
ಚಾಂಗ್‌ಝೋ[ಸೆ.20]: ಚೀನಾ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಿಂದ ವಿಶ್ವ ಚಾಂಪಿಯನ್, ಭಾರತದ ಪಿ.ವಿ.ಸಿಂಧು ಹೊರಬಿದ್ದಿದ್ದಾರೆ. ಗುರುವಾರ ನಡೆದ ಮಹಿಳಾ ಸಿಂಗಲ್ಸ್ ಪ್ರಿ ಕ್ವಾರ್ಟರ್ ಫೈನಲ್‌ನಲ್ಲಿ ಸಿಂಧು, ಥಾಯ್ಲೆಂಡ್‌ನ ಪೋರ್ನ್‌ಪವಿ ಚೊಚುವಾಂಗ್ ವಿರುದ್ಧ 21-12, 13-21, 19-21 ಗೇಮ್‌ಗಳಲ್ಲಿ ಸೋಲುಂಡು ಆಘಾತ ಅನುಭವಿಸಿದರು.
ಚೀನಾ ಓಪನ್ ಬ್ಯಾಡ್ಮಿಂಟನ್: ಸಿಂಧು ಮುನ್ನಡೆ, ಸೈನಾ ಔಟ್
ಇದೇ ವೇಳೆ ಪುರುಷರ ಸಿಂಗಲ್ಸ್‌ನಲ್ಲಿ ಬಿ.ಸಾಯಿ ಪ್ರಣೀತ್ ಕ್ವಾರ್ಟರ್ ಫೈನಲ್ಗೇರಿದ್ದಾರೆ. 2ನೇ ಸುತ್ತಿನ ಪಂದ್ಯದಲ್ಲಿ ಚೀನಾದ ಗುವಾಂಗ್ಜು ಲು ವಿರುದ್ಧ 21-19, 21-19 ಗೇಮ್‌ಗಳಲ್ಲಿ ಪ್ರಣೀತ್ ಗೆಲುವು ಸಾಧಿಸಿದರು. ಮತ್ತೊಂದು ಪ್ರಿ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಪಾರುಪಳ್ಳಿ ಕಶ್ಯಪ್, ಇಂಡೋನೇಷ್ಯಾದ ಆಂಥ್ಯೋನಿ ಜಿಂಟಿಂಗ್ ವಿರುದ್ಧ 21-23, 21-15, 12-21 ಗೇಮ್‌ಗಳಲ್ಲಿ ಪರಭಾವಗೊಂಡು ಹೊರಬಿದ್ದರು.
ದಸರಾ ಕ್ರೀಡಾಕೂಟ ಉದ್ಘಾಟಿಸಲಿರುವ ಪಿ.ವಿ.ಸಿಂಧು
ಡಬಲ್ಸ್ನಲ್ಲೂ ಹಿನ್ನಡೆ: ಪುರುಷರ ಡಬಲ್ಸ್‌ನ 2ನೇ ಸುತ್ತಿನಲ್ಲಿ ಸಾತ್ವಿಕ್ ಹಾಗೂ ಚಿರಾಗ್ ಶೆಟ್ಟಿ, ಜಪಾನ್‌ನ ತಕೆಶಿ ಕಮುರ ಹಾಗೂ ಕೀಗೊ ಸೊನೊಡ ವಿರುದ್ಧ 19-21, 8-21ರಿಂದ ಸೋತು ಹೊರಬಿದ್ದರು. ಮಿಶ್ರ ಡಬಲ್ಸ್‌ನ 2ನೇ ಸುತ್ತಿನಲ್ಲಿ ಸಾತ್ವಿಕ್ ಹಾಗೂ ಅಶ್ವಿನಿ ಜೋಡಿ ಜಪಾನ್‌ನ ಯುಕಿ ಕನೆಕೊ ಹಾಗೂ ಮಿಸಾಕಿ ಮಟ್ಸುಟೊಮೊ ವಿರುದ್ಧ 11-21, 21-16, 12-21 ಗೇಮ್‌ಗಳಲ್ಲಿ ಸೋಲುಂಡಿತು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.