ಆಸ್ಟ್ರೇಲಿಯನ್ ಓಪನ್ 2025: ಮೆಡ್ವೆಡೆವ್, ಎಮ್ಮಾ 2ನೇ ಸುತ್ತಿಗೆ ಲಗ್ಗೆ

By Naveen Kodase  |  First Published Jan 15, 2025, 11:06 AM IST

ಆಸ್ಟ್ರೇಲಿಯನ್ ಓಪನ್‌ನಲ್ಲಿ ಡ್ಯಾನಿಲ್ ಮೆಡ್ವೆಡೆವ್ ರೋಚಕ ಗೆಲುವು ಸಾಧಿಸಿದರೆ, ಹಾಲಿ ಚಾಂಪಿಯನ್ ರೋಹನ್ ಬೋಪಣ್ಣ ಮೊದಲ ಸುತ್ತಿನಲ್ಲೇ ಸೋತು ನಿರಾಸೆ ಅನುಭವಿಸಿದ್ದಾರೆ. ಎಮ್ಮಾ ರಾಡುಕಾನು ಮತ್ತು ಎಲೆನಾ ರಬೈಕೆನಾ ಮಹಿಳಾ ಸಿಂಗಲ್ಸ್‌ನಲ್ಲಿ ಗೆಲುವಿನೊಂದಿಗೆ ಶುಭಾರಂಭ ಮಾಡಿದ್ದಾರೆ.


ಮೆಲ್ಬರ್ನ್: 3 ಬಾರಿ ರನ್ನರ್-ಅಪ್, ರಷ್ಯಾದ ಡ್ಯಾನಿಲ್ ಮೆಡ್ವೆಡೆವ್ ಈ ಬಾರಿ ಆಸ್ಟ್ರೇಲಿಯನ್ ಓಪನ್ ಗ್ರಾನ್‌ಸ್ಲಾಂ ಟೆನಿಸ್ ಟೂರ್ನಿಯಲ್ಲಿ ಎದ್ದು ಬಿದ್ದು ಗೆದ್ದು 2ನೇ ಸುತ್ತು ಪ್ರವೇಶಿಸಿದ್ದಾರೆ. 

ಮಂಗಳವಾರ ನಡೆದ ಪುರುಷರ ಸಿಂಗಲ್ಸ್ ಮೊದಲ ಸುತ್ತಿನಲ್ಲಿ ವಿಶ್ವ ನಂ.5 ಮೆಡ್ವಡೆವ್‌ಗೆ ವಿಶ್ವ ರ್‍ಯಾಂಕಿಂಗ್‌ನಲ್ಲಿ 418ನೇ ಸ್ಥಾನದಲ್ಲಿರುವ, ಥಾಯ್ಲೆಂಡ್‌ನ ಕಸಿಡಿತ್ ಸ್ಯಾಮ್ರೆಜ್‌ ವಿರುದ್ಧ  6-2, 4-6, 3-6, 6-1, 6-2 ಸೆಟ್‌ಗಳಲ್ಲಿ ರೋಚಕ ಗೆಲುವು ಸಾಧಿಸಿದರು. ಇದೇ ಮೊದಲ ಬಾರಿ ಗ್ಯಾನ್‌ಸ್ಲಾಂ ಟೂರ್ನಿಯಲ್ಲಿ ಆಡುತ್ತಿರುವ ಸ್ಯಾಪ್ರಿಜ್, 2021ರ ಯುಎಸ್ ಓಪನ್ ಚಾಂಪಿಯನ್ ಮೆಡೈಡೆವ್‌ಗೆ ತೀವ್ರ ಪೈಪೋಟಿ ನೀಡಿ ದರೂ, ವೀರೋಚಿತ ಸೋಲನುಭವಿಸಿದರು. ಅಮೆರಿಕದ 4ನೇ ಶ್ರೇಯಾಂಕಿತ ಟೇಲರ್ ಫ್ಲಿಟ್ಜ್‌, ಡೆನ್ಮಾರ್ಕ್‌ನ ಹೋಲ್ಗರ್ ರನೆ 2ನೇ ಸುತ್ತಿಗೇರಿದರು.

Tap to resize

Latest Videos

ಬಿಸಿಸಿಐ ಚಾಟಿ ಬಳಿಕ ಮತ್ತೆ ದೇಸಿ ಕ್ರಿಕೆಟ್‌ನತ್ತ ಸ್ಟಾರ್‌ ಆಟಗಾರರು: ರಿಷಭ್‌ ಕಣಕ್ಕೆ, ರೋಹಿತ್‌, ಕೊಹ್ಲಿ ಡೌಟ್‌!

ಆದರೆ 2014ರ ಚಾಂಪಿಯನ್, ಸ್ವಿಜರ್‌ಲೆಂಡ್‌ನ ಸ್ಪ್ಯಾನ್ ವಾಂವ್ರಿಕಾ, 9ನೇ ಶ್ರೇಯಾಂಕಿತ ರಷ್ಯಾದ ಆ್ಯಂಡ್ರೆ ರುಬ್ಲೆವ್ ಕೂಡಾ ಸೋತು ಹೊರಬಿದ್ದರು. 

ಎಮ್ಮಾ, ಎಲೆನಾಗೆ ಜಯ: ಮಹಿಳಾ ಸಿಂಗಲ್ಸ್‌ನಲ್ಲಿ ಸ್ಟಾರ್ ಟೆನಿಸಿಗರಾದ ಎಲೆನಾ ರಬೈಕೆನಾ, ಎಮ್ಮಾ ರಾಡುಕಾನು ಶುಭಾರಂಭ ಮಾಡಿದರು. 2022ರ ವಿಂಬಲ್ಡನ್ ಚಾಂಪಿಯನ್, ಕಜಕಸ್ತಾನದ 25 ವರ್ಷದ ರಬೈಕನಾ ಮೊದಲ ಸುತ್ತಿನಲ್ಲಿ ಆಸ್ಟ್ರೇಲಿಯಾದ ಎಮರ್ಸನ್ ಜೋನ್ಸ್ ವಿರುದ್ಧ 6-1, 6-1ರಲ್ಲಿ ಜಯಗಳಿಸಿದರು. 2021ರ ಯುಎಸ್ ಓಪನ್ ಚಾಂಪಿಯನ್, ಬ್ರಿಟನ್‌ನ 22 ವರ್ಷ ಎಮ್ಮಾ ರಷ್ಯಾದ ಅಲೆಕ್ಸಾಂಡ್ರೋವಾ ವಿರುದ್ಧ ಗೆದ್ದು 2ನೇ ಸುತ್ತಿಗೇರಿದರು. 

IPL 2025 ವೇಳಾಪಟ್ಟಿಯಲ್ಲಿ ಮಹತ್ವದ ಬದಲಾವಣೆ; ಹೊಸ ವೇಳಾಪಟ್ಟಿ ಪ್ರಕಟ!

ಹಾಲಿ ಚಾಂಪಿಯನ್ ಬೋಪಣ್ಣ ಹೊರಕ್ಕೆ

ಆಸ್ಟ್ರೇಲಿಯನ್ ಓಪನ್ ಪುರುಷರ ಡಬಲ್ಸ್‌ನ ಹಾಲಿ ಚಾಂಪಿಯನ್ ರೋಹನ್ ಬೋಪಣ್ಣ ಈ ಸಲ ಮೊದಲ ಸುತ್ತಿನಲ್ಲೇ ಸೋಲಿನ ಆಘಾತ ಅನುಭವಿಸಿದರು. ಕೊಲಂಬಿಯಾದ ನಿಕೋಲಸ್ ಬ್ಯಾರಿಂಟೊಸ್ ಜೊತೆಗೂಡಿ ಕಣಕ್ಕಿಳಿದಿದ್ದ ಬೋಪಣ್ಣ, ಸ್ಪೇನ್‌ನ ಪೆಡೋ ಮಾರ್ಟಿನೆಜ್ -ಮುನಾರ್ ಜೋಡಿ ವಿರುದ್ಧ 5-7, 6-7(5/7)  ಸೆಟ್‌ಗಳಲ್ಲಿ ಸೋತರು.

click me!