2019ರ ಲೋಕಸಭಾ ಚುನಾವಣೆಗೆ ಸೆಹ್ವಾಗ್ ಹರಿಯಾಣದಿಂದ ಸ್ಪರ್ಧೆ?

By Web Desk  |  First Published Feb 7, 2019, 1:18 PM IST

2019ರ ಲೋಕಸಭಾ ಚುನಾವಣೆ ಸಮರಕ್ಕೆ ಬಿಜೆಪಿ ತಯಾರಿ ಭರದಿಂದ ನಡೆಯುತ್ತಿದೆ. ಇದೀಗ ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್ ಲೋಕ ಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷದಿಂದ ಸ್ಪರ್ಧಿಸಲು ಸಜ್ಜಾದ್ರಾ? ಇಲ್ಲಿದೆ ಈ ಕುರಿತ ಮಾಹಿತಿ.


ಚಂಡಿಘಡ(ಫೆ.07): ಲೋಕ ಸಭಾ ಚುನಾವಣಾ ಅಖಾಡ ರಂಗೇರುತ್ತಿದೆ. ಎಲ್ಲಾ ಪಕ್ಷಗಳು ಅಭ್ಯರ್ಥಿಗಳ ಪಟ್ಟಿಯನ್ನ ಅಂತಿಮಗೊಳಿಸಲು ಕಸರತ್ತು ಆರಂಭಿಸಿದೆ. 2019ರಲ್ಲೂ ಅಧಿಕಾರ ಉಳಿಸಿಕೊಳ್ಳಲು ಬಿಜೆಪಿ ಭರ್ಜರಿ ಪ್ಲಾನ್ ಮಾಡಿದೆ. ಇದೀಗ ಹರಿಯಾಣ ಬಿಜೆಪಿ ಅಭ್ಯರ್ಥಿಗಳ ಸಂಭನೀಯ ಪಟ್ಟಿಯಲ್ಲಿ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್ ಹೆಸರನ್ನು ಸೇರಿಸಿಕೊಳ್ಳಲಾಗಿದೆ.

ಇದನ್ನೂ ಓದಿ: ಮುಂಬೈ ವಾಂಖೆಡೆಯಲ್ಲಿ ಐಪಿಎಲ್ ಪಂದ್ಯ ಡೌಟ್-ಬಿಸಿಸಿಐಗೆ ತಲೆನೋವು!

Tap to resize

Latest Videos

undefined

ಹರಿಯಾಣ ಬಿಜೆಪಿ ಮುಖಂಡನ ಪ್ರಕಾರ, ಪಾರ್ಲಿಮೆಂಟರಿ ಎಲೆಕ್ಷನ್ ಮೀಟಿಂಗ್‌ನಲ್ಲಿ ಮಾಜಿ ಕ್ರಿಕೆಟಿಗ ಸೆಹ್ವಾಗ್‌ ಹೆಸರನ್ನೂ ಸೇರಿಸಿಕೊಳ್ಳಲಾಗಿದೆ. ಸೆಹ್ವಾಗ್ ಒಪ್ಪಿದರೆ ಹರಿಯಾಣದ ರೋಹ್ಟಕ್ ಕ್ಷೇತ್ರದಿಂದ ಸ್ಪರ್ಧಿಸಲು ಅವಕಾಶ ಮಾಡಿಕೊಡಲಾಗುವುದು ಎಂದಿದ್ದಾರೆ. ಈ ಮೂಲಕ ಕಳೆದ ಮೂರು ಬಾರಿ ಗೆಲುವಿನ ನಗೆ ಬೀರಿರುವ ಕಾಂಗ್ರೆಸ್‌ನ ದೀಪೇಂದರ್ ಸಿಂಗ್ ಹೂಡಗೆ ಸೆಡ್ಡು ಹೊಡೆಯಲು ಬಿಜೆಪಿ ನಿರ್ಧರಿಸಿದೆ.

ಇದನ್ನೂ ಓದಿ: ಎರಡೇ ದಿನದಲ್ಲಿ ವಿರುಷ್ಕಾ ಫೋಟೋಗೆ 35 ಲಕ್ಷ ಲೈಕ್!

ಸೆಹ್ವಾಗ್ ಮನವೊಲಿಸಲು ಹರಿಯಾಣ ಹಿರಿಯ ಬಿಜೆಪಿ ಮುಖಂಡನ ಹೆಗಲಿಗೆ ಜವಾಬ್ದಾರಿ ನೀಡಲಾಗಿದೆ. ಪಕ್ಷ ಈಗಾಗಲೇ ಸೆಹ್ವಾಗ್ ಹೆಸರನ್ನ ಅಭ್ಯರ್ಥಿಗಳ ಪಟ್ಟಿಗೆ ಸೇರಿಸಿಕೊಂಡಿದೆ. ಇನ್ನೂ ಸೆಹ್ವಾಗ್ ನಿರ್ಧಾರವೇ ಪ್ರಮುಖ ಅನ್ನೋ ಮಾತುಗಳು ಕೇಳಿಬರುತ್ತಿದೆ. ಆದರೆ ಸೆಹ್ವಾಗ್ ಇನ್ನೂ ಕೂಡ ಬಿಜೆಪಿ ಪಾರ್ಟಿ ಸೇರಿಕೊಂಡಿಲ್ಲ ಎಂದು  ಹರಿಯಾಣ ಬಿಜೆಪಿ ರಾಜ್ಯಾಧ್ಯಕ್ಷ ಸುಭಾಶ್ ಬಾರಲಾ ಹೇಳಿದ್ದಾರೆ.
 

click me!