
ದುಬೈ(ಸೆ.20): ಅಕ್ರಮ ಬೌಲಿಂಗ್ ಶೈಲಿ ಹಿನ್ನೆಲೆಯಲ್ಲಿ ಶ್ರೀಲಂಕಾದ ಆಫ್ ಸ್ಪಿನ್ನರ್ ಅಖಿಲ ಧನಂಜಯ ಅವರನ್ನು ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) ಒಂದು ವರ್ಷ ನಿಷೇಧಕ್ಕೊಳಪಡಿಸಿದೆ. ಮುಂದಿನ 12 ತಿಂಗಳ ಕಾಲ ಅವರು ಬೌಲಿಂಗ್ ಮಾಡುವಂತಿಲ್ಲ.
ಅನುಮಾನಾಸ್ಪದ ಬೌಲಿಂಗ್ ಮಾಡಿದ ಇಬ್ಬರು ಕ್ರಿಕೆಟಿಗರು..!
ಆ.14ರಿಂದ 18ರ ವರೆಗೂ ಗಾಲೆಯಲ್ಲಿ ನಡೆದಿದ್ದ ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ ಧನಂಜಯ ಬೌಲಿಂಗ್ ಶೈಲಿ ಬಗ್ಗೆ ಅಂಪೈರ್‌ಗಳು ಶಂಕೆ ವ್ಯಕ್ತಪಡಿಸಿದ್ದರು. ಚೆನ್ನೈನಲ್ಲಿ ಧನಂಜಯ ಬೌಲಿಂಗ್ ಶೈಲಿ ಪರೀಕ್ಷಿಸಿದಾಗ, ಶೈಲಿ ನಿಯಮಬದ್ಧವಾಗಿಲ್ಲ ಎನ್ನುವುದು ದೃಢಪಟ್ಟಿದೆ ಎಂದು ಐಸಿಸಿ ತಿಳಿಸಿದೆ.
ಲಂಕಾದ ಸ್ಟಾರ್ ಸ್ಪಿನ್ನರ್ ಸಸ್ಪೆಂಡ್..! ಎಲ್ಲಾ ಮಾದರಿಯ ಕ್ರಿಕೆಟ್’ಗೂ ಅನ್ವಯ
ಕಳೆದ ವರ್ಷದ ಡಿಸೆಂಬರ್’ನಲ್ಲೂ ಧನಂಜಯ ಅವರ ಮೇಲೆ ಐಸಿಸಿ ನಿಷೇಧದ ಶಿಕ್ಷೆಗೆ ಗುರಿಪಡಿಸಿತ್ತು. ಎರಡು ವರ್ಷಗಳ ಅಂತರದಲ್ಲಿ ಎರಡೆರಡು ಬಾರಿ ಧನಂಜಯ ನಿಷೇಧಕ್ಕೆ ಗುರಿಯಾದಂತಾಗಿದೆ.
ಅಖಿಲ ಧನಂಜಯ ಶ್ರೀಲಂಕಾ ಪರ ಆರು ಟೆಸ್ಟ್, 36 ಏಕದಿನ ಹಾಗೂ 22 ಟಿ20 ಪಂದ್ಯಗಳನ್ನಾಡಿದ್ದು, ಒಟ್ಟಾರೆ 106 ವಿಕೆಟ್ ಕಬಳಿಸಿದ್ದಾರೆ. ಪಲ್ಲಿಕೆಲೆಯಲ್ಲಿ ನ್ಯೂಜಿಲೆಂಡ್ ವಿರುದ್ಧದ ಟಿ20 ಪಂದ್ಯದಲ್ಲಿ ಧನಂಜಯ ಕಡೆಯ ಬಾರಿಗೆ ಕಣಕ್ಕಿಳಿದಿದ್ದರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.