ಗೋವಾ(ಸೆ.05): ರಾಷ್ಟ್ರೀಯ ಈಜುಪಟು ಮೇಲೆ ಅತ್ಯಾಚಾರ ಮಾಡಿದ ಆರೋಪದಡಿ ಗೋವಾ ರಾಜ್ಯ ಸ್ವಿಮ್ಮಿಂಗ್ ಕೋಚ್ ಸುರಜಿತ್ ಗಂಗೂಲಿಯನ್ನು ಬಂಧಿಸಲಾಗಿದೆ. ಹೆಚ್ಚಿನ ಅವಕಾಶ ಕೊಡಿಸುವ ನಿಟ್ಟಿನಲ್ಲಿ ಅಪ್ರಾಪ್ತ ಈಜುಪಟು ಮೇಲೆ ಅತ್ಯಾಚಾರಾ ಹಾಗೂ ದೈಹಿಕ ಹಿಂಸೆ ನೀಡಲಾಗಿದೆ. ಈ ಕುರಿತು ವಿಡಿಯೋ ಆಧರಿಸಿ ಗೋವಾ ಪೊಲೀಸರು ಕೋಚ್ ಸುರಜಿತ್‌ನನ್ನು ಬಂಧಿಸಿದ್ದಾರೆ.

ಇದನ್ನೂ ಓದಿ: ರಾಷ್ಟ್ರೀಯ ಈಜು: ಕರ್ನಾಟಕ ಚಾಂಪಿ​ಯನ್‌

ಸುರಜಿತ್ ವಿರುದ್ಧ ಅತ್ಯಾಚಾರ ಆರೋಪ ಕೇಳಿ ಬಂದ ಬೆನ್ನಲ್ಲೇ ಗೋವಾ ಸ್ವಿಮ್ಮಿಂಗ್ ಫೆಡರೇಶನ್‌ ಮುಖ್ಯಸ್ಥ ಸ್ಥಾನದಿಂದ ವಜಾ ಮಾಡಲಾಯಿತು. ಸುರಜಿತ್ ವಿರುದ್ಧ 461, 354 ಹಾಗೂ 506(ii) ಹಾಗೂ ಗೋವಾ ಚಿಲ್ಡ್ರನ್ ಆ್ಯಕ್ಟ್  ಸೆಕ್ಷನ್ 6 ಮತ್ತು 8ರ ಪೋಸ್ಕೋ ಕಾಯ್ದೆ ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. 

 

ಇದನ್ನೂ ಓದಿ: ಏಷ್ಯನ್ ಸ್ವಿಮ್ಮಿಂಗ್ ಚಾಂಪಿಯನ್‌ಶಿಪ್; ಬೆಂಗಳೂರಲ್ಲಿ ಲೋಗೋ ಅನಾವರಣ!

ಅಪ್ರಾಪ್ತ ಈಜುಪಟು ಮೇಲೆ ಕೋಲ್ಕತಾದಲ್ಲಿ ಅತ್ಯಾಚಾರ ಮಾಡಿ ವಿಡಿಯೋ ಮಾಡಲಾಗಿದೆ ಎಂದು ಪೊಲೀಸರು ತನಿಖೆಯಿಂದ ಬಹಿರಂಗ ಪಡಿಸಿದ್ದಾರೆ. ಹೀಗಾಗಿ ಕೋಲ್ಕತಾ ಪೊಲೀಸರು ಕೂಡ ವಿಚಾರಣೆ ಆರಂಭಿಸಿದ್ದಾರೆ. ಈ ಕುರಿತು ಕೇಂದ್ರ ಕ್ರೀಡಾ ಸಚಿವ ಕಿರಣ್ ರಿಜಿಜು, ಶೀಘ್ರದಲ್ಲೇ ತನಿಖೆ ಪೂರ್ಣಗೊಳಿಸಿ ಕಠಿಣ ಶಿಕ್ಷೆ ನೀಡಲು ಸೂಚಿಸಿದ್ದಾರೆ. ಇಷ್ಟೇ ಅಲ್ಲ ಗೋವಾ ಸ್ವಿಮ್ಮಿಂಗ್ ಫೆಡರೇಶೆನ್‌ನಿಂದ ವಜಾಗೊಂಡಿರುವ ಕೋಚ್ ಸುರಜಿತ್ ಬೇರೆ ಯಾವುದೇ ಈಜು ಸಂಸ್ಛೆಗಳಲ್ಲಿ ನೇಮಕ ಮಾಡದಂತೆ ಕಟ್ಟು ನಿಟ್ಟಾಗಿ ಸೂಚಿಸಿದ್ದಾರೆ.