವಿಶ್ವಕಪ್ 2019: ಸೆಮಿಫೈನಲ್ ಪ್ರವೇಶಿಸಬಲ್ಲ ಬಲಿಷ್ಠ 4 ತಂಡಗಳು ಯಾವುವು?
undefined
ಆಸ್ಟ್ರೇಲಿಯಾ ಏಕದಿನ/ಟಿ20 ತಂಡ:
ಆ್ಯರೋನ್ ಫಿಂಚ್(ನಾಯಕ), ಪ್ಯಾಟ್ ಕಮಿನ್ಸ್, ಅಲೆಕ್ಸ್ ಕ್ಯಾರಿ, ಜಾಸನ್ ಬೆಹೆನ್‌ಡ್ರಾಫ್, ನಥನ್ ಕೌಲ್ಟರ್ ನೈಲ್, ಪೀಟರ್ ಹ್ಯಾಂಡ್ಸ್‌ಕಾಂಬ್, ಉಸ್ಮಾನ್ ಖವಾಜ, ನತನ್ ಲಿಯೊನ್, ಶಾನ್ ಮಾರ್ಶ್, ಗ್ಲೆನ್ ಮ್ಯಾಕ್ಸ್‌ವೆಲ್, ಜೇ ರಿಚರ್ಡ್ಸನ್, ಕೇನೆ ರಿಚರ್ಡ್ಸನ್, ಡಾರ್ಕಿ ಶಾರ್ಟ್, ಮಾರ್ಕಸ್ ಸ್ಟೊಯಿನ್ಸ್, ಆಶ್ಟನ್ ಟರ್ನರ್, ಆ್ಯಡಮ್ ಜಂಪಾ
ಇದನ್ನೂ ಓದಿ: ಏರ್ ಶೋ ಎಫೆಕ್ಟ್: ಬೆಂಗ್ಳೂರಲ್ಲಿ 2ನೇ ಟಿ20, ಮೊದಲ ಪಂದ್ಯಕ್ಕೆ ವೈಝಾಗ್ ಆತಿಥ್ಯ!
ಫೆಬ್ರವರಿ 24 ರಿಂದ ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಸರಣಿ ಆರಂಭಗೊಳ್ಳಲಿದೆ. 2 ಟಿ20 ಹಾಗೂ 5 ಏಕದಿನ ಪಂದ್ಯಕ್ಕಾಗಿ ಆಸ್ಟ್ರೇಲಿಯಾ ತಂಡ ಭಾರತಕ್ಕೆ ಆಗಮಿಸಲಿದೆ. ಬೆಂಗಳೂರಿನಲ್ಲಿದ್ದ ಮೊದಲ ಟಿ20 ಪಂದ್ಯ(ಫೆ.24) ಇದೀಗ ವಿಶಾಖಪಟ್ಟಣಂಗೆ ಸ್ಥಳಾಂತರಗೊಂಡಿದ್ದು, ಬೆಂಗಳೂರಿನಲ್ಲಿ ಫೆಬ್ರವರಿ 27 ರಂದು ದ್ವಿತೀಯ ಟಿ20 ಪಂದ್ಯ ನಡೆಯಲಿದೆ.
ಇದನ್ನೂ ಓದಿ: 2019ರ ಲೋಕಸಭಾ ಚುನಾವಣೆಗೆ ಸೆಹ್ವಾಗ್ ಹರಿಯಾಣದಿಂದ ಸ್ಪರ್ಧೆ?
ಮಾರ್ಚ್ 2 ರಿಂದ ಏಕದಿನ ಸರಣಿ ಆರಂಭಗೊಳ್ಳಲಿದೆ. ಹೈದರಾಬಾದ್‌ನಲ್ಲಿ ಮೊದಲ ಪಂದ್ಯ ನಡೆಯಲಿದೆ. ಮಾರ್ಚ್ 5 ರಂದು ನಾಗ್ಪುರದಲ್ಲಿ 2ನೇ ಏಕದಿನ, ಮಾರ್ಚ್ 8 ರಂದು ರಾಂಚಿಯಲ್ಲಿ 3ನೇ ಏಕದಿನ, ಮಾರ್ಚ್ 10 ರಂದು ಮೊಹಾಲಿಯಲ್ಲಿ 4ನೇ ಏಕದಿನ ಹಾಗೂ ಮಾರ್ಚ್ 13 ರಂದು ದೆಹಲಿಯಲ್ಲಿ ಅಂತಿಮ ಹಾಗೂ 5ನೇ ಏಕದಿನ ಪಂದ್ಯ ನಡೆಯಲಿದೆ.