ರಾಹುಲ್, ರಿಶಬ್ ಶತಕ ವ್ಯರ್ಥ : ಭಾರತಕ್ಕೆ ರೋಚಕ ಸೋಲು

By Web DeskFirst Published 11, Sep 2018, 11:02 PM IST
Highlights

ಇಂಗ್ಲೆಂಡ್ ವಿರುದ್ಧ ಟೀಂ ಇಂಡಿಯಾ ಅಂತಿಮ ಹಾಗೂ 5ನೇ ಟೆಸ್ಟ್ ನಲ್ಲಿ 345 ರನ್ನುಗಳಿಗೆ ಆಲ್ ಔಟ್ ಆಗಿ 118 ಓಟಗಳಿಂದ ಸೋಲು ಒಪ್ಪಿಕೊಂಡಿತ್ತು. 5 ಟೆಸ್ಟ್ ಗಳ ಸರಣಿಯಲ್ಲಿ ಆಂಗ್ಲ ಪಡೆಗೆ 4-1 ಸರಣಿ ಬಿಟ್ಟುಕೊಟ್ಟಿತು.

ಓವಲ್[ಸೆ.11]:  ಕನ್ನಡಿಗ ಕೆ.ಎಲ್.ರಾಹಲ್ ಆಕರ್ಷಕ ಶತಕ ಹಾಗೂ ವಿಕೇಟ್ ಕೀಪರ್ ರಿಶಬ್ ಪಂಥ್ ಅವರ ಸ್ಪೋಟಕ ಶತಕಗಳು ಭಾರತ ತಂಡವನ್ನು ಗೆಲುವಿನ ಹತ್ತಿರಕ್ಕೆ ಕರೆದೋಯ್ದು ನೋಡುಗರಲ್ಲಿ ಉತ್ಸಾಹ ಹೆಚ್ಚಿಸಿತ್ತು. ಆದರೆ ಇವರಿಬ್ಬರ ವಿಕೇಟ್ ಪತನದ ನಂತರ ಭಾರತಕ್ಕೆ ಸೋಲು ಖಚಿತವಾಯಿತು.

ಇಂಗ್ಲೆಂಡ್ ವಿರುದ್ಧ ಟೀಂ ಇಂಡಿಯಾ ಅಂತಿಮ ಹಾಗೂ 5ನೇ ಟೆಸ್ಟ್ ನಲ್ಲಿ 345 ರನ್ನುಗಳಿಗೆ ಆಲ್ ಔಟ್ ಆಗಿ 118 ಓಟಗಳಿಂದ ಸೋಲು ಒಪ್ಪಿಕೊಂಡಿತ್ತು. 5 ಟೆಸ್ಟ್ ಗಳ ಸರಣಿಯಲ್ಲಿ ಆಂಗ್ಲ ಪಡೆಗೆ 4-1 ಸರಣಿ ಬಿಟ್ಟುಕೊಟ್ಟಿತು.

3 ವಿಕೇಟ್ ಕಳೆದುಕೊಂಡು ಕೊನೆಯ ದಿನದಾಟ ಆರಂಭಿಸಿದ ಭಾರತದ ಆಟಗಾರರು ಆಂಗ್ಲರು ಒಡ್ಡಿದ 464 ರನ್ನುಗಳಿಗೆ ಉತ್ತರವಾಗಿ 2ನೇ ಇನ್ನಿಂಗ್ಸ್ ನಲ್ಲಿ  121 ರನ್ನುಗಳಿಗೆ 5 ವಿಕೇಟ್ ಕಳೆದುಕೊಂಡರೂ ರಾಹುಲ್ ಹಾಗೂ ರಿಶಬ್ ಪಂಥ್ ಅವರ 204 ರನ್ನುಗಳ ಅದ್ಭುತ ಜೊತೆಯಾಟ ಗೆಲುವಿನ ಹತ್ತಿರಕ್ಕೆ ಕರೆದುಕೊಂಡು ಬಂದಿತ್ತು. ಆದರೆ ಇವರಿಬ್ಬರು ವಿಕೇಟ್ ಒಪ್ಪಿಸಿದ ತಕ್ಷಣ ಉಳಿದ ಬಾಲಂಗೋಚಿಗಳು 34 ರನ್ನುಗಳ ಅಂತರದಲ್ಲಿ ಪೆವಿಲಿಯನ್ ಗೆ ತೆರಳಿದರು.

ಇಂಗ್ಲೆಂಡ್ ಪರ ಆ್ಯಂಡರ್ ಸನ್ 45/3, ಕುರ್ರೆನ್, ರಶೀದ್ ತಲಾ 2 ವಿಕೇಟ್ ಪಡೆದು ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ವಿದಾಯ ಪಂದ್ಯದಲ್ಲಿ ಶತಕ ಗಳಿಸಿದ ಅಲಿಸ್ಟ್ ರ್ ಕುಕ್ ಪಂದ್ಯ ಶ್ರೇಷ್ಠ ಪುರಸ್ಕೃತರಾದರೆ, ಸರಣಿಯಲ್ಲಿ 593 ರನ್ ಗಳಿಸಿದ  ವಿರಾಟ್ ಕೊಹ್ಲಿ ಹಾಗೂ 11 ವಿಕೇಟ್, 272 ರನ್ ಗಳಿದ  ಸ್ಯಾಮ್ ಕುರ್ರೆನ್ ಜಂಟಿಯಾಗಿ ಸರಣಿ ಶ್ರೇಷ್ಠ ಪ್ರಶಸ್ತಿ ಹಂಚಿಕೊಂಡರು.

ಸ್ಕೋರ್ ವಿವರ
ಇಂಗ್ಲೆಂಡ್ 332 ಹಾಗೂ 423/8 ಡಿಕ್ಲೇರ್ಡ್
ಭಾರತ 292 ಹಾಗೂ 345/10
[ಕೆ.ಎಲ್. ರಾಹುಲ್ 149, ರಿಶಬ್ ಪಂಥ್ 114 ]

ಪಂದ್ಯ ಶ್ರೇಷ್ಠ : ಅಲಿಸ್ಟರ್ ಕುಕ್
ಸರಣಿ ಶ್ರೇಷ್ಠ : ವಿರಾಟ್ ಕೊಹ್ಲಿ,ಸ್ಯಾಮ್ ಕುರ್ರೆನ್

ಇಂಗ್ಲೆಂಡಿಗೆ 4-1 ಸರಣಿ ಗೆಲುವು

 

 

Last Updated 19, Sep 2018, 9:23 AM IST