ದುಬೈನಲ್ಲಿಂದು ಮೆಗಾ ಫೈಟ್‌; ಬಾಂಗ್ಲಾದೇಶಕ್ಕೆ ಮಣ್ಣುಮುಕ್ಕಿಸಿ ಗೆಲ್ಲುತ್ತಾ ಭಾರತ?

Published : Feb 20, 2025, 10:03 AM ISTUpdated : Feb 20, 2025, 10:04 AM IST
ದುಬೈನಲ್ಲಿಂದು ಮೆಗಾ ಫೈಟ್‌; ಬಾಂಗ್ಲಾದೇಶಕ್ಕೆ ಮಣ್ಣುಮುಕ್ಕಿಸಿ ಗೆಲ್ಲುತ್ತಾ ಭಾರತ?

ಸಾರಾಂಶ

ದುಬೈನಲ್ಲಿ ನಡೆಯಲಿರುವ ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಪಂದ್ಯದಲ್ಲಿ ಭಾರತ ಮತ್ತು ಬಾಂಗ್ಲಾದೇಶ ತಂಡಗಳು ಮುಖಾಮುಖಿಯಾಗಲಿವೆ. ಜಸ್ಪ್ರೀತ್ ಬುಮ್ರಾ ಅವರ ಅನುಪಸ್ಥಿತಿಯಲ್ಲಿ ಭಾರತ ಬಲಿಷ್ಠ ತಂಡವನ್ನು ಕಣಕ್ಕಿಳಿಸಲು ಸಜ್ಜಾಗಿದೆ. ರೋಹಿತ್ ಶರ್ಮಾ ಫಾರ್ಮ್ಗೆ ಮರಳಿದ್ದು, ವಿರಾಟ್ ಕೊಹ್ಲಿಯಿಂದ ಉತ್ತಮ ಪ್ರದರ್ಶನ ನಿರೀಕ್ಷಿಸಲಾಗಿದೆ. ಬೌಲಿಂಗ್ ವಿಭಾಗದಲ್ಲಿ ಶಮಿ ಜೊತೆ ಅರ್ಶ್‌ದೀಪ್ ಸಿಂಗ್ ಆಡುವ ಸಾಧ್ಯತೆ ಇದೆ. ಬಾಂಗ್ಲಾ ತಂಡವನ್ನು ಲಘುವಾಗಿ ಪರಿಗಣಿಸುವಂತಿಲ್ಲ.

ದುಬೈ: 9ನೇ ಆವೃತ್ತಿಯ ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಟೂರ್ನಿಯಲ್ಲಿ ಶುಭಾರಂಭ ನಿರೀಕ್ಷೆಯಲ್ಲಿರುವ ಭಾರತ ತಂಡ, ಗುರುವಾರ ಬಾಂಗ್ಲಾದೇಶ ವಿರುದ್ಧ ಸೆಣಸಾಡಲಿದೆ. ಪ್ರಮುಖ ವೇಗಿ ಜಸ್‌ಪ್ರೀತ್‌ ಬುಮ್ರಾ ಅನುಪಸ್ಥಿತಿ ಹಾಗೂ ಆಟಗಾರರ ಆಯ್ಕೆ ಗೊಂದಲ ನಡುವೆ ಬಲಿಷ್ಠ ತಂಡ ಕಣಕ್ಕಿಳಿಸಿ ದೊಡ್ಡ ಗೆಲುವು ಸಾಧಿಸುವುದು ಭಾರತದ ಗುರಿ. ಪಂದ್ಯಕ್ಕೆ ದುಬೈ ಕ್ರೀಡಾಂಗಣ ಆತಿಥ್ಯ ವಹಿಸಲಿದೆ.

ಭಾರತ ಚಾಂಪಿಯನ್ಸ್‌ ಟ್ರೋಫಿ ಗೆಲ್ಲುವ ನೆಚ್ಚಿನ ತಂಡ ಎನಿಸಿಕೊಂಡಿದ್ದರೂ, ತಂಡದಲ್ಲಿ ಕೆಲ ಸಮಸ್ಯೆಗಳಿವೆ. ರೋಹಿತ್‌ ಶರ್ಮಾ ಫಾರ್ಮ್‌ಗೆ ಮರಳಿದ್ದರೂ, ವಿರಾಟ್‌ ಕೊಹ್ಲಿ ಬ್ಯಾಟ್‌ ಸದ್ದು ಮಾಡಲೇಬೇಕಾದ ಅಗತ್ಯವಿದೆ. ಶುಭ್‌ಮನ್‌ ಗಿಲ್‌, ಶ್ರೇಯಸ್‌ ಅಯ್ಯರ್‌ ಅಭೂತಪೂರ್ವ ಲಯದಲ್ಲಿದ್ದು, ವಿಕೆಟ್‌ ಕೀಪರ್‌ ಬ್ಯಾಟರ್‌ ಕೆ.ಎಲ್‌.ರಾಹುಲ್‌ ಕೂಡಾ ಅಬ್ಬರಿಸಬೇಕಾಗಿದೆ.

ಐಸಿಸಿ ಚಾಂಪಿಯನ್ಸ್ ಟ್ರೋಫಿ ಉದ್ಘಾಟನಾ ಪಂದ್ಯದಲ್ಲೇ ಪಾಕ್‌ಗೆ ಮುಖಭಂಗ; ಕಿವೀಸ್ ಎದುರು ಹೀನಾಯ ಸೋಲು!

ತಂಡಕ್ಕೆ ಹೆಚ್ಚಿನ ತಲೆನೋವಾಗಿದ್ದ ಬೌಲಿಂಗ್‌ ವಿಭಾಗ. ಬೂಮ್ರಾ ಗಾಯದಿಂದಾಗಿ ಆಡುತ್ತಿಲ್ಲ. ಹೀಗಾಗಿ ವೇಗದ ಬೌಲಿಂಗ್‌ ಪಡೆಯಲ್ಲಿ ಅನನುಭವಿಗಳಿದ್ದಾರೆ. ಮೊಹಮದ್‌ ಶಮಿ ಜೊತೆ ಅರ್ಶ್‌ದೀಪ್‌ ಸಿಂಗ್‌ ಅಥವಾ ಹರ್ಷಿತ್‌ ರಾಣಾ ಪೈಕಿ ಯಾರನ್ನು ಆಡಿಸುವುದು ಎಂಬ ಗೊಂದಲವಿದೆ. ಉಳಿದಂತೆ ಆಲ್ರೌಂಡ್‌ ವಿಭಾಗದಲ್ಲಿ ಹಾರ್ದಿಕ್‌ ಪಾಂಡ್ಯ, ರವೀಂದ್ರ ಜಡೇಜಾ ಜೊತೆ ಅಕ್ಷರ್‌ ಪಟೇಲ್‌ ತಂಡಕ್ಕೆ ಬಲ ತುಂಬಲಿದ್ದಾರೆ. ಸ್ಪಿನ್ನರ್‌ ಸ್ಥಾನಕ್ಕೆ ಕುಲ್ದೀಪ್‌ ಯಾದವ್‌ ಆಯ್ಕೆಯಾಗಬಹದು.

ಶಾಕ್ ನೀಡುತ್ತಾ ಬಾಂಗ್ಲಾ?: ಭಾರತಕ್ಕೆ ಹೋಲಿಸಿದರೆ ಬಾಂಗ್ಲಾ ಅಷ್ಟೇನೂ ಬಲಿಷ್ಠವಲ್ಲ. ಆದರೆ ಬಾಂಗ್ಲಾವನ್ನು ಲಘುವಾಗಿ ಪರಿಗಣಿಸುವಂತಿಲ್ಲ. ತಂಡದಲ್ಲಿ ಮಹ್ಮೂದುಲ್ಲಾ ಸೌಮ್ಯಾ ಸರ್ಕಾರ್‌, ಮುಷ್ಫಿಕುರ್‌ರಹೀಂ, ನಜ್ಮುಲ್‌ ಹೊಸೈನ್‌, ಮುಸ್ತಾಫಿಜುರ್‌, ತಸ್ಕೀನ್‌ ಅಹ್ಮದ್‌ ಸೇರಿ ಅನುಭವಿ ಆಟಗಾರರಿದ್ದಾರೆ. ಆದರೆ ಅಸಾಧಾರಣ ಪ್ರದರ್ಶನ ನೀಡಿದರಷ್ಟೇ ಭಾರತವನ್ನು ಸೋಲಿಸಲು ಸಾಧ್ಯವಿದೆ.

ಐಸಿಸಿ ಚಾಂಪಿಯನ್ಸ್‌ ಟ್ರೋಫಿ: ಭಾರತದ ಜೆರ್ಸಿಯಲ್ಲಿ ‘ಪಾಕಿಸ್ತಾನ’ ಹೆಸರು!

ಒಟ್ಟು ಮುಖಾಮುಖಿ: 41

ಭಾರತ: 32

ಬಾಂಗ್ಲಾ: 08

ಫಲಿತಾಂಶವಿಲ್ಲ: 01

ಸಂಭವನೀಯ ಆಟಗಾರರು

ಭಾರತ: ರೋಹಿತ್‌(ನಾಯಕ), ಗಿಲ್‌, ವಿರಾಟ್‌, ಶ್ರೇಯಸ್‌, ರಾಹುಲ್‌, ಅಕ್ಷರ್‌, ಹಾರ್ದಿಕ್‌, ಜಡೇಜಾ, ಕುಲ್ದೀಪ್‌, ಅರ್ಶ್‌ದೀಪ್‌, ಶಮಿ.

ಬಾಂಗ್ಲಾ: ನಜ್ಮುಲ್‌(ನಾಯಕ), ಸೌಮ್ಯಾ, ತಂಜೀದ್‌, ರಹೀಂ, ಮಹ್ಮೂದುಲ್ಲಾ, ಜಾಕರ್‌, ಮೆಹಿದಿ, ರಿಶಾದ್‌, ತಸ್ಕೀನ್‌, ಮುಸ್ತಾಫಿಜುರ್‌, ನಹಿದ್‌.

ಪಿಚ್ ರಿಪೋರ್ಟ್‌

ದುಬೈ ಕ್ರೀಡಾಂಗಣದ ಪಿಚ್‌ ಸ್ಪರ್ಧಾತ್ಮಕವಾಗಿದ್ದು, ಬ್ಯಾಟರ್‌ಗಳ ಜೊತೆ ಬೌಲರ್‌ಗಳಿಗೂ ಸವಾಲು ಎದುರಾಗಲಿದೆ. ವರದಿಗಳ ಪ್ರಕಾರ ಈ ಪಂದ್ಯಕ್ಕೆ ಹೊಸ ಪಿಚ್‌ ಬಳಕೆ ಮಾಡಲಾಗುತ್ತದೆ. ಹೀಗಾಗಿ ಆರಂಭದಲ್ಲಿ ವೇಗಿಗಳು ಹೆಚ್ಚಿನ ನೆರವು ಪಡೆಯಲಿದ್ದು, ಪಂದ್ಯ ಸಾಗಿದಂತೆ ಸ್ಪಿನ್ನರ್‌ಗಳು ಮೇಲುಗೈ ಸಾಧಿಸಬಹುದು.

01 ಬಾರಿ: ಭಾರತ-ಬಾಂಗ್ಲಾದೇಶ ಚಾಂಪಿಯನ್ಸ್‌ ಟ್ರೋಫಿಯಲ್ಲಿ ಒಮ್ಮೆ ಮುಖಾಮುಖಿಯಾಗಿದೆ. 2017ರ ಸೆಮಿಫೈನಲ್‌ನಲ್ಲಿ ಬಾಂಗ್ಲಾ ವಿರುದ್ಧ ಭಾರತ ಗೆದ್ದಿತ್ತು.
 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

Viral Video: ರಣಜಿ ಟ್ರೋಫಿ ಫೈನಲ್‌ನಲ್ಲಿ ಜಮ್ಮು ಕಾಶ್ಮೀರ ನಾಯಕನಿಂದ ಕರ್ನಾಟಕ ಪ್ಲೇಯರ್‌ಗೆ ಡಿಚ್ಚಿ!
ಮಹಿಳೆ ಜೊತೆ ಫ್ಲರ್ಟ್‌ ಮಾಡಿದ Sania Mirza ಮಾಜಿ ಪತಿ; 3ನೇ ಮದುವೆ ಮುರಿದಿದ್ರೆ ಸಾಕು ಎಂದ ನೆಟ್ಟಿಗರು