ಏಷ್ಯನ್ ಏಜ್ ಗ್ರೂಪ್ ಈಜು ಚಾಂಪಿಯನ್‌ಶಿಪ್ ಕೂಟಕ್ಕೆ ಬೆಂಗಳೂರು ಆತಿಥ್ಯ ವಹಿಸಲಿದೆ. 26 ರಾಷ್ಟ್ರಗಳ 1000ಕ್ಕೂ ಅಧಿಕ ಈಜು ಪಟುಗಳು ಈ ಕೂಟದಲ್ಲಿ ಸ್ಪರ್ಧಿಸಲಿದ್ದಾರೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...
ಬೆಂಗಳೂರು(ಸೆ.21): ಸೆ. 24 (ಮಂಗಳವಾರ) ರಿಂದ ಬೆಂಗಳೂರಿನಲ್ಲಿ ಏಷ್ಯನ್ ಏಜ್ ಗ್ರೂಪ್ ಈಜು ಚಾಂಪಿಯನ್‌ಶಿಪ್ (ಎಎಎಸ್‌ಎಫ್) ನಡೆಯಲಿದೆ. ಈ ಕೂಟದಲ್ಲಿ ಚೀನಾ, ಜಪಾನ್ ಮತ್ತು ಸಿಂಗಾಪುರ ಸೇರಿದಂತೆ 26 ರಾಷ್ಟ್ರಗಳ 1000ಕ್ಕೂ ಹೆಚ್ಚು ಈಜುಪಟುಗಳು ಭಾಗವಹಿಸುತ್ತಿರುವುದು ವಿಶೇಷವಾಗಿದೆ. ವಿದೇಶಿಗರ ಪೈಕಿ ಕಜಕಸ್ತಾನದಿಂದ 79 ಸ್ಪರ್ಧಿಗಳು, ಚೀನಾದಿಂದ 57 ಸ್ಪರ್ಧಿಗಳು ಕೂಟದಲ್ಲಿ ಭಾಗವಹಿಸುತ್ತಿದ್ದಾರೆ.
ಈಜುಪಟು ಮೇಲೆ ಅತ್ಯಾಚಾರ; ಕೋಚ್ ಸುರಜಿತ್ ಗಂಗೂಲಿ ಆರೆಸ್ಟ್!
undefined
9 ದಿನಗಳ ಕಾಲ ಚಾಂಪಿಯನ್‌ಶಿಪ್ ನಡೆಯಲಿದ್ದು, 2020ರ ಟೋಕಿಯೋ ಒಲಿಂಪಿಕ್ಸ್‌ನ ಅರ್ಹತಾ ಸುತ್ತಿನ ಪಂದ್ಯಗಳು ಇಲ್ಲಿ ನಡೆಯಲಿವೆ. ಒಲಿಂಪಿಕ್ಸ್‌ನಂತಹ ಕೂಟಗಳಲ್ಲಿ ಭಾಗವಹಿಸುವ ರಾಷ್ಟ್ರಗಳಾದ ಇರಾನ್, ಜೋರ್ಡನ್, ಕುವೈತ್, ಮಾಲ್ಡೀವ್‌್ಸ, ನೇಪಾಳ, ಓಮನ್, ಕತಾರ್, ಸೌದಿ ಅರೇಬಿಯಾ, ಯುಎಇ, ಉಜ್ಬೇಕಿಸ್ತಾನ, ವಿಯೆಟ್ನಾಂ, ಥಾಯ್ಲೆಂಡ್, ಶ್ರೀಲಂಕಾ, ದ.ಕೊರಿಯಾ ಮತ್ತು ಇಂಡೋನೇಷ್ಯಾ ರಾಷ್ಟ್ರಗಳು ಕೂಟದಲ್ಲಿ ಭಾಗವಹಿಸುತ್ತಿವೆ.
ರಾಷ್ಟ್ರೀಯ ಈಜು: ಕರ್ನಾಟಕ ಚಾಂಪಿಯನ್
ಕಳೆದ ಆವೃತ್ತಿಯಲ್ಲಿ ಭಾರತ ಈಜು ತಂಡ 40 ಪದಕ ಜಯಿಸಿತ್ತು. ಇದರಲ್ಲಿ 5 ಚಿನ್ನ, 13 ಬೆಳ್ಳಿ ಮತ್ತು 22 ಕಂಚಿನ ಪದಕಗಳು ಸೇರಿದ್ದವು. ಈ ಬಾರಿಯ ಚಾಂಪಿಯನ್‌ಶಿಪ್ ತವರಿನಲ್ಲಿಯೇ ನಡೆಯುತ್ತಿರುವುದರಿಂದ ಭಾರತ ಮತ್ತಷ್ಟುಪದಕದ ವಿಶ್ವಾಸದಲ್ಲಿದೆ.