ಇಂಡೋ-ಆಸಿಸ್ ಸರಣಿ: 'ನಮಗೆ ರೋಹಿತ್‌ ಶರ್ಮಾ ಭಯವೂ ಇದೆ'

By Web DeskFirst Published Nov 20, 2018, 10:11 AM IST
Highlights

ಆಸ್ಟ್ರೇಲಿಯಾ ತಂಡಕ್ಕೆ ವಿರಾಟ್ ಕೊಹ್ಲಿ ಭಯ ಮಾತ್ರವಲ್ಲ, ರೋಹಿತ್ ಶರ್ಮಾ ಭಯವೂ ಇದೆ. ಹೀಗಾಗಿ ಇವರಿಬ್ಬರನ್ನ ಕಟ್ಟಿಹಾಕಲು ಆಸಿಸ್ ರಣತಂತ್ರ ಮಾಡುತ್ತಿದೆ. ಅಷ್ಟಕ್ಕೂ ಆಸಿಸ್‌ಗೆ ರೋಹಿತ್ ಭಯ ಯಾಕೆ? ಇಲ್ಲಿದೆ ಉತ್ತರ.
 

ಬ್ರಿಸ್ಬೇನ್‌(ನ.20): ‘ಭಾರತ ತಂಡದ ನಾಯಕ ಕೊಹ್ಲಿಯಷ್ಟೇ ಅಲ್ಲ, ಆರಂಭಿಕ ರೋಹಿತ್‌ ಶರ್ಮಾರನ್ನು ನಿಯಂತ್ರಿಸಬೇಕಿದೆ. ಅವರ ಭಯವೂ ನಮಗೆ ಕಾಡುತ್ತಿದೆ’ ಎಂದು ಆಸ್ಪ್ರೇಲಿಯಾ ವೇಗಿ ನೇಥನ್‌ ಕೌಲ್ಟರ್‌ ನೈಲ್‌ ಸೋಮವಾರ ಹೇಳಿದ್ದಾರೆ. 

‘ರೋಹಿತ್‌ ಒಬ್ಬ ಅದ್ಭುತ ಆಟಗಾರ. ಅವರ ಅಂಕಿ-ಅಂಶಗಳೇ ಸಾಕು ಅವರೆಷ್ಟುಅಪಾಯಕಾರಿ ಎನ್ನುವುದನ್ನು ವಿವರಿಸಲು. ಆದರೆ ಅವರನ್ನು ನಿಯಂತ್ರಿಸಲು ನಾವು ಸಿದ್ಧತೆ ಮಾಡಿಕೊಂಡಿದ್ದೇವೆ’ ಎಂದು ನೇಥನ್‌ ಹೇಳಿದ್ದಾರೆ. 

ಇದನ್ನೂ ಓದಿ: ಇಂಡೋ-ಆಸಿಸ್ ಕ್ರಿಕೆಟ್ ಸರಣಿ-ಎಲ್ಲಿ?ಯಾವಾಗ? ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್!

ಭಾರತ-ಆಸೀಸ್‌ ನಡುವಿನ 3 ಪಂದ್ಯಗಳ ಟಿ20 ಸರಣಿಗೆ ಬುಧವಾರ(ನ.21) ಚಾಲನೆ ಸಿಗಲಿದೆ. ಬ್ರಿಸ್ಬೇನ್‌ನಲ್ಲಿ ಮೊದಲ ಪಂದ್ಯ ನಡೆಯಲಿದೆ. ಇನ್ನು ನವೆಂಬರ್ 23 ರಂದು ಮೆಲ್ಬೋರ್ನ್‌ನಲ್ಲಿ 2ನೇ ಹಾಗೂ ನವೆಂಬರ್ 25 ರಂದು ಸಿಡ್ನಿಯಲ್ಲಿ 3ನೇ ಟಿ20 ಪಂದ್ಯ ನಡೆಯಲಿದೆ.

click me!