ಬಿಸಿಸಿಐ ಚುನಾವಣೆಗೆ ದಿನಾಂಕ ಫಿಕ್ಸ್- ಶೀಘ್ರದಲ್ಲೇ ಅಧ್ಯಕ್ಷರ ಆಯ್ಕೆ!

By Web DeskFirst Published May 21, 2019, 5:49 PM IST
Highlights

ಲೋಧ ಸಮಿತಿ ಶಿಫಾರಸು ಪಾಲಿಸದ  ಕಾರಣ ಬಿಸಿಸಿಐ ಚುನಾವಣೆ ಕಗ್ಗಂಟಾಗಿ ಉಳಿದಿತ್ತು. ಕೊನೆಗೂ ಬಿಸಿಸಿಐ ಚುನಾವಣೆಗೆ ದಿನಾಂಕ್ ಫಿಕ್ಸ್ ಆಗಿದೆ. ಇಲ್ಲಿದೆ ಹೆಚ್ಚಿನ ವಿವರ.

ಮುಂಬೈ(ಮೇ.21): ಲೋಧ ಕಮಿಟಿ ಶಿಫಾರಸು, ಸುಪ್ರೀಂ ಕೋರ್ಟ್ ನೇಮಕ ಆಡಳಿತ ಸಮಿತಿ ಸೇರಿದಂತೆ ಹಲವು ಬದಲಾವಣೆಗಳನ್ನ ಕಂಡ ಭಾರತೀಯ ಕ್ರಿಕೆಟ್ ಮಂಡಳಿ(ಬಿಸಿಸಿಐ) ಕೊನೆಗೂ ಚುನಾವಣೆ ಭಾಗ್ಯ ಕಾಣುತ್ತಿದೆ. ಅನುರಾಗ್ ಠೂಕಾರ್ ಬಿಸಿಸಿಐ ಅಧ್ಯಕ್ಷರಾಗಿ ಆಯ್ಕೆಯಾಗಿದ್ದೇ ಕೊನೆ. ಬಳಿಕ ಬಿಸಿಸಿಐ ಚುನಾವಣೆ ನಡೆದಿಲ್ಲ. ಇದೀಗ ಬಿಸಿಸಿಐ ಚುನಾವಣೆಗೆ ಮೂಹೂರ್ತ ಫಿಕ್ಸ್ ಆಗಿದೆ.

ಇದನ್ನೂ ಓದಿ: ನಾನೇನು ತಪ್ಪು ಮಾಡಿದೆ? ನನಗ್ಯಾಕೆ ಈ ಶಿಕ್ಷೆ? BCCIಗೆ ಯುವ ಕ್ರಿಕೆಟಿಗನ ಪ್ರಶ್ನೆ!

 ಠಾಕೂರ್ ಪದತ್ಯಾಗದ ಬಳಿಕ ಸುಪ್ರೀಂ ಕೋರ್ಟ್ ನೇಮಕ ಆಡಳಿತ ಸಮಿತಿ ಬಿಸಿಸಿ ಚುಕ್ಕಾಣಿ ಹಿಡಿದಿದೆ. ಇದೀಗ ಬಿಸಿಸಿಐಗೆ ಚುನಾವಣೆ ನಡೆಸಲು ನಿರ್ಧರಿಸಲಾಗಿದೆ. ಅಕ್ಟೋಬರ್ 22 ರಂದು ಬಿಸಿಸಿಐ ಚುನಾವಣೆ ನಡೆಯಲಿದೆ ಎಂದು ಬಿಸಿಸಿಐ ಆಡಳಿತ ಸಮಿತಿ ಮುಖ್ಯಸ್ಥ(CoA) ವಿನೋದ್ ರೈ ಹೇಳಿದ್ದಾರೆ. 

ಇದನ್ನೂ ಓದಿ: ಕ್ರಿಕೆಟಿಗರ ಸಂಸ್ಥೆ ನೋಂದಣಿ- ಇನ್ಮುಂದೆ ಬಿಸಿಸಿಐ ನಿರ್ಧಾರಗಳಲ್ಲಿ ಕ್ರಿಕೆಟಿಗರು ಭಾಗಿ!

ಲೋಧ ಸಮಿತಿ ಶಿಫಾರಸುಗಳನ್ನು ಅನುಸರಿಸಿದ ರಾಜ್ಯ ಕ್ರಿಕೆಟ್ ಸಂಸ್ಥೆಗಳು ಚುನಾವಣೆಯಲ್ಲಿ ಪಾಲ್ಗೊಳ್ಳುವ ಅವಕಾಶ ಕೈತಪ್ಪಲಿದೆ. 30 ರಾಜ್ಯ ಕ್ರಿಕೆಟ್ ಸಂಸ್ಛೆಗಳ ಪೈಕಿ ಹಲವು ರಾಜ್ಯಗಳು ಲೋಧ ಶಿಫಾರಸು ಅನುಸರಿಸಿಲ್ಲ. ಹೀಗಾಗಿ ಇಷ್ಟು ದಿನ ಚುನಾವಣೆ ಕಗ್ಗಾಂಟಾಗಿ ಉಳಿದಿತ್ತು. ಇದೀಗ ಚುನಾವಣೆಗೆ ಗ್ರೀನ್ ಸಿಗ್ನಲ್ ಸಿಕ್ಕಿದೆ. ಆದರೆ ಎಲ್ಲರಿಗೂ ಮತದಾನದ ಅವಕಾಶ ಸಿಗಬೇಕಾದರೆ ಲೋಧ ಶಿಫಾರಸು ಪಾಲಿಸಲೇಬೇಕಾದ ಅನಿವಾರ್ಯತೆಯಲ್ಲಿದೆ.

click me!