ಟೆಸ್ಟ್‌: ಪಾಕ್‌ ವಿರುದ್ಧ ನ್ಯೂಜಿಲೆಂಡ್‌ಗೆ 4 ರನ್‌ ಜಯ!

By Web DeskFirst Published Nov 20, 2018, 9:46 AM IST
Highlights

ಪಾಕಿಸ್ತಾನ ಹಾಗೂ ನ್ಯೂಜಿಲೆಂಡ್ ನಡುವಿನ ಮೊದಲ ಟೆಸ್ಟ್ ಅತ್ಯಂತ ರೋಚಕ ಹೋರಾಟಕ್ಕೆ ಸಾಕ್ಷಿಯಾಗಿದೆ. ಲೋ ಸ್ಕೋರ್ ಗೇಮ್‌ನಲ್ಲಿ ನ್ಯೂಜಿಲೆಂಡ್ ಕೇವಲ 4 ರನ್‌ಗಳ ಗೆಲುವು ಸಾಧಿಸಿದೆ. ಈ ಪಂದ್ಯದ ಹೈಲೈಟ್ಸ್ ಇಲ್ಲಿದೆ.

ಅಬುಧಾಬಿ(ನ.20): ಪಾಕ್‌ ವಿರುದ್ಧದ 3 ಪಂದ್ಯಗಳ ಟೆಸ್ಟ್‌ ಸರಣಿಯ ಮೊದಲ ಪಂದ್ಯದಲ್ಲಿ ನ್ಯೂಜಿಲೆಂಡ್‌ 4 ರನ್‌ಗಳ ರೋಚಕ ಗೆಲುವು ಸಾಧಿಸಿದೆ. ಇದು ಟೆಸ್ಟ್‌ ಕ್ರಿಕೆಟ್‌ ಇತಿಹಾಸದಲ್ಲಿ 5ನೇ ಅತ್ಯಂತ ಕಡಿಮೆ ರನ್‌ ಅಂತರದ ಗೆಲುವಾಗಿದೆ. 

 

“In these conditions Pakistan are a very strong side. To get through them in four days and stay in the match and come out with this result must obviously rank as one of our best wins.”

Kane WIlliamson on his side's epic win over Pakistan.

READ👇https://t.co/3ArhxrHHJf pic.twitter.com/9YPNwiUpk6

— ICC (@ICC)

 

ನ್ಯೂಜಿಲೆಂಡ್‌, 3ನೇ ದಿನದಾಟದಲ್ಲಿ 249 ರನ್‌ಗಳಿಗೆ ಆಲೌಟ್‌ ಆಗಿ, ಪಾಕಿಸ್ತಾನಕ್ಕೆ 176 ರನ್‌ಗಳ ಗುರಿ ನೀಡಿತ್ತು. ಸುಲಭ ಸವಾಲು ಸ್ವೀಕರಿಸಿದ ಪಾಕಿಸ್ತಾನ 171 ರನ್‌ಗಳಿಗೆ ಆಲೌp ಆಯಿತು. 2ನೇ ಇನ್ನಿಂಗ್ಸ್‌ನಲ್ಲಿ 5 ವಿಕೆಟ್‌ ಕಿತ್ತ ಭಾರತದ ಮೂಲದ ಅಜಾಜ್‌ ಪಟೇಲ್‌, ಕಿವೀಸ್‌ ಗೆಲುವಿಗೆ ನೆರವಾದರು.

ಮೊದಲ ಇನ್ನಿಂಗ್ಸ್‌ನಲ್ಲಿ ನ್ಯೂಜಿಲೆಂಡ್ ತಂಡ 153 ರನ್‌ಗೆ ಆಲೌಟ್ ಆಗಿತ್ತು. ಇದಕ್ಕುತ್ತರವಾಗಿ ಪಾಕಿಸ್ತಾನ 227 ರನ್‌ ಸಿಡಿಸಿತು. ಹಿನ್ನಡೆಯೊಂದಿಗೆ 2ನೇ ಇನ್ನಿಂಗ್ಸ್ ಆರಂಭಿಸಿದ ನ್ಯೂಜಿಲೆಂಡ್ 249 ರನ್ ಸಿಡಿಸಿತು. ಈ ಮೂಲಕ 176 ರನ್ ಗುರಿ ಪಡೆದ  ಪಾಕಿಸ್ತಾನ 171 ರನ್‌ಗೆ ಆಲೌಟ್ ಆಯಿತು.


ಅತಿ ಕಡಿಮೆ ಅಂತರದ ಗೆಲುವು (ಟೆಸ್ಟ್‌)

ರನ್‌ ಅಂತರ    ತಂಡ    ಎದುರಾಳಿ    ವರ್ಷ

01    ವಿಂಡೀಸ್‌    ಆಸ್ಪ್ರೇಲಿಯಾ    1993

02    ಇಂಗ್ಲೆಂಡ್‌    ಆಸ್ಪ್ರೇಲಿಯಾ    2005

03    ಆಸ್ಪ್ರೇಲಿಯಾ    ಇಂಗ್ಲೆಂಡ್‌    1902

03    ಇಂಗ್ಲೆಂಡ್‌    ಆಸ್ಪ್ರೇಲಿಯಾ    1982

04    ನ್ಯೂಜಿಲೆಂಡ್‌    ಪಾಕಿಸ್ತಾನ    2018

click me!