No Way.. ಇನ್ಮುಂದೆ ಬುಮ್ರಾ ನೋ ಬಾಲ್ ಹಾಕೋಕೆ ಚಾನ್ಸೇ ಇಲ್ಲ..!

Published : May 08, 2019, 05:39 PM IST
No Way.. ಇನ್ಮುಂದೆ ಬುಮ್ರಾ ನೋ ಬಾಲ್ ಹಾಕೋಕೆ ಚಾನ್ಸೇ ಇಲ್ಲ..!

ಸಾರಾಂಶ

ಜಸ್ಪ್ರೀತ್ ಬುಮ್ರಾ ಹಾಗೂ ನೋ ಬಾಲ್ ನಂಟು 12ನೇ ಆವೃತ್ತಿಯ ಐಪಿಎಲ್’ನಲ್ಲೂ ಮುಂದುವರೆದಿದೆ. ಇದೀಗ ಟ್ವಿಟರ್’ನಲ್ಲಿ  ಕೆಲವು ಕ್ರಿಕೆಟ್ ಅಭಿಮಾನಿಗಳು ಬುಮ್ರಾಗೆ ಉಪಯುಕ್ತ ಸಲಹೆ ನೀಡಿದ್ದಾರೆ. ಅಷ್ಟಕ್ಕೂ ಯಾವುದವು ಸಲಹೆಗಳು ಎನ್ನೋದನ್ನು ನೀವು ಒಮ್ಮೆ ನೋಡಿಬಿಡಿ...

ಬೆಂಗಳೂರು[ಮೇ.08]: ವೇಗಿ ಜಸ್ಪ್ರೀತ್ ಬುಮ್ರಾ ಹಾಗೂ ನೋ ಬಾಲ್ ನಡುವಿನ ನಂಟು 12ನೇ ಆವೃತ್ತಿಯ ಐಪಿಎಲ್’ನಲ್ಲೂ ಮುಂದುವರೆದಿದೆ. ಆದರೆ ಇನ್ಮುಂದೆ ಬುಮ್ರಾ ನೋ ಬಾಲ್ ಹಾಕದಂತೆ ಮಾಡಲು ಟ್ವಿಟರಿಗರೂ ಅದ್ಭುತ ಸಲಹೆಯೊಂದನ್ನು ನೀಡಿದ್ದಾರೆ. ಈ ಸಲಹೆಯನ್ನು ಬುಮ್ರಾ ಅಳವಡಿಸಿಕೊಂಡರೆ ಬುಮ್ರಾ ನೋ ಬಾಲ್ ಹಾಕಲು ಸಾಧ್ಯವೇ ಇಲ್ಲ.

RCB ತಂಡಕ್ಕೆ ಬೌಲಿಂಗ್ ಮಾಡಿದ ಕರ್ನಾಟಕದ ಬುಮ್ರಾ..!

ಡೆತ್ ಓವರ್ ಸ್ಪೆಷಲಿಸ್ಟ್ ಬುಮ್ರಾ ಚೆನ್ನೈ ಸೂಪರ್’ಕಿಂಗ್ಸ್ ವಿರುದ್ಧದ ಕ್ವಾಲಿಫೈಯರ್ ಪಂದ್ಯದಲ್ಲಿ ಧೋನಿಯ ವಿಕೆಟ್ ಪಡೆದು ಸಂಭ್ರಮಿಸಿದರು, ಆದರೆ ಆ ಬಳಿಕ ಅಂಪೈರ್ ನೋ ಬಾಲ್ ಎಂದು ತೀರ್ಪು ನೀಡುವ ಮೂಲಕ ಬುಮ್ರಾ ಸಂಭ್ರಮಕ್ಕೆ ತಣ್ಣೀರೆರಚಿದರು.

ಹೀಗಿತ್ತು ನೋಡಿ ಆ ಕ್ಷಣ: 

ಇಂಡೋ-ಪಾಕ್'ನಲ್ಲೂ ಬೂಮ್ರಾ ನೋ ಬಾಲ್ ಫುಲ್ ಫೇಮಸ್..!

ಟೀಂ ಇಂಡಿಯಾದ ಮಾರಕ ವೇಗಿ ಬುಮ್ರಾ ನೋ ಬಾಲ್ ಹಾಕುತ್ತಿರುವುದು ಇದೇ ಮೊದಲೇನಲ್ಲ. 2017ರ ಚಾಂಪಿಯನ್ಸ್ ಟ್ರೋಫಿಯ ಫೈನಲ್ ವೇಳೆಯೂ ನೋ ಬಾಲ್ ಹಾಕಿ ಟೀಂ ಇಂಡಿಯಾ ಸೋಲಿಗೆ ಪರೋಕ್ಷವಾಗಿ ಕಾರಣೀಕರ್ತರಾಗಿದ್ದರು. 2017ರ ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಫೈನಲ್’ನಲ್ಲಿ ಭಾರತ-ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಿದ್ದವು. ಬುಮ್ರಾ ನೋ ಬಾಲ್’ನಿಂದ ಜೀವದಾನ ಪಡೆದ ಪಖರ್ ಜಮಾನ್ ಭರ್ಜರಿ ಶತಕ ಸಿಡಿಸಿದ್ದರು. ಆ ನೋ ಬಾಲ್’ಗೆ ಬೆಲೆತೆತ್ತ ಭಾರತ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು. 

CSK ಮಣಿಸಿ ಫೈನಲ್‌ಗೆ ಎಂಟ್ರಿ ಕೊಟ್ಟ ಮುಂಬೈ ಇಂಡಿಯನ್ಸ್!

ಇದೀಗ ಟ್ವಿಟರ್’ನಲ್ಲಿ ಕೆಲವು ಕ್ರಿಕೆಟ್ ಅಭಿಮಾನಿಗಳು ಉಪಯುಕ್ತ ಸಲಹೆ ನೀಡಿದ್ದಾರೆ. ಅಷ್ಟಕ್ಕೂ ಯಾವುದವು ಸಲಹೆಗಳು ಎನ್ನೋದನ್ನು ನೀವು ಒಮ್ಮೆ ನೋಡಿಬಿಡಿ...

 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮುಂಬೈನಲ್ಲಿ ಸಚಿನ್, ಛೆಟ್ರಿ ಭೇಟಿಯಾಗಲಿರುವ ಮೆಸ್ಸಿ; ಈ ಲಿಸ್ಟ್‌ನಲ್ಲಿದ್ದಾರೆ ಹಲವು ಸೆಲಿಬ್ರಿಟೀಸ್!
U19 Asia Cup: ಪಾಕಿಸ್ತಾನ ಎದುರು ಮುಗ್ಗರಿಸಿದ 14 ವರ್ಷದ ವೈಭವ್ ಸೂರ್ಯವಂಶಿ; ಸ್ಪರ್ಧಾತ್ಮಕ ಮೊತ್ತದತ್ತ ಯುವ ಪಡೆ ದಾಪುಗಾಲು