CSK Vs MI: ಗೆಲುವಿನ ಬಳಿಕ ಧೋನಿ ಕುರಿತು ಹಾರ್ದಿಕ್ ಟ್ವೀಟ್!

Published : May 08, 2019, 05:26 PM IST
CSK Vs MI: ಗೆಲುವಿನ ಬಳಿಕ ಧೋನಿ ಕುರಿತು ಹಾರ್ದಿಕ್ ಟ್ವೀಟ್!

ಸಾರಾಂಶ

ಚೆನ್ನೈನಲ್ಲಿ ನಡೆದ ಮೊದಲ ಕ್ವಾಲಿಫೈಯರ್ ಪಂದ್ಯದ ಬಳಿಕ ಹಾರ್ದಿಕ್ ಪಾಂಡ್ಯ ಮಾಡಿರುವ ಟ್ವೀಟ್ ಇದೀಗ ಭಾರಿ ಸದ್ದು ಮಾಡುತ್ತಿದೆ. CSK ನಾಯಕ ಧೋನಿ ಕುರಿತು ಪಾಂಡ್ಯ ಮಾಡಿರುವ ಟ್ವೀಟ್ ಏನು? ಇಲ್ಲಿದೆ ವಿವರ.  

ಚೆನ್ನೈ(ಮೇ.07): 12ನೇ ಆವೃತ್ತಿ ಐಪಿಎಲ್ ಟೂರ್ನಿಯ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಮಣಿಸಿದ ಮುಂಬೈ ಇಂಡಿಯನ್ಸ್ ನೇರವಾಗಿ ಫೈನಲ್ ಪ್ರವೇಶಿಸಿದೆ. ತವರಿನಲ್ಲಿ ಚೆನ್ನೈ ನಿರೀಕ್ಷಿತ ಬ್ಯಾಟಿಂಗ್ ಪ್ರದರ್ಶನ ನೀಡಲು ವಿಫಲವಾದ CSK ಹಿನ್ನಡೆ ಅನುಭವಿಸಿತು. ಧೋನಿ ತಂಡವನ್ನು ಮಣಿಸಿದ ಬಳಿಕ ಮುಂಬೈ ಆಲ್ರೌಂಡರ್ ಹಾರ್ಧಿಕ್ ಪಾಂಡ್ಯ ಧೋನಿ ಕುರಿತು ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ: CSK ಟಾಸ್ ಗೆದ್ರೆ ಧೋನಿಗೆ ನಿಮ್ಮ ಸಲಹೆ ಏನು? IIT ಸೆಮಿಸ್ಟರ್ ಪರೀಕ್ಷೆಯಲ್ಲಿ ಪ್ರಶ್ನೆ!

ಹ್ಯಾಂಡ್ ಶೇಕ್ ವೇಳೆ ಧೋನಿ ಹಾಗೂ ಹಾರ್ದಿಕ್ ಮುಖಾಮುಖಿಯಾಗಿದ್ದರು. ಈ ವೇಳೆ ಧೋನಿ ಹಾಗೂ ಹಾರ್ದಿಕ್ ಕೆಲ ಹೊತ್ತು ಮಾತುಕತೆ ನಡೆಸಿದರು. ಈ ಫೋಟೋವನ್ನು ಟ್ವೀಟ್ ಮಾಡಿರುವ ಹಾರ್ದಿಕ್, ನನ್ನ ಸ್ಪೂರ್ತಿ,  ನನ್ನ ಗೆಳೆಯ, ನನ್ನ ಸಹೋದರ, ನನ್ನ ದಿಗ್ಗಜ ಎಂದು ಧೋನಿಯನ್ನು ಬಣ್ಣಿಸಿದ್ದಾರೆ.

 

 

ಇದನ್ನೂ ಓದಿ: RCB ಮೇಲಿನ ಸಿಟ್ಟಿಗೆ ಬಾಗಿಲು ಮುರಿದ ಅಂಪೈರ್- ನಿಗೆಲ್‌ಗೆ ಬಿತ್ತು ಬರೆ!

12ನೇ ಆವೃತ್ತಿಯಲ್ಲಿ ಧೋನಿ ಹಾಗೂ ಹಾರ್ಧಿಕ್ ಉತ್ತಮ ಫಾರ್ಮ್‌ನಲ್ಲಿದ್ದಾರೆ. ಕ್ವಾಲಿಫೈಯರ್ ಪಂದ್ಯದಲ್ಲಿ ಧೋನಿಗೆ ತಂಡವನ್ನು ಗೆಲುವಿನ ದಡೆ ಸೇರಿಸಲಾಗಲಿಲ್ಲ. ಹೀಗಾಗಿ ಇದೀಗ ಚೆನ್ನೈ ಫೈನಲ್ ಪ್ರವೇಶಕ್ಕಾಗಿ 2ನೇ ಕ್ವಾಲಿಫೈಯರ್ ಪಂದ್ಯ ಆಡಬೇಕಿದೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಭಾರತ-ಪಾಕಿಸ್ತಾನ ಟಿ20 ವಿಶ್ವಕಪ್ ಪಂದ್ಯದ ಟಿಕೆಟ್ ಮಾರಾಟ ಆರಂಭ, 450 ರೂಗೆ ಬುಕಿಂಗ್ ಹೇಗೆ?
ಸಂಜು ಸ್ಯಾಮ್ಸನ್ ಔಟ್, ಶುಭ್‌ಮನ್ ಗಿಲ್ ಇನ್: ಅಸಲಿ ಸತ್ಯ ಬಿಚ್ಚಿಟ್ಟ ರವಿಚಂದ್ರನ್ ಅಶ್ವಿನ್!