
ಬೆಂಗಳೂರು: ಭಾರತೀಯ ಅಮೆಚೂರ್ ಕಬಡ್ಡಿ ಫೆಡರೇಶನ್ (ಎಕೆಎಫ್‌ಐ) ಮೂವರು ಹಿರಿಯ ಕಬಡ್ಡಿ ಪಟುಗಳನ್ನು ಭಾರತ ಪುರುಷರ ತಂಡದ ಆಯ್ಕೆಗಾರರನ್ನಾಗಿ ನೇಮಿಸಿದೆ. ಈ ಸಮಿತಿಯಲ್ಲಿ ಕನ್ನಡಿಗ, ಅರ್ಜುನ ಪ್ರಶಸ್ತಿ ವಿಜೇತ ಬಿ.ಸಿ.ರಮೇಶ್‌ಗೆ ಸ್ಥಾನ ನೀಡಲಾಗಿದೆ. ಬಲ್ವಾನ್ ಸಿಂಗ್ ಹಾಗೂ ಜೈವೀರ್ ಶರ್ಮಾ ಕೂಡ ಆಯ್ಕೆ ಸಮಿತಿಯ ಸದಸ್ಯರಾಗಿದ್ದಾರೆ.
ಮುಂಬರುವ ಅಂತಾರಾಷ್ಟ್ರೀಯ ಟೂರ್ನಿಗಳಿಗೆ ಈ ಸಮಿತಿ ಭಾರತ ತಂಡವನ್ನು ಆಯ್ಕೆ ಮಾಡಲಿದೆ. ತಮ್ಮ ನೇಮಕದ ಕುರಿತು ‘ಕನ್ನಡಪ್ರಭ’ಕ್ಕೆ ಪ್ರತಿಕ್ರಿಯಿಸಿದ ರಮೇಶ್, ‘2005ರಿಂದ 2016-17ರ ವರೆಗೂ ಸುದೀರ್ಘ ಅವಧಿಗೆ ನಾನು ಭಾರತ ತಂಡದ ಆಯ್ಕೆಗಾರನಾಗಿ ಕಾರ್ಯನಿರ್ವಹಿಸಿದ್ದೆ. ಇದೀಗ ಫೆಡರೇಶನ್ ಮತ್ತೊಮ್ಮೆ ಅವಕಾಶ ಕಲ್ಪಿಸಿದೆ. ನನ್ನನ್ನು ಆಯ್ಕೆ ಮಾಡಿದ್ದಕ್ಕೆ ಬಹಳ ಖುಷಿಯಾಗಿದೆ. ಫೆ.20ರಿಂದ ಆರಂಭಗೊಳ್ಳಲಿರುವ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಭಾರತ ತಂಡಕ್ಕೆ ಸಂಭವನೀಯ ಆಟಗಾರರನ್ನು ಆಯ್ಕೆ ಮಾಡಲಿದ್ದೇವೆ’ ಎಂದರು.
ಚಾಂಪಿಯನ್ಸ್ ಟ್ರೋಫಿಗೆ ಕ್ಷಣಗಣನೆ: ರೋಚಕ ಕದನಕ್ಕೆ ಅಖಾಢ ಸಿದ್ಧ!
ಇಂದಿನಿಂದ ಕಟಕ್‌ನಲ್ಲಿ ರಾಷ್ಟ್ರೀಯ ಚಾಂಪಿಯನ್‌ಶಿಪ್
71ನೇ ರಾಷ್ಟ್ರೀಯ ಪುರುಷರ ಕಬಡ್ಡಿ ಚಾಂಪಿಯನ್‌ಶಿಪ್ ಗುರುವಾರದಿಂದ ಕಟಕ್‌ನ ಜೆ.ಎನ್. ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯಲಿದೆ. ಫೆ.23ರ ವರೆಗೂ ಪಂದ್ಯಾವಳಿ ನಡೆಯಲಿದ್ದು, ಕರ್ನಾಟಕ ಸೇರಿ ಒಟ್ಟಿ 30 ತಂಡಗಳು ಕಣಕ್ಕಿಳಿಯಲಿವೆ.
ಹಾಕಿ: ಭಾರತಕ್ಕೆ ಶರಣಾದ ವಿಶ್ವ ಚಾಂಪಿಯನ್ ಜರ್ಮನಿ
ಭುವನೇಶ್ವರ: ಪ್ರೊ ಲೀಗ್ ಹಾಕಿ ಟೂರ್ನಿಯಲ್ಲಿ ಭಾರತ ಪುರುಷರ ತಂಡ ಬುಧವಾರ ವಿಶ್ವ ಚಾಂಪಿಯನ್ ಜರ್ಮನಿ ವಿರುದ್ಧ 1-0 ಗೆಲುವು ಸಾಧಿಸಿತು. ಮಂಗಳವಾರ ಜರ್ಮನಿ ವಿರುದ್ಧ 1-4ರಲ್ಲಿ ಸೋತಿದ್ದ ಭಾರತ, 2ನೇ ಮುಖಾಮುಖಿಯಲ್ಲಿ ಸುಧಾರಿತ ಪ್ರದರ್ಶನ ನೀಡಿತು. ಗುರ್ಜಂತ್ ಸಿಂಗ್ 4ನೇ ನಿಮಿಷದಲ್ಲಿ ಬಾರಿಸಿದ ಗೋಲು ತಂಡಕ್ಕೆ ಗೆಲುವು ತಂದುಕೊಟ್ಟಿತು. ಟೂರ್ನಿಯಲ್ಲಿ ತಂಡ 4 ಪಂದ್ಯಗಳನ್ನಾಡಿದ್ದು, 2ರಲ್ಲಿ ಗೆಲುವು, 2 ಸೋಲು ಕಂಡಿದೆ. ಇದೇ ವೇಳೆ ಮಹಿಳಾ ತಂಡ ಸ್ಪೇನ್ ವಿರುದ್ಧ 0-1 ಸೋಲನುಭವಿಸಿತು. ಮಂಗಳವಾರ ಕೂಡಾ ಸ್ಪೇನ್ ವಿರುದ್ಧವೇ ಸೋತಿತ್ತು.
ದುಬೈನಲ್ಲಿಂದು ಮೆಗಾ ಫೈಟ್; ಬಾಂಗ್ಲಾದೇಶಕ್ಕೆ ಮಣ್ಣುಮುಕ್ಕಿಸಿ ಗೆಲ್ಲುತ್ತಾ ಭಾರತ?
ಶೀಘ್ರವೇ 90 ಮೀ. ದೂರಕ್ಕೆ ಜಾವೆಲಿನ್ ಎಸೆತ: ನೀರಜ್
ನವದೆಹಲಿ: ಒಲಿಂಪಿಕ್ಸ್ ಚಾಂಪಿಯನ್, ತಾರಾ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ತಮ್ಮ ಹೊಸ ಕೋಚ್ ಜಾನ್ ಝೆಲೆಜ್ನಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಝೆಲೆಜ್ನಿ ತಮ್ಮ ತಂತ್ರಗಳಲ್ಲಿನ ಕೆಲವು ತಪ್ಪುಗಳನ್ನು ಕಂಡು ಹಿಡಿದಿದ್ದು, ಅದನ್ನು ಸರಿಪಡಿಸಿಕೊಂಡು ಶೀಘ್ರದಲ್ಲೇ 90 ಮೀ. ಗುರಿ ತಲುಪುವುದಾಗಿ ನೀರಜ್ ಹೇಳಿದ್ದಾರೆ.
89.94ರ ವೈಯಕ್ತಿಕ ದಾಖಲೆ ಹೊಂದಿರುವ ಚೋಪ್ರಾ 90 ಮೀ. ಗುರಿ ಹೊಂದಲು ಪ್ರಯತ್ನಿಸುತ್ತಿದ್ದಾರೆ. ಸದ್ಯ ಚೋಪ್ರಾ 98.48 ಮೀ. ಜಾವೆಲಿನ್ ಎಸೆತದ ವಿಶ್ವ ದಾಖಲೆ ಹೊಂದಿರುವ ಜಾನ್ ಝೆಲೆಜ್ನಿ ಬಳಿ ತರಬೇತಿ ಪಡೆಯುತ್ತಿದ್ದಾರೆ. ಈ ಬಗ್ಗೆ ಮಾತನಾಡಿರುವ ಅವರು ‘90 ಮೀ.ಗಿಂತ ಹೆಚ್ಚಿನ ಎಸೆತ ಸದ್ಯದಲ್ಲಿಯೇ ಆಗಲಿದೆ ಎನ್ನುವ ನಂಬಿಕೆಯಿದೆ. ಅವರು ಕೆಲವೊಂದು ತಾಂತ್ರಿಕ ಬದಲಾವಣೆಗಳನ್ನು ಮಾಡಿದ್ದಾರೆ. ನಾನು ಆ ಬದಲಾವಣೆಗಳನ್ನು ಅಳವಡಿಸಿಕೊಳ್ಳುತ್ತಿದ್ದೇನೆ’ ಎಂದಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.