ಏಷ್ಯಾಕಪ್‌ಗೆ 2 ಬ್ಯಾಚ್‌ಗಳಲ್ಲಿ ಟೀಂ ಇಂಡಿಯಾ ಪ್ರಯಾಣ

By Web DeskFirst Published 12, Sep 2018, 9:33 AM IST
Highlights

ಮೊದಲ ಬ್ಯಾಚ್‌ನಲ್ಲಿ 10 ಆಟಗಾರರು ಇದ್ದು, ಹಂಗಾಮಿ ನಾಯಕ ರೋಹಿತ್ ಶರ್ಮಾ, ರಾಯುಡು, ಧೋನಿ, ಪಾಂಡೆ, ಕೇದಾರ್, ಕುಲ್ದೀಪ್, ಚಹಲ್, ಅಕ್ಷರ್ ಪಟೇಲ್, ಭುವನೇಶ್ವರ್ ಮತ್ತು ಖಲೀಲ್ ಅಹ್ಮದ್ ತೆರಳಲಿದ್ದಾರೆ. 

ನವದೆಹಲಿ[ಸೆ.12]: ಯುಎಇನಲ್ಲಿ ಸೆಪ್ಟೆಂಬರ್ 15ರಿಂದ ಆರಂಭವಾಗಲಿರುವ ಏಷ್ಯಾಕಪ್ ಕ್ರಿಕೆಟ್ ಟೂರ್ನಿಗೆ ಭಾರತ ತಂಡ, ಎರಡು ತಂಡಗಳಾಗಿ ತೆರಳಲಿದೆ. ಮೊದಲ ಬ್ಯಾಚ್ ಸೆ.13ರಂದು ಹಾಗೂ 2ನೇ ಬ್ಯಾಚ್ ಸೆ.16ರಂದು ತೆರಳಲಿದೆ.

ಇದನ್ನು ಓದಿ: ಏಷ್ಯಾಕಪ್’ಗೆ ಟೀಂ ಇಂಡಿಯಾ ಪ್ರಕಟ: ಕೊಹ್ಲಿಗೆ ರೆಸ್ಟ್, ಕನ್ನಡಿಗನಿಗೆ ಸ್ಥಾನ

ಮೊದಲ ಬ್ಯಾಚ್‌ನಲ್ಲಿ 10 ಆಟಗಾರರು ಇದ್ದು, ಹಂಗಾಮಿ ನಾಯಕ ರೋಹಿತ್ ಶರ್ಮಾ, ರಾಯುಡು, ಧೋನಿ, ಪಾಂಡೆ, ಕೇದಾರ್, ಕುಲ್ದೀಪ್, ಚಹಲ್, ಅಕ್ಷರ್ ಪಟೇಲ್, ಭುವನೇಶ್ವರ್ ಮತ್ತು ಖಲೀಲ್ ಅಹ್ಮದ್ ತೆರಳಲಿದ್ದಾರೆ. 

ಇದನ್ನು ಓದಿ: ಏಷ್ಯಾಕಪ್ ಟೂರ್ನಿಗೆ ಪಾಕಿಸ್ತಾನ ತಂಡ ಪ್ರಕಟ-ಸ್ಟಾರ್ ಸ್ಪಿನ್ನರ್‌ಗೆ ಕೊಕ್!

ಇನ್ನು 2ನೇ ಬ್ಯಾಚ್‌ನಲ್ಲಿ ಧವನ್, ರಾಹುಲ್, ಪಾಂಡ್ಯ, ದಿನೇಶ್ ಕಾರ್ತಿಕ್, ಬೂಮ್ರಾ ಮತ್ತು ಶಾರ್ದೂಲ್ ಠಾಕೂರ್ ಸೆ.16ರಂದು ತೆರಳಲಿದ್ದಾರೆ. ಸೆ.18ರಂದು ಭಾರತ, ಹಾಂಕಾಂಗ್ ವಿರುದ್ಧ ಸೆಣಸಿದರೆ, ಮರುದಿನವೇ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ಕಣಕ್ಕಿಳಿಯಲಿದೆ.

ಇದನ್ನು ಓದಿ: ಏಷ್ಯಾಕಪ್: ಲಂಕಾ ತಂಡದ ಸ್ಟಾರ್ ಆಟಗಾರ ಔಟ್..!

Last Updated 19, Sep 2018, 9:23 AM IST