ರಣಜಿ ತಂಡಕ್ಕೆ ಆಯ್ಕೆಲ್ಲಿ ಭ್ರಷ್ಟಾಚಾರ- 80 ಲಕ್ಷ ರೂಪಾಯಿ ಪಡೆದು ವಂಚನೆ!

Published : Mar 14, 2019, 11:21 AM IST
ರಣಜಿ ತಂಡಕ್ಕೆ ಆಯ್ಕೆಲ್ಲಿ ಭ್ರಷ್ಟಾಚಾರ- 80 ಲಕ್ಷ ರೂಪಾಯಿ ಪಡೆದು ವಂಚನೆ!

ಸಾರಾಂಶ

ಕ್ರಿಕೆಟ್ ಆಯ್ಕೆಗೆ ಹಣ ಕೇಳಲಾಗುತ್ತಿದೆ ಅನ್ನೋ ಆರೋಪ ಇಂದು ನಿನ್ನೆಯದಲ್ಲ. ಇದೀಗ ಈ ಆರೋಪ ಬಲವಾಗುತ್ತಿದೆ. ಇದೀಗ ದೆಹಲಿ ಮೂಲದ ಮೂವರು ಕ್ರಿಕೆಟಿಗರು ತಮ್ಮ ಆಯ್ಕೆಗೆ ಹಣ ನೀಡಿದ ಆರೋಪ ಕೇಳಿ ಬಂದಿದೆ.   

ದೆಹಲಿ(ಮಾ.14): ರಣಜಿ ತಂಡಕ್ಕೆ ಆಯ್ಕೆ ಮಾಡಲು 80 ಲಕ್ಷ ರೂಪಾಯಿ ಪಡೆದು ವಂಚಿಸಲಾಗಿದೆ ಅನ್ನೋ ಯುವ ಕ್ರಿಕೆಟಿಗರ ಆರೋಪವನ್ನು ಬಿಸಿಸಿಐ ಗಂಭೀರವಾಗಿ ಪರಿಗಣಿಸಿದೆ. ದೆಹಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿರುವ ಬಿಸಿಸಿಐ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲು ಮುಂದಾಗಿದೆ.

ಇದನ್ನೂ ಓದಿ: ವಿಶ್ವಕಪ್‌ ಆತಿಥ್ಯ ಹಿಂಪಡೆದರೆ ನಷ್ಟವಿಲ್ಲ: ಬಿಸಿಸಿಐ

ಯುವ ಕ್ರಿಕೆಟಿಗರಾದ ಕಾನಿಶ್ಕ್ ಗೌರ್, ಕಿಶನ್ ಅತ್ತಾರಿ ಹಾಗೂ ಶಿವಂ ಶರ್ಮಾ 3 ರಣಜಿ ತಂಡಕ್ಕೆ ಆಯ್ಕೆಯಾಗಲು ಬರೋಬ್ಬರಿ 80 ಲಕ್ಷ ರೂಪಾಯಿ ನೀಡಲಾಗಿದೆ ಅನ್ನೋ ಆರೋಪ ಕೇಳಿಬಂದಿತ್ತು. ನಾಗಾಲ್ಯಾಂಡ್, ಮಣಿಪುರ ಹಾಗೂ ಜಾರ್ಖಂಡ್ ತಂಡಕ್ಕೆ ಆಯ್ಕೆ ಮಾಡುವುದಾಗಿ ಹೇಳಿ ಕ್ರಿಕೆಟ್ ಕೋಚ್ 80 ಲಕ್ಷ ರೂಪಾಯಿ ಪಡೆದಿದ್ದಾರೆ. ಬಳಿಕ ನಕಲಿ ದಾಖಲೆ ನೀಡಿ ವಂಚಿಸಿದ್ದಾರೆ ಎಂದು ಯುವಕರು ಆರೋಪಿಸಿದ್ದಾರೆ.

ಇದನ್ನೂ ಓದಿ: ಬಿಸಿಸಿಐಗೆ ಐಸಿಸಿಯಿಂದ 150 ಕೋಟಿ ರುಪಾಯಿ ತೆರಿಗೆ ಹೊರೆ!

ಬಿಸಿಸಿಐ ಭ್ರಷ್ಟಾಚಾರಾ ನಿಗ್ರಹ ದಳ ಈ ಕುರಿತು ತನಿಖೆ ನಡೆಸುತ್ತಿದೆ. ಇದೇ ವೇಳೆ ಬಿಸಿಸಿಐ ದೂರು ದಾಖಲಿಸಿದೆ. ನಾಗಾಲ್ಯಾಂಡ್ ರಣಜಿ ತಂಡ ಅಧಿಕಾರಿಗಳು ಹಾಗೂ ಕೆಲ ಕ್ರಿಕೆಟ್ ಸಂಸ್ಥೆಗಳ ಅಧಿಕಾರಿಗಳು ಈ ಪ್ರಕರಣದಲ್ಲಿ ಪಾಲ್ಗೊಂಡಿರುವ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ. 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಅಂಕಪಟ್ಟಿಯಲ್ಲಿ ಮತ್ತಷ್ಟು ಪಾತಾಳಕ್ಕೆ ಕುಸಿದ ಟೀಂ ಇಂಡಿಯಾ!
ಕೋಲ್ಕತಾ ಸ್ಟೇಡಿಯಂನಿಂದ ಲಿಯೋನೆಲ್ ಮೆಸ್ಸಿ ಬೇಗ ನಿರ್ಗಮನ; ಮಿತಿಮೀರಿದ ಅಭಿಮಾನಿಗಳ ದಾಂಧಲೆ!