ಮಹಿಳಾ ಐಪಿಎಲ್‌ 2019: ತಂಡದ ನಾಯಕಿಯರ ಪಟ್ಟಿ ಪ್ರಕಟ!

Published : Apr 24, 2019, 02:57 PM ISTUpdated : Apr 25, 2019, 03:30 PM IST
ಮಹಿಳಾ ಐಪಿಎಲ್‌ 2019: ತಂಡದ ನಾಯಕಿಯರ ಪಟ್ಟಿ ಪ್ರಕಟ!

ಸಾರಾಂಶ

ಮಹಿಳಾ ಐಪಿಎಲ್ ಪ್ರದರ್ಶನ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದೆ. ಐಪಿಎಲ್ ಪ್ಲೇ ಆಫ್ ವೇಳೆ ನಡೆಯಲಿರುವ ಈ ಪಂದ್ಯಗಳಿಗೆ ಇದೀಗ ನಾಯಕಿಯರ ಹೆಸರು ಪ್ರಕಟಿಸಲಾಗಿದೆ. 

ನವದೆಹಲಿ(ಏ.24): ಐಪಿಎಲ್ ಟೂರ್ನಿ ನಡುವೆ ಬಿಸಿಸಿಐ ಆಯೋಜಿಸುತ್ತಿರುವ ಮಹಿಳಾ ಐಪಿಎಲ್ ಪ್ರದರ್ಶನ ಪಂದ್ಯಕ್ಕೆ ವಿಶ್ವದಲ್ಲೇ ಮನ್ನಣೆ ಸಿಕ್ಕಿದೆ. ಮಹಿಳೆಯರ ಕ್ರಿಕೆಟ್ ಅಭಿವೃದ್ದಿಗಾಗಿ ಬಿಸಿಸಿಐ ಆಯೋಜಿಸುತ್ತಿರುವ ಮಹಿಳಾ ಐಪಿಎಲ್ ಪ್ರದರ್ಶನ ಪಂದ್ಯಕ್ಕೆ ನಾಯಕಿಯರ ಪಟ್ಟಿ ಪ್ರಕಟಿಸಲಾಗಿದೆ. 

ಇದನ್ನೂ ಓದಿ: ಆರ್‌ಸಿಬಿ ವಿರುದ್ಧ ಚೆನ್ನೈ ಸೋಲಲು ಅಶ್ವಿನ್‌ ಕಾರಣ?

ಐಪಿಎಲ್‌ ಪ್ಲೇ-ಆಫ್‌ ವೇಳೆ ನಡೆಯಲಿರುವ ಮಹಿಳಾ ಐಪಿಎಲ್‌ ಪ್ರದರ್ಶನ ಪಂದ್ಯಗಳಲ್ಲಿ ಮಿಥಾಲಿ ರಾಜ್‌, ಹರ್ಮನ್‌ಪ್ರೀತ್‌ ಕೌರ್‌ ಹಾಗೂ ಸ್ಮೃತಿ ಮಂಧನಾ ತಂಡಗಳನ್ನು ಮುನ್ನಡೆಸಲಿದ್ದಾರೆ. 3 ತಂಡಗಳು ಸ್ಪರ್ಧೆಗಿಳಿಯಲಿದ್ದು, ಫೈನಲ್‌ ಸೇರಿ 4 ಪಂದ್ಯಗಳು ನಡೆಯಲಿವೆ. 

ಇದನ್ನೂ ಓದಿ: ಅಶ್ವಿನ್‌ಗೆ ಡ್ಯಾನ್ಸ್ ಮೂಲಕ ತಿರುಗೇಟು ನೀಡಿದ ಧವನ್- ವಿಡಿಯೋ ವೈರಲ್!

ಮೇ 11ಕ್ಕೆ ಫೈನಲ್‌ ಪಂದ್ಯ ನಡೆಯಲಿದೆ. ‘ಭಾರತದ ಹಾಲಿ ಹಾಗೂ ಭವಿಷ್ಯದ ತಾರಾ ಆಟಗಾರ್ತಿಯರು ಇರಲಿದ್ದಾರೆ. ಜತೆಗೆ ವಿದೇಶಿ ತಾರೆಯರನ್ನು ಆಹ್ವಾನಿಸಲಾಗಿದೆ. ಮಹಿಳಾ ಕ್ರಿಕೆಟ್‌ ಅಭಿವೃದ್ಧಿಯತ್ತ ಇದು ಮತ್ತೊಂದು ಹೆಜ್ಜೆ’ ಎಂದು ಬಿಸಿಸಿಐ ತಿಳಿಸಿದೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

29 ವರ್ಷದಲ್ಲಿ ಇದೇ ಮೊದಲ ಬಾರಿಗೆ ಸ್ಕ್ವಾಷ್‌ ವಿಶ್ವಕಪ್‌ ಗೆದ್ದ ಭಾರತ!
ಐಪಿಎಲ್ ಹರಾಜು ಇತಿಹಾಸದಲ್ಲೇ ಟಾಪ್ 6 ದುಬಾರಿ ಆಟಗಾರರಿವರು!