ಗರಿಷ್ಠ ಸಂಭಾವನೆ: ಸಿಂಧು ಭಾರತದ ಶ್ರೀಮಂತ ಮಹಿಳಾ ಅಥ್ಲೀಟ್

By Web Desk  |  First Published Aug 8, 2019, 2:21 PM IST

ಭಾರತದ ಸ್ಟಾರ್ ಶಟ್ಲರ್ ಪಿ.ವಿ ಸಿಂಧು ಭಾರತದ ಅತ್ಯಂತ ಶ್ರೀಮಂತ ಮಹಿಳಾ ಅಥ್ಲೀಟ್ ಆಗಿ ಹೊರಹೊಮ್ಮಿದ್ದಾರೆ. ಕಳೆದೊಂದು ವರ್ಷದಲ್ಲಿ ಸಿಂಧು 39 ರುಪಾಯಿ ಸಂಪಾಧನೆ ಮಾಡಿದ್ದಾರೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...


ನ್ಯೂಯಾರ್ಕ್[ಆ.08]: ಭಾರತದ ತಾರಾ ಶಟ್ಲರ್‌ ಪಿ.ವಿ ಸಿಂಧು, ಕಳೆದೊಂದು ವರ್ಷದಲ್ಲಿ ಅತಿಹೆಚ್ಚು ಹಣ ಸಂಪಾದಿಸಿದ ವಿಶ್ವದ ಅಗ್ರ 15 ಮಹಿಳಾ ಕ್ರೀಡಾಪಟುಗಳ ಪಟ್ಟಿಯಲ್ಲಿ 13ನೇ ಸ್ಥಾನ ಪಡೆದಿದ್ದಾರೆ. 

ಪ್ರತಿಷ್ಠಿತ ಫೋರ್ಬ್ಸ್ ಸಂಸ್ಥೆ ನಡೆಸಿರುವ ಸಮೀಕ್ಷೆ ಪ್ರಕಾರ ಸಿಂಧು ಕಳೆದ ವರ್ಷ ಜೂನ್‌ 1ರಿಂದ ಈ ವರ್ಷ ಜೂನ್‌ ವರೆಗೂ 39 ಕೋಟಿ ರುಪಾಯಿ ಸಂಪಾದನೆ ಮಾಡಿದ್ದಾರೆ. ಪ್ರಶಸ್ತಿ ಮೊತ್ತ, ಜಾಹೀರಾತು, ಪ್ರಾಯೋಜಕತ್ವ ಸಂಭಾವನೆಯನ್ನು ಪರಿಗಣಿಸಲಾಗಿದೆ. 

Latest Videos

undefined

ಕೊಹ್ಲಿ ವಿಶ್ವದ 100ನೇ ಶ್ರೀಮಂತ ಕ್ರೀಡಾಪಟು!

ಅಮೆರಿಕದ ದಿಗ್ಗಜ ಟೆನಿಸ್‌ ಆಟಗಾರ್ತಿ ಸೆರೆನಾ ವಿಲಿಯಮ್ಸ್‌ 206.92 ಕೋಟಿ ಗಳಿಕೆಯೊಂದಿಗೆ ಸತತ 4ನೇ ವರ್ಷ ಅಗ್ರಸ್ಥಾನ ಪಡೆದಿದ್ದಾರೆ. ಜಪಾನ್‌ನ ಟೆನಿಸ್‌ ತಾರೆ ನವೊಮಿ ಒಸಾಕ 2ನೇ ಸ್ಥಾನದಲ್ಲಿದ್ದಾರೆ.

ಅತಿಹೆಚ್ಚು ಹಣ ಸಂಪಾದನೆ ಮಾಡುತ್ತಿರುವ 15 ಮಹಿಳಾ ಅಥ್ಲೀಟ್’ಗಳ ಪೈಕಿ 12 ಮಂದಿ ಟೆನಿಸ್ ಆಟಗಾರ್ತಿಯರಾಗಿದ್ದಾರೆ. ಇನ್ನು ಟಾಪ್ 15 ಪಟ್ಟಿಯಲ್ಲಿ ಸ್ಥಾನ ಪಡೆದ ಏಕೈಕ ಭಾರತೀಯ ಮಹಿಳಾ ಅಥ್ಲೀಟ್ ಎನ್ನುವ ಕೀರ್ತಿ ಸಿಂಧು ಪಾಲಾಗಿದೆ. 
 

click me!