
ಹಾಂಗ್‌ಝೋ(ಅ.03): ಪುರುಷರ ಡಬಲ್ಸ್ ಬ್ಯಾಡ್ಮಿಂಟನ್‌ನಲ್ಲಿ ವಿಶ್ವ ನಂ.3 ಜೋಡಿ ಸಾತ್ವಿಕ್-ಚಿರಾಗ್ ಶೆಟ್ಟಿ, ಸಿಂಗಲ್ಸ್‌ನಲ್ಲಿ ಕಿದಂಬಿ ಶ್ರೀಕಾಂತ್ ಶುಭಾರಂಭ ಮಾಡಿದ್ದಾರೆ. ಸೋಮವಾರ ಮೊದಲ ಸುತ್ತಿನಲ್ಲಿ ಭಾರತದ ಸಾತ್ವಿಕ್-ಚಿರಾಗ್ ಹಾಂಕಾಂಗ್‌ನ ಚೊವು ಹಿನ್ ಲಾಂಗ್-ಲುಯಿ ಚುನ್ ವಾಯ್ ವಿರುದ್ಧ 21-11, 21-16 ಅಂತರದಲ್ಲಿ ಗೆದ್ದು ಪ್ರಿ ಕ್ವಾರ್ಟರ್ ಫೈನಲ್ ಪ್ರವೇಶಿಸಿತು. ಮಾಜಿ ವಿಶ್ವ ನಂ.1 ಶ್ರೀಕಾಂತ್ ವಿಯೆಟ್ನಾಂನ ಫಾತ್ ಲೆ ಡ್ಯುಕ್ ವಿರುದ್ಧ 21-10, 21-10 ಅಂತರದಲ್ಲಿ ಸುಲಭ ಗೆಲುವು ಸಾಧಿಸಿ ಅಂತಿಮ 32ರ ಸುತ್ತಿಗೇರಿದರು. ಮಿಶ್ರ ಡಬಲ್ಸ್‌ನಲ್ಲಿ ಕೃಷ್ಣ ಪ್ರಸಾದ್-ತನಿಶಾ ಕ್ರಾಸ್ಟೊ ಕೂಡಾ ಪ್ರಿ ಕ್ವಾರ್ಟರ್‌ಗೇರಿದರು.
ಟಿಟಿಯಲ್ಲಿ ಐತಿಹಾಸಿಕ ಕಂಚು
ಟೇಬಲ್ ಟೆನಿಸ್‌ನ ಮಹಿಳಾ ಡಬಲ್ಸ್‌ನಲ್ಲಿ ಭಾರತದ ಸುತೀರ್ಥ ಮುಖರ್ಜಿ-ಐಹಿಕಾ ಮುಖರ್ಜಿ ಐತಿಹಾಸಿಕ ಕಂಚಿನ ಪದಕ ತಮ್ಮದಾಗಿಸಿಕೊಂಡಿದ್ದಾರೆ. ಇದು ಏಷ್ಯಾಡ್ ಇತಿಹಾಸದಲ್ಲೇ ಮಹಿಳಾ ಡಬಲ್ಸ್‌ನಲ್ಲಿ ಭಾರತಕ್ಕೆ ಲಭಿಸಿದ ಮೊದಲ ಪದಕ. ಸೋಮವಾರ ನಡೆದ ಸೆಮಿಫೈನಲ್‌ನಲ್ಲಿ ಭಾರತದ ಜೋಡಿ ಉತ್ತರ ಕೊರಿಯಾ ವಿರುದ್ಧ 3-4 ಅಂತರದಲ್ಲಿ ವೀರೋಚಿತ ಸೋಲನುಭವಿಸಿತು. ಕೊನೆ ಗೇಮ್‌ನಲ್ಲಿ ಎಡವಿದ ಭಾರತೀಯ ಜೋಡಿ ಫೈನಲ್‌ಗೇರುವ ಅವಕಾಶ ಕಳೆದುಕೊಂಡಿತು. ಭಾರತದ ಜೋಡಿ ಕ್ವಾರ್ಟರ್ ಫೈನಲ್‌ನಲ್ಲಿ ಹಾಲಿ ವಿಶ್ವ ಚಾಂಪಿಯನ್, ವಿಶ್ವ ನಂ.2 ಚೀನಾದ ಜೋಡಿಯನ್ನು ಸೋಲಿಸಿತ್ತು.
Asian Games 2023: ಅಥ್ಲೆಟಿಕ್ಸ್‌ನಲ್ಲಿ ಮುಂದುವರೆದ ಭಾರತದ ಪದಕ ಬೇಟೆ
ಭಾರತ ಇದಕ್ಕೂ ಮೊದಲು ಏಷ್ಯಾಡ್‌ನ ಟೇಬಲ್ ಟೆನಿಸ್‌ನಲ್ಲಿ ಗೆದ್ದಿದ್ದು ಕೇವಲ 2 ಪದಕ. 2018ರಲ್ಲಿ ಪುರುಷರ ತಂಡ ಹಾಗೂ ಮಿಶ್ರ ತಂಡ ವಿಭಾಗದಲ್ಲಿ ಭಾರತೀಯರಿಗೆ ಕಂಚು ಲಭಿಸಿತ್ತು.
ಏಷ್ಯಾಡ್ ಕೌತುಕ: ಏಷ್ಯಾಡ್‌ನಲ್ಲಿ 8 ಚಿನ್ನ ಗೆದ್ದಿರುವ ಪಾಕಿಸ್ತಾನ ಪುರುಷರ ಹಾಕಿ ತಂಡ ಈ ಸಲ ಗುಂಪು ಹಂತದಲ್ಲೇ ಹೊರಬಿದ್ದಿದೆ. ಪಾಕ್ ತಂಡ ಸೆಮಿಫೈನಲ್ ಪ್ರವೇಶಿಸಲು ವಿಫಲವಾಗಿರುವುದು ಇದೇ ಮೊದಲು.
CWC 2023: ತುರ್ತು ಕಾರಣಕ್ಕೆ ತಂಡವನ್ನು ತೊರೆದು ಮುಂಬೈಗೆ ಪ್ರಯಾಣಿಸಿದ ವಿರಾಟ್ ಕೊಹ್ಲಿ!
ರಾಷ್ಟ್ರೀಯ ಟೆನಿಸ್: ರಾಜ್ಯದ ಶರ್ಮದಾ, ಮನೀಶ್‌ಗೆ ಜಯ
ನವದೆಹಲಿ: ಇಲ್ಲಿ ಆರಂಭಗೊಂಡ 28ನೇ ರಾಷ್ಟ್ರೀಯ ಟೆನಿಸ್ ಚಾಂಪಿಯನ್‌ಶಿಪ್‌ನಲ್ಲಿ ಕರ್ನಾಟಕದ ಶರ್ಮದಾ ಬಾಲು ಹಾಗೂ ಮನೀಶ್ ಶುಭಾರಂಭ ಮಾಡಿದ್ದಾರೆ. ಮಹಿಳಾ ಸಿಂಗಲ್ಸ್‌ನಲ್ಲಿ 5ನೇ ಶ್ರೇಯಾಂಕಿತೆ ಶರ್ಮದಾ ತೆಲಂಗಾಣದ ಪಾವಣಿ ಪಾಠಕ್ ವಿರುದ್ಧ 6-2, 4-6, 6-1 ಸೆಟ್‌ಗಳಲ್ಲಿ ಜಯಗಳಿಸಿದರು. ಪುರುಷರ ಸಿಂಗಲ್ಸ್‌ನಲ್ಲಿ ಮನೀಶ್, ತಮಿಳುನಾಡಿನ ಸಿದ್ಧಾರ್ಥ್ ಆರ್ಯ ವಿರುದ್ಧ 6-3, 6-4ರಲ್ಲಿ ಗೆದ್ದು 2ನೇ ಸುತ್ತಿಗೇರಿದರು. ಅಂಡರ್-18 ಬಾಲಕರ ವಿಭಾಗದಲ್ಲಿ ಕರ್ನಾಟಕದ ಚಂದನ್ ಶಿವರಾಜ್ ಶುಭಾರಂಭ ಮಾಡಿದರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.