ಸಾತ್ವಿಕ್-ಚಿರಾಗ್ ಈ ವರ್ಷ 3 ಬಿಡಬ್ಲ್ಯುಎಫ್ ವಿಶ್ವ ಟೂರ್ ಪ್ರಶಸ್ತಿ ಗೆದ್ದಿದ್ದಾರೆ. ಸ್ವಿಸ್ ಓಪನ್ ಸೂಪರ್ 300, ಇಂಡೋನೇಷ್ಯಾ ಓಪನ್ ಸೂಪರ್ 1000, ಕೊರಿಯಾ ಓಪನ್ ಸೂಪರ್ 500 ಟೂರ್ನಿಯಲ್ಲಿ ಚಾಂಪಿಯನ್ ಆಗಿದ್ದಾರೆ.
ಶೆನ್‌ಝೆನ್(ಚೀನಾ): 2ನೇ ಬಾರಿ ಬಿಡಬ್ಲ್ಯುಎಫ್ ಸೂಪರ್ 750 ಕಿರೀಟ ಗೆಲ್ಲುವ ಭಾರತದ ತಾರಾ ಪುರುಷ ಡಬಲ್ಸ್ ಜೋಡಿ ಸಾತ್ವಿಕ್ ಸಾಯಿರಾಜ್-ಚಿರಾಗ್ ಶೆಟ್ಟಿಯ ಕನಸು ಭಗ್ನಗೊಂಡಿದೆ. ಭಾನುವಾರ ಚೀನಾ ಮಾಸ್ಟರ್ಸ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ವಿಶ್ವ ನಂ.5 ಸಾತ್ವಿಕ್-ಚಿರಾಗ್ ಶೆಟ್ಟಿಗೆ ಚೀನಾದ ಲಿಯಾಂಗ್ ವೆಯ್ ಕೆಂಗ್-ವಾಂಗ್ ಚಾಂಗ್ ಜೋಡಿ ವಿರುದ್ಧ 19-21, 21-18, 19-21ರಲ್ಲಿ ವೀರೋಚಿತ ಸೋಲು ಎದುರಾಯಿತು. 1 ಗಂಟೆ 11 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ ಭಾರತದ ಜೋಡಿ ಪ್ರಬಲ ಹೋರಾಟ ಪ್ರದರ್ಶಿಸಿದರೂ ಪ್ರಶಸ್ತಿ ಕೈಗೆಟುಕಲಿಲ್ಲ.
ಸಾತ್ವಿಕ್-ಚಿರಾಗ್ ಈ ವರ್ಷ 3 ಬಿಡಬ್ಲ್ಯುಎಫ್ ವಿಶ್ವ ಟೂರ್ ಪ್ರಶಸ್ತಿ ಗೆದ್ದಿದ್ದಾರೆ. ಸ್ವಿಸ್ ಓಪನ್ ಸೂಪರ್ 300, ಇಂಡೋನೇಷ್ಯಾ ಓಪನ್ ಸೂಪರ್ 1000, ಕೊರಿಯಾ ಓಪನ್ ಸೂಪರ್ 500 ಟೂರ್ನಿಯಲ್ಲಿ ಚಾಂಪಿಯನ್ ಆಗಿದ್ದಾರೆ.
undefined
ಚೊಚ್ಚಲ ಐಟಿಎಫ್ ಕಿರೀಟ ಜಯಿಸಿದ ಶ್ರೀವಲ್ಲಿ ರಶ್ಮಿಕಾ
ಬೆಂಗಳೂರು: ಭಾರತದ ಯುವ ಟೆನಿಸ್ ತಾರೆ, ಹಾಲಿ ರಾಷ್ಟ್ರೀಯ ಚಾಂಪಿಯನ್ ರಶ್ಮಿಕಾ ಶ್ರೀವಲ್ಲಿ ಚೊಚ್ಚಲ ಐಟಿಎಫ್ ಕಿರೀಟ ತಮ್ಮದಾಗಿಸಿಕೊಂಡಿದ್ದಾರೆ. ಬೆಂಗಳೂರಿನಲ್ಲಿ ನಡೆದ ಐಟಿಎಫ್ ಮಹಿಳಾ ವಿಶ್ವ ಟೆನಿಸ್ ಟೂರ್ನಿಯಲ್ಲಿ ಫೈನಲ್‌ನಲ್ಲಿ ಅವರು ಭಾರತದವರೇ ಆದ, ಶ್ರೇಯಾಂಕ ರಹಿತ ಝೀಲ್ ದೇಸಾಯಿ ವಿರುದ್ಧ 6-0, 4-6, 6-3 ಸೆಟ್‌ಗಳಲ್ಲಿ ಜಯಭೇರಿ ಬಾರಿಸಿದರು.
ಟಿ ಶರ್ಟ್‌ನಲ್ಲಿ ಧೂಳು ಒರೆಸಿ ಅಭಿಮಾನಿ ಬೈಕ್ ಮೇಲೆ ಆಟೋಗ್ರಾಫ್ ಹಾಕಿದ ಧೋನಿ!
ಮೊದಲ ಸೆಟ್‌ನಲ್ಲಿ ಪ್ರಾಬಲ್ಯ ಸಾಧಿಸಿದ್ದ ರಶ್ಮಿಕಾಗೆ 2ನೇ ಸೆಟ್‌ನಲ್ಲಿ ಝೀಲ್ ತೀವ್ರ ಪೈಪೋಟಿ ನೀಡಿದರು. ಆದರೆ 3ನೇ ಸೆಟ್‌ನಲ್ಲಿ ಮತ್ತೊಮ್ಮೆ ಪುಟಿದೆದ್ದ ರಶ್ಮಿಕಾ ಚಾಂಪಿಯನ್ ಪಟ್ಟ ಅಲಂಕರಿಸಿದರು. ಟೂರ್ನಿಯುದ್ದಕ್ಕೂ ಝೀಲ್ ಆಕರ್ಷಕ ಪ್ರದರ್ಶನ ತೋರಿದ್ದರೂ ಪ್ರಶಸ್ತಿ ಕೈಗೆಟುಕಲಿಲ್ಲ. ಇದರೊಂದಿಗೆ ರಶ್ಮಿಕಾ 3935 ಯುಎಸ್ ಡಾಲರ್(ಸುಮಾರು ₹3.27 ಲಕ್ಷ) ಬಹುಮಾನ ಮೊತ್ತ ಪಡೆದರೆ, ರನ್ನರ್-ಅಪ್ ಝೀಲ್‌ಗೆ 2107 ಯುಎಸ್ ಡಾಲರ್(ಸುಮಾರು ₹1.75 ಲಕ್ಷ) ಲಭಿಸಿತು.
ಬಿಎಫ್‌ಸಿ-ನಾರ್ಥ್‌ಈಸ್ಟ್ ಪಂದ್ಯ 1-1 ಗೋಲಿನ ಡ್ರಾ
ಗುವಾಹಟಿ: ಈ ಬಾರಿ ಇಂಡಿಯನ್ ಸೂಪರ್ ಲೀಗ್(ಐಎಸ್‌ಎಲ್) ಫುಟ್ಬಾಲ್ ಲೀಗ್‌ನಲ್ಲಿ ಮಾಜಿ ಚಾಂಪಿಯನ್ ಬೆಂಗಳೂರು ಎಫ್‌ಸಿ ಮತ್ತೆ ಗೆಲುವಿನಿಂದ ವಂಚಿತವಾಗಿದೆ. ಭಾನುವಾರ ಇಲ್ಲಿ ನಡೆದ ನಾರ್ಥ್‌ಈಸ್ಟ್ ಯುನೈಟೆಡ್ ಎಫ್‌ಸಿ ವಿರುದ್ಧದ ಪಂದ್ಯದಲ್ಲಿ ಸುನಿಲ್ ಚೆಟ್ರಿ ನಾಯಕತ್ವದ ಬಿಎಫ್‌ಸಿ 1-1 ಗೋಲಿನಿಂದ ಡ್ರಾಗೆ ತೃಪ್ತಿಪಟ್ಟುಕೊಂಡಿತು.
ಚೀನಾ ಮಾಸ್ಟರ್ಸ್: ಫೈನಲ್‌ಗೆ ಸಾತ್ವಿಕ್-ಚಿರಾಗ್ ಜೋಡಿ ಲಗ್ಗೆ
36ನೇ ನಿಮಿಷದಲ್ಲಿ ಚೆಟ್ರಿ ಪೆನಾಲ್ಟಿ ಮೂಲಕ ತಂಡದ ಗೋಲಿನ ಖಾತೆ ತೆರೆದರೆ, ಮೊದಲಾರ್ಧದ ಹೆಚ್ಚುವರಿ ನಿಮಿಷದಲ್ಲಿ ಬಿಎಫ್‌ಸಿ ಆಟಗಾರ ಅಲೆಕ್ಸಾಂಡರ್ ಜೊವನೋವಿಚ್‌ರ ಎಡವಟ್ಟಿನಿಂದ ದಾಖಲಾದ ಗೋಲಿನಿಂದಾಗಿ ನಾರ್ಥ್‌ಈಸ್ಟ್ ಸಮಬಲ ಸಾಧಿಸಿತು. ಬಿಎಫ್‌ಸಿ ಈ ವರ್ಷ 7 ಪಂದ್ಯಗಳಲ್ಲಿ ಕೇವಲ 6 ಅಂಕ ಸಂಪಾದಿಸಿದ್ದು, ಅಂಕಪಟ್ಟಿಯಲ್ಲಿ 8ನೇ ಸ್ಥಾನದಲ್ಲೇ ಬಾಕಿಯಾಗಿದೆ.